Neer Dose Karnataka
Take a fresh look at your lifestyle.

ಕೊನೆಗೂ ಮತ್ತೆ ಕಾಣಿಸ್ಕೊಂಡು ಸಿಹಿ ಸುದ್ದಿ ಹಂಚಿಕೊಂಡ ಡ್ರೋನ್ ಪ್ರತಾಪ್,ಏನಂತೆ ಗೊತ್ತಾ??

2

ನಮಸ್ಕಾರ ಸ್ನೇಹಿತರೇ ಇತ್ತೀಚಿನ ವರ್ಷಗಳಲ್ಲಿ ನೀವು ಡ್ರೋನ್ ಪ್ರತಾಪ್ ಎಂಬ ಹೆಸರನ್ನು ಕೇಳಿರಬಹುದು. ಸಾಮಾಜಿಕ ಜಾಲತಾಣಗಳಲ್ಲಿ ಡ್ರೋಣಾಚಾರ್ಯ ಯುವ ವಿಜ್ಞಾನಿ ಹಾಗೆ-ಹೀಗೆ ಎಂಬ ಬಿರುದುಗಳನ್ನು ಇವನಿಗೆ ಜನರು ನೀಡುತ್ತಿದ್ದದ್ದನ್ನು ಕೇಳಿರಬಹುದು. ಆದರೆ ಇದೇ ಜನರು ಅವನ ಅಸಲಿಯತ್ತು ಬಯಲಾದ ಮೇಲೆ ಅವನಿಗೆ ಚೀಮಾರಿ ಹಾಕಿದ್ದನ್ನು ನೀವು ನೋಡಿರಬಹುದು.

ಹೌದು ಸ್ನೇಹಿತರ ತನ್ನನ್ನು ತಾನು ವಿಜ್ಞಾನಿ ಹಾಗೂ ಡ್ರೋನ್ ನಿರ್ಮಾಣಮಾಡುವ ವಿಜ್ಞಾನಿ ಎಂಬುದಾಗಿ ಸಮಾಜದಲ್ಲಿ ಹೇಳಿಕೊಂಡು ತಿರುಗಾಡುತ್ತಿದ್ದಂತಹ ಪ್ರತಾಪ್ ತನ್ನ ಜೀವನ ಕುರಿತಂತೆ ಸಾಕಷ್ಟು ಕಥೆಗಳನ್ನು ಕಟ್ಟಿ ಜನರಿಗೆ ಅದನ್ನು ನಂಬುವಂತೆ ಮಾಡಿದ್ದ. ನಾನು ಕಷ್ಟದಿಂದ ಓದಿ ವಿಜ್ಞಾನಿಯಾಗಿ ವಿದೇಶಗಳಿಗೆ ಹೋಗಿ ತನ್ನ ಪ್ರತಿಭೆಯನ್ನು ಸಾಬೀತು ಪಡಿಸಿಕೊಂಡು ಬಂದಿದ್ದೇನೆ ಪದಕಗಳನ್ನು ಗೆದ್ದಿದ್ದೇನೆ ಎಂಬುದಾಗಿ ಎಲ್ಲ ಬುರುಡೆ ಬಿಟ್ಟಿದ್ದ. ಆದರೆ ಕೆಲವೇ ವರ್ಷಗಳ ಹಿಂದಷ್ಟೇ ಕೆಲ ಸಂಸ್ಥೆಗಳು ಇವನು ಹೇಳುತ್ತಿದ್ದದ್ದು ಸುಳ್ಳು ಎಂಬುದಾಗಿ ಪುರಾವೆ ಸಮೇತ ಇವನ ಅಸಲಿಯತ್ತನ್ನು ಬಿಚ್ಚಿಟ್ಟಿದ್ದಾರೆ.

ಮಾತ್ರವಲ್ಲದೆ ಇದಕ್ಕೆಲ್ಲ ಆರ್ಥಿಕವಾಗಿ ಸಹಾಯ ಮಾಡಿದಂತಹ ನಟ ನವರಸನಾಯಕ ಜಗ್ಗೇಶ್ ಅವರು ಕೂಡ ಇವನ ಮೇಲೆ ಅಸಮಾಧಾನವನ್ನು ಪಟ್ಟುಕೊಂಡಿದ್ದರು ಮಾತ್ರವಲ್ಲದೆ ಇಂಥವರಿಗೆ ಯಾರಿಗೂ ಕೂಡ ಇನ್ನು ಮುಂದೆ ನಾನು ಸಹಾಯ ಮಾಡುವುದಿಲ್ಲ ಎಂಬ ಶಪಥವನ್ನು ಕೂಡ ಮಾಡಿದ್ದರು. ಎಲ್ಲಾ ಆರೋಪಗಳ ಎದುರಾಗಿ ಪ್ರತಾಪ್ ಏನು ಕೂಡ ಮಾತನಾಡದೆ ತನ್ನನ್ನು ತಾನು ಸಮರ್ಥಿಸಿಕೊಂಡು ಒಂದು ವಿಡಿಯೋವನ್ನು ಮಾತ್ರ ತನ್ನ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಬಿಟ್ಟುಕೊಂಡಿದ್ದ. ವರ್ಷಗಳ ಕಾಲ ಕಾಣೆಯಾಗಿದ್ದ ಡ್ರೋನ್ ಪ್ರತಾಪ್ ಈಗ ಮತ್ತೊಮ್ಮೆ ಗೋಚರಿಸಿದ್ದಾನೆ.

ಹೌದು ಸ್ನೇಹಿತರೆ ಈ ಎಲ್ಲಾ ಆರೋಪಗಳನ್ನು ನಂತರ ಸಂಪೂರ್ಣವಾಗಿ ಕಾಣೆಯಾಗಿದೆ ಅಂತಹ ಡ್ರೋನ್ ಪ್ರತಾಪ್ ಈಗ ಮತ್ತೊಮ್ಮೆ ಕಾಣಿಸಿಕೊಂಡಿದ್ದಾನೆ. ಹೌದು ಸ್ನೇಹಿತರೆ ನಾನು ಲಂಡನ್ ವಿಮಾನ ನಿಲ್ದಾಣದಲ್ಲಿ ಇದ್ದೇನೆ, ಈ ಬಾರಿ ಮತ್ತೆ ಸಾದಿಸಿ ಮುಂದೆ ಬರುತ್ತೇನೆ ಎಂದು ಹೇಳಿದ್ದಾರೆ ಹಾಗೂ ಫೋಟೋವನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿಕೊಂಡಿದ್ದಾನೆ. ನಿಮ್ಮ ಪ್ರಕಾರ ಡ್ರೋನ್ ಪ್ರತಾಪ್ ನಿಜವಾದ ವಿಜ್ಞಾನಿ ಅಥವಾ ಅಲ್ಲವೇ ಎಂಬುದನ್ನು ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ಹಂಚಿಕೊಳ್ಳಿ.

Leave A Reply

Your email address will not be published.