Neer Dose Karnataka
Take a fresh look at your lifestyle.

ಮತ್ತೊಂದು ವಿಶ್ವದಾಖಲೆ ಬರೆದ ದರ್ಶನ್, ಬಿಡುಗಡೆಗೂ ಮುನ್ನವೇ ದಾಖಲೆ ಕುಟ್ಟಿ ಕುಟ್ಟಿ ಪುಡಿ ಮಾಡಿದ ದರ್ಶನ್, ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ ನಮ್ಮ ಕನ್ನಡ ಚಿತ್ರರಂಗದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಅಧ್ಯಾಯವೇ ಒಂದು ವಿಶಿಷ್ಟವಾದದ್ದು. ಸ್ಟಾರ್ ನಟನ ಮಗನಾಗಿದ್ದರೂ ಕೂಡ ಕನ್ನಡ ಚಿತ್ರರಂಗಕ್ಕೆ ಕ್ಲಾಪ್ ಬಾಯ್ ಆಗಿ ತಮ್ಮ ಸ್ವಂತ ಪರಿಶ್ರಮದಿಂದ ಪಾದಾರ್ಪಣೆ ಮಾಡಿ ನಂತರ ಧಾರವಾಹಿಗಳಲ್ಲಿ ಹಾಗೂ ಹಲವಾರು ಚಿತ್ರಗಳಲ್ಲಿ ಚಿಕ್ಕಪುಟ್ಟ ಪಾತ್ರಗಳನ್ನು ನಿರ್ವಹಿಸಿ ನಂತರ ಮೆಜೆಸ್ಟಿಕ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕನಾಗಿ ಪಾದಾರ್ಪಣೆ ಮಾಡುತ್ತಾರೆ.

ಒಮ್ಮೆ ಮೆಜೆಸ್ಟಿಕ್ ಚಿತ್ರದ ಯಶಸ್ಸು ಪಡೆದ ನಂತರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಹಿಂದಿರುಗಿ ನೋಡಿದ್ದೇ ಇಲ್ಲ. ಕಷ್ಟ ಪರಿಶ್ರಮ ಹಾಗೂ ನಿಷ್ಠೆಗೆ ಹೆಸರಾದ ಇನ್ನೊಂದು ಹೆಸರು ದರ್ಶನ್ ತೂಗುದೀಪ್ ಶ್ರೀನಿವಾಸ್ ಎನ್ನಬಹುದು. ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಪ್ರತಿಯೊಂದು ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ಪ್ರತಿ ಬಾರಿ ಸದ್ದು ಮಾಡದೆ ಇರುವುದಿಲ್ಲ. ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಮಾಸ್ ಅಭಿಮಾನಿಗಳನ್ನು ಹೊಂದಿರುವ ಏಕೈಕ ನಟ ಎಂದರೆ ಅದು ಖಂಡಿತವಾಗಿಯೂ ಚಾಲೆಂಜಿಂಗ್ ಸ್ಟಾರ್ ದರ್ಶನ್. ಇತ್ತೀಚೆಗಷ್ಟೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಹಾಗೂ ವಿ ಹರಿಕೃಷ್ಣ ನಿರ್ದೇಶನದ ದರ್ಶನ್ ಅವರ 55ನೇ ಚಿತ್ರ ಚಿತ್ರೀಕರಣಕ್ಕೂ ಮುನ್ನವೇ ವಿಶ್ವದಾಖಲೆ ಮಾಡಿದೆ ಎಂದರೆ ನೀವು ನಂಬುತ್ತೀರಾ ಸ್ನೇಹಿತರೆ ಆದರೂ ನೀವು ನಂಬಲೇಬೇಕು ಇದು ನಿಜವಾಗಿಯೂ ನಡೆದಿದೆ.

ಹೌದು ಸ್ನೇಹಿತರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಶೈಲಜಾ ನಿರ್ಮಾಣದ ವಿ ಹರಿಕೃಷ್ಣ ನಿರ್ದೇಶನದ ದರ್ಶನ್ ರವರ ಹೆಸರಿಡದ d55 ಚಿತ್ರ ಹ್ಯಾಷ್ ಟ್ಯಾಗ್ ಮೂಲಕ ವಿಶ್ವದಲ್ಲೇ ಏಳನೇ ಸ್ಥಾನದಲ್ಲಿ ಟ್ವಿಟರ್ನಲ್ಲಿ ಟ್ರೆಂಡ್ ಆಗುತ್ತಿದೆ. ಇದು ಕನ್ನಡಿಗರು ಕಾಲರ್ ಎತ್ತಿಕೊಂಡು ಹೆಮ್ಮೆಪಡಬೇಕಾದ ಅಂತಹ ವಿಷಯ. ಇದು ದರ್ಶನ್ ಅಭಿಮಾನಿಗಳ ತಾಕತ್ತು ಎಂದು ಹೇಳಬಹುದು. ಇನ್ನು ಕೂಡ ಯಾವುದೇ ಹೆಚ್ಚಿನ ಅನೌನ್ಸ್ಮೆಂಟ್ ನಡೆಯದಿದ್ದರೂ ಕೂಡ ದರ್ಶನ್ ಅವರ 55ನೇ ಚಿತ್ರ ಈಗಾಗಲೇ ಸಾಕಷ್ಟು ಸದ್ದು ಮಾಡುತ್ತಿರುವುದು ಮುಂದಿನ ದಿನಗಳಲ್ಲಿ ಬಿಡುಗಡೆಯ ಸಂದರ್ಭದಲ್ಲಿ ದಾಖಲೆಗಳನ್ನು ಎಲ್ಲಾ ಅಳಿಸಿಹಾಕುವುದರಲ್ಲಿ ಯಾವುದೇ ಅನುಮಾನವಿಲ್ಲ.

Comments are closed.