Neer Dose Karnataka
Take a fresh look at your lifestyle.

ವಿಡಿಯೋ: ಕನ್ನಡದ ಒಂದು ಕಾಲದ ನಟಿ ಮಂಜುಳಾ ರವರ ಮನೆ ಹಾಗೂ ಸಮಾಧಿ ಹೇಗಿದೆ ಗೊತ್ತೇ?? ಮೊದಲ ಬಾರಿಗೆ ತೋರಿಸ್ತೇವೆ ನೋಡಿ.

8

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ 70 ಹಾಗೂ 80ರ ದಶಕದಲ್ಲಿ ಅತ್ಯಂತ ಬಹು ಬೇಡಿಕೆಯ ನಟಿಯಾಗಿ ಕಾಣಿಸಿಕೊಂಡಿದ್ದವರು ಎಂದರೆ ಅದು ಖಂಡಿತವಾಗಿಯೂ ಮಂಜುಳಾ ರವರು. ಹೌದು ಸ್ನೇಹಿತರೆ ಮಂಜುಳಾ ರವರು ಜನಿಸಿದ್ದು ಹೊನ್ನೇನಹಳ್ಳಿ ಎಂಬ ಗ್ರಾಮದಲ್ಲಿ. ತಂದೆ ಇನ್ಸ್ಪೆಕ್ಟರ್ ಆಗಿದ್ದರು. ಕನ್ನಡ ಚಿತ್ರರಂಗದಲ್ಲಿ ಮಂಜುಳಾರವರು ಇದ್ದಷ್ಟು ದಿನ ಎಲ್ಲಾ ಚಿತ್ರಗಳಲ್ಲಿ ಕೂಡ ಯಶಸ್ಸನ್ನು ತಂದುಕೊಟ್ಟಿದ್ದರು. ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್ ಗಳಾಗಿರುವ ರಾಜಕುಮಾರ್ ವಿಷ್ಣುವರ್ಧನ್ ಅಂಬರೀಶ್ ಶಂಕರ್ ನಾಗ್ ಅನಂತ್ ನಾಗ್ ಶ್ರೀನಾಥ ಶೋಕಿಗೆ ಎಲ್ಲರೊಂದಿಗೂ ಕೂಡ ನಾಯಕ ನಟಿಯಾಗಿ ನಟಿಸಿದ್ದರು.

ಬದುಕಿದ್ದು ಕೇವಲ 34 ವರ್ಷವಾದರೂ ಕೂಡ ಬದುಕಿದಷ್ಟು ದಿನ ತಮ್ಮ ಸುತ್ತಮುತ್ತಲ ಜನರಿಗೆ ನಗುವನ್ನೇ ತರಿಸಿದ್ದರು. ಇನ್ನು ಕೇವಲ ನಾಯಕ ನಟಿಯಾಗಿ ಮಾತ್ರವಲ್ಲದೆ ಮಹಿಳಾ ಪ್ರಧಾನತೆ ಹೊಂದಿರುವ ಚಿತ್ರಗಳಲ್ಲಿ ಕೂಡ ನಟಿಸಿ ಕನ್ನಡ ಚಿತ್ರರಂಗದ ಲೇಡಿ ಸೂಪರ್ ಸ್ಟಾರ್ ಎಂಬ ಖ್ಯಾತಿಯನ್ನು ಕೂಡ ಪಡೆದುಕೊಂಡಿದ್ದರು. ಇನ್ನು ಮಂಜುಳಾರವರು ಗ್ಯಾಸ್ ಅಪಘಾತದಲ್ಲಿ ನಿಧನರಾಗಿದ್ದು ಅವರ ಅಭಿಮಾನಿಗಳಿಗೆ ಹಾಗೂ ಕನ್ನಡ ಚಿತ್ರರಂಗಕ್ಕೆ ಇಂದು ಕೂಡ ಮರೆಯಲಾರದ ಘಟನೆಯಾಗಿದೆ.

ಇನ್ನು ಮಂಜುಳಾರವರ ಹೊನ್ನೇನಹಳ್ಳಿ ಯಲ್ಲಿರುವ ಮನೆ ಹಾಗೂ ಅವರ ಸಮಾಧಿಯನ್ನು ನೀವು ಈ ವಿಡಿಯೋದಲ್ಲಿ ನೋಡಬಹುದಾಗಿದೆ. ಇಂದಿಗೂ ಕೂಡ ಇವುಗಳು ಕನ್ನಡ ಚಿತ್ರರಂಗದ ಧೀಮಂತ ನಟಿ ಮಂಜುಳಾರವರ ನೆನಪುಗಳನ್ನು ಮತ್ತೆ ಮರುಕಳಿಸುತ್ತದೆ. ಒಮ್ಮೆ ಸಂಪೂರ್ಣ ನೋಡಿ, ಇವುಗಳನ್ನು ಇಂದಿಗೂ ಕೂಡ ಜೋಪಾನವಾಗಿ ಕಾಪಾಡಿಕೊಳ್ಳಲಾಗಿದೆ. ನೀವು ಕೂಡ ಮಂಜುಳಾರವರ ಅಭಿಮಾನಿ ಆಗಿದ್ದರೆ ಖಂಡಿತವಾಗಿಯೂ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿ.

Leave A Reply

Your email address will not be published.