Neer Dose Karnataka
Take a fresh look at your lifestyle.

ಲೀಲಾವತಿ ಅಮ್ಮನವರ ಆರೋಗ್ಯ ಸರಿ ಇಲ್ಲ ಎಂದು ತಿಳಿದ ತಕ್ಷಣ ಸುಧಾರಾಣಿ , ಶ್ರುತಿ ಮತ್ತು ಮಾಳವಿಕಾ ಮಾಡಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಮ್ಮ ಕನ್ನಡ ಚಿತ್ರರಂಗದಲ್ಲಿ ಅಂದಿನ ಕಾಲದಲ್ಲಿ ಸ್ಟಾರ್ ನಟಿಯಾಗಿ ಮೆರೆದವರು ಹಾಗೂ ನಂತರದ ದಿನಗಳಲ್ಲಿ ಪೋಷಕ ನಟಿಯಾಗಿ ಕಾಣಿಸಿಕೊಂಡವರು ಇದ್ದಾರೆ. ಅಂಥವರಲ್ಲಿ ಪ್ರಮುಖರು ನಮ್ಮ ಲೀಲಾವತಿ ಅಮ್ಮನವರು. ಹೌದು ಸ್ನೇಹಿತರೆ ಕನ್ನಡ ಚಿತ್ರರಂಗದಲ್ಲಿ ಒಂದು ಕಾಲದಲ್ಲಿ ಬಹುಬೇಡಿಕೆಯ ನಾಯಕಿಯಾಗಿ ಕಾಣಿಸಿಕೊಂಡರು. ಇವರು ರಾಜಕುಮಾರ್ ವಿಷ್ಣುವರ್ಧನ್ ಎಂಜಿಆರ್ ಎನ್ಟಿಆರ್ ಶಿವಾಜಿ ಗಣೇಶನ್ ಜೆಮಿನಿ ಗಣೇಶನ್ ಕಮಲ್ ಹಾಸನ್ ರಜನಿಕಾಂತ್ ಶಂಕರ್ ನಾಗ್ ಚಿರಂಜೀವಿ ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಕಿಚ್ಚ ಸುದೀಪ್ ರವರಂತಹ ಸ್ಟಾರ್ ನಟರೊಂದಿಗೆ ಕೂಡ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

ಅವರು 600ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದು ಅದರಲ್ಲಿ 400ಕ್ಕೂ ಅಧಿಕ ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ಬರೋಬ್ಬರಿ ಐವತ್ತು ವರ್ಷಗಳ ಸಿನಿ ಜೀವನವನ್ನು ನಡೆಸಿದ್ದರು. ಇನ್ನು ಇತ್ತೀಚಿಗಷ್ಟೇ ಮಗನೊಂದಿಗೆ ಸೇರಿ ತಮ್ಮ ಆಸ್ತಿಯನ್ನು ಮಾರಿ ತಮ್ಮ ಆಸ್ತಿಯನ್ನು ಮಾರಿ ಲಾಕ್ಡೌನ್ ನಲ್ಲಿ ಸಂಕಷ್ಟದಲ್ಲಿ ಇದ್ದಂತಹ ಜನರಿಗೆ ಆಹಾರ ಪದಾರ್ಥ ಹಾಗೂ ಆರ್ಥಿಕವಾಗಿ ಸಹಾಯ ಮಾಡಿದ್ದಾರೆ. ತಮ್ಮ ಜೀವನಕ್ಕಿಂತ ಕಷ್ಟದಲ್ಲಿರುವವರ ಜೀವನಕ್ಕೆ ಸಹಾಯ ಮಾಡುವುದು ಅವರ ಹುಟ್ಟುಗುಣ ವೆಂದು ಹಾಗೂ ಅವರ ಹೃದಯ ವೈಶಾಲ್ಯತೆಯನ್ನು ಈ ಘಟನೆ ನಿರೂಪಿಸುತ್ತದೆ.

ಕನ್ನಡ ಚಿತ್ರರಂಗದಲ್ಲಿ ಕರುಣೆಗೆ ಇನ್ನೊಂದು ಹೆಸರೇ ಲೀಲಾವತಿ ಅಮ್ಮನವರು ಎಂದೆನಿಸಿಕೊಳ್ಳುತ್ತಾರೆ. ಇನ್ನು ಇತ್ತೀಚೆಗಷ್ಟೇ ನೀಲಾವತಿ ಅಮ್ಮನವರನ್ನು ನೋಡಲು ಕನ್ನಡದ ಖ್ಯಾತ ನಟಿಯರಾದಂತಹ ಸುಧಾರಾಣಿ ಮಾಳವಿಕಾ ಹಾಗೂ ಶೃತಿಯವರು ಬಂದಿದ್ದರು. ಈ ಮೂವರು ಬಂದು ಲೀಲಾವತಿ ಅಮ್ಮನವರ ಯೋಗಕ್ಷೇಮವನ್ನು ವಿಚಾರಿಸಿದರು. ಈ ಮೂವರು ನಟಿಯರು ಬಂದು ಲೀಲಾವತಿ ಅಮ್ಮನವರ ಯೋಗಕ್ಷೇಮ ವಿಚಾರಿಸಿ ದಂತಹ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ನೀವು ಕೂಡ ಈ ಕೆಳಗೆ ವೀಕ್ಷಿಸಬಹುದಾಗಿದೆ.

Comments are closed.