Neer Dose Karnataka
Take a fresh look at your lifestyle.

ವಿಡಿಯೋ: ಗಾರೆ ಕೆಲಸ ಮಾಡಿ ಇದೀಗ ಟಾಪ್ ಹಾಸ್ಯ ನಟನಾಗಿ ಕಷ್ಟ ಪಟ್ಟು ಬೆವರು ಸುರಿಸಿ ಚಿಕ್ಕಣ್ಣ ಕಟ್ಟಿರುವ ಅರಮನೆ ಹೇಗಿದೆ ಗೊತ್ತಾ??

16

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಟಾಪ್ ಕಾಮಿಡಿ ನಟನಾಗಿ ಮಿಂಚುತ್ತಿರುವವರು ಅದು ನಿಸ್ಸಂಶಯವಾಗಿ ಚಿಕ್ಕಣ್ಣನವರು. ಮೊದಲು ಗಾರಿಗೆ ಕೆಲಸಕ್ಕಾಗಿ ದಿನಕ್ಕೆ ಇನ್ನೂರು ರೂಪಾಯಿ ಸಂಭಾವನೆ ಪಡೆಯುತ್ತಿದ್ದಂತಹ ಚಿಕ್ಕಣ್ಣನವರು ಇಂದು ಕನ್ನಡ ಚಿತ್ರರಂಗದ ಬಹು ಮೆಚ್ಚಿನ ಹಾಸ್ಯ ಕಲಾವಿದರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹೌದು ಸ್ನೇಹಿತರೆ ಮೊದಲು ಕಿರುತೆರೆಯ ವಾಹಿನಿಯಲ್ಲಿ ಚಿಕ್ಕಪುಟ್ಟ ಕಾಮಿಡಿ ಕಲಾವಿದನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದ ಚಿಕ್ಕಣ್ಣನವರಿಗೆ ಮೊದಲ ಯಶಸ್ಸು ಸಿಕ್ಕಿದ್ದು ರಾಕಿಂಗ್ ಸ್ಟಾರ್ ಯಶ್ ನಟನೆಯ ಕಿರಾತಕ ಚಿತ್ರದ ಮೂಲಕ.

ಈ ಚಿತ್ರದ ಯಶಸ್ಸಿನ ನಂತರ ಚಿಕ್ಕಣ್ಣನವರು ಮತ್ತೆಂದು ಹಿಂದಿರುಗಿ ನೋಡಲೇ ಇಲ್ಲ. ಚಿಕ್ಕಣ್ಣ ನಟಿಸಿದ ಚಿತ್ರಗಳಲ್ಲಿ ಸೂಪರ್ ಹಿಟ್ ಚಿತ್ರಗಳು. ಕನ್ನಡ ಚಿತ್ರರಂಗದ ಟಾಪ್ ಸ್ಟಾರ್ ಗಳಾದಂತಹ ಪುನೀತ್ ರಾಜಕುಮಾರ್ ಯಶ್ ಕಿಚ್ಚ ಸುದೀಪ್ ದರ್ಶನ್ ಎಲ್ಲರೊಂದಿಗೂ ನಟಿಸಿದ್ದಾರೆ. ಇಂದು ಕನ್ನಡ ಚಿತ್ರರಂಗದ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ಕಾಮಿಡಿ ನಟನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಇನ್ನು ಇತ್ತೀಚಿಗಷ್ಟೇ ಉಪಾಧ್ಯಕ್ಷ ಎಂಬ ಚಿತ್ರದ ಮೂಲಕ ನಾಯಕ ನಟನಾಗಿ ಕೂಡ ಕಾಣಿಸಿಕೊಳ್ಳಲು ಹೊರಟಿದ್ದಾರೆ ನಮ್ಮ ಚಿಕ್ಕಣ್ಣನವರು. ಇನ್ನು ಸಾಮಾನ್ಯವಾಗಿ ಹಾಸ್ಯ ಕಲಾವಿದನ ಪಾತ್ರಕ್ಕೆ ಪ್ರತಿ ದಿನಕ್ಕೆ 3 ರಿಂದ 4 ಲಕ್ಷ ರೂಪಾಯಿ ಸಂಭಾವನೆ ಪಡೆಯುವ ಚಿಕ್ಕಣ್ಣನವರು ಮನೆಯನ್ನು ಕೂಡ ಚೆನ್ನಾಗಿ ಕಟ್ಟಿಸಿಕೊಂಡಿದ್ದಾರೆ. ಮನೆಯ ಬಳಿ ಫಾರ್ಮ್ ಹೌಸ್ ಅನ್ನು ಕೂಡ ಮಾಡಿರುವುದರಿಂದ ಪ್ರಾಣಿಗಳ ಸಾಕಾಣಿಕೆ ಕೂಡ ಇಲ್ಲಿ ಕಂಡುಬರುತ್ತದೆ. ಕುರಿ ಹಾಗೂ ಕೋಳಿಗಳನ್ನು ಮತ್ತೆ ಹಸುಗಳನ್ನು ಇಲ್ಲಿ ಚಿಕ್ಕಣ್ಣನವರು ತಮ್ಮ ಫಾರಂ ಹೌಸ್ ನಲ್ಲಿ ಸಾಕುತ್ತಿದ್ದಾರೆ ಎಂಬುದು ಕಂಡು ಬಂದಿದೆ. ಸಾಕಷ್ಟು ತಳಿಯ ಗಿಡಗಳನ್ನು ಕೂಡ ಇಲ್ಲಿನ ನೆಟ್ಟಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಚಿಕ್ಕಣ್ಣನವರ ಮನೆಯನ್ನು ನೀವು ಈ ಕೆಳಗಿನ ವಿಡಿಯೋದಲ್ಲಿ ನೋಡಬಹುದಾಗಿದೆ.

Leave A Reply

Your email address will not be published.