Neer Dose Karnataka
Take a fresh look at your lifestyle.

ಪುನೀತ್ ಫೈಟ್ ಬಗ್ಗೆ ಅಲ್ಲು ಅರ್ಜುನ್ ಏನ್ ಹೇಳಿದ್ರು ಗೊತ್ತಾ ?? ಅಪ್ಪು ಯಾಕೆ ಎಲ್ಲಾ ಸುದ್ದಿಯಲ್ಲಿ ಇದನ್ನೇ ಹೇಳ್ತಾರೆ??

4

ನಮಸ್ಕಾರ ಸ್ನೇಹಿತರೇ ನಟ ಪುನೀತ್ ರಾಜ ಕುಮಾರ್ ಕನ್ನಡ ಚಿತ್ರರಂಗದ ಹೆಮ್ಮೆ. ದೊಡ್ಮನೆ ಹುಡ್ಗನ ನಟನೆಯ ಬಗ್ಗೆ ಎರಡು ಮಾತಿಲ್ಲ. ಪುನೀತ್ ಅವರನ್ನು ಫಾಲೋ ಮಾಡುವ ಜನರಿಗೇನು ಕಮ್ಮಿಯಿಲ್ಲ. ಕೇವಲ ಕನ್ನಡ ನಾಡಿನಲ್ಲಿ ಮಾತ್ರವಲ್ಲ ಕರ್ಮಾಟಕದ ಹೊರಗೂ ಕೂಡ ಲಕ್ಷಾಂತರ ಅಭಿಮಾನಿಗಳನ್ನು ಗಿಟ್ಟಿಸಿಕೊಂಡವರು ಪವರ್ ಸ್ಟಾರ್ ಪುನೀತ್ ರಾಜಕುಮಾರ್. ಪುನೀತ್ ರಾಜ ಕುಮಾರ್ ಅವರು ನಟಿಸುವ ಪ್ರತಿಯೊಂದು ಸಿನಿಮಾಕ್ಕೂ ತಮ್ಮ ಅದ್ಭುತ ನಟನೆಯ ಮೂಲಕ ಆಯಾ ಪಾತ್ರಕ್ಕೆ ಜೀವ ತುಂಬುತ್ತಾರೆ.

ಅಷ್ಟೇ ಅಲ್ಲ ಅವರ ಡಾನ್ಸ್ ಹಾಗೂ ಫೈಟಿಂಗ್ ಸ್ಟೈಲ್ ಬಗ್ಗೆಯೂ ಪರ ಭಾಷಾ ನಟರೂ ಕೂಡ ಮೆಚ್ಚುಗೆಯ ಮಾತುಗಳನ್ನಾಡುತ್ತಾರೆ. ತಾವು ನೃತ್ಯದಲ್ಲಿ ಎಷ್ಟು ಪವರ ಫುಲ್ ಎಂಬುದನ್ನು ’ಯುವರತ್ನ’ ಸಿನಿಮಾದಲ್ಲಿ ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ ಅಪ್ಪು. ಪುನೀತ್ ಅವರ ಡ್ಯಾನ್ಸ್ ನ್ನು ನೋಡಿ ತೆಲಗು ಸ್ಟಾರ್ ಅಲ್ಲು ಅರ್ಜುನ್, ಅವರ ಹಾಗೆ ತನಗೂ ಡಾನ್ಸ್ ಮಾಡಲು ಬರುವುದಿಲ್ಲ ಎಂದಿದ್ದಾರೆ. ಅಲ್ಲು ಅರ್ಜುನ್ ಕೂಡ ತುಂಬಾ ಉತ್ತಮ ಡ್ಯಾನ್ಸರ್. ಅವರ ’ಅಲಾ ವೈಕುಂಟಪುರಮುಲೋ’ ಚಿತ್ರದ ಹಾಡೂ ಹಾಗೂ ’ಯುವರತ್ನ’ ಚಿತ್ರದ ಒಂದು ಹಾಡು ಒಂದೇ ರೀತಿಯಿದ್ದು ಪುನೀತ್ ಹಾಗೂ ಅಲ್ಲು ಅವರ ಡಾನ್ಸ್ ಸ್ಟೆಪ್ ಗಳಲ್ಲಿಯೂ ಕೂಡ ಹೋಲಿಕೆಯಿದೆ.

ಹಾಗಾಗಿ ಇವರಿಬ್ಬರಲ್ಲಿ ಬೆಸ್ಟ್ ಡ್ಯಾನ್ಸರ್ ಯಾರು ಎಂದೂ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ. ಅಲ್ಲೂ ಅರ್ಜುನ್ ಹಾಗೂ ಪುನೀತ್ ರಾಜ ಕುಮಾರ್ ಅವರು ಕೆಲವು ಪ್ರಾಡೆಕ್ಟ್ ಗಳಿಗೆ ಒಟ್ಟಿಗೆ ಬ್ರಾಂಡಿಂಗ್ ಮಾಡಿದ್ದು, ಇಬ್ಬರೂ ಪರಸ್ಪರ ಭೇಟಿ ಮಾಡಿದಾಗಲೆಲ್ಲ, ಒಬ್ಬರು ಒನ್ನೊಬ್ಬರ ಡಾನ್ಸ್ ಬಗ್ಗೆ ಹೊಗಳುತ್ತಾರೆ. ಅಲ್ಲು ಅರ್ಜುನ್, ಪುನೀತ್ ಅವರ ಡ್ಯಾನ್ಸ್ ಹಾಗೂ ಫೈಟ್ ನ್ನು ಇಷ್ಟಪಡುತ್ತಾರೆ. ಹಾಗೆಯೇ ಅಲ್ಲು ಅರ್ಜುನ್ ಅವರನ್ನು ಅವರ ’ಆರ್ಯ’ ಚಿತ್ರದಿಂದ ಫಾಲೋ ಮಾಡುತ್ತಿರುವ ಪುನೀತ್ ಅವರಿಗೆ ಅಲ್ಲು ಅವರ ಸ್ಟೈಲ್, ಡ್ಯಾನ್ಸ್ ಇಷ್ಟವಂತೆ. ಇನ್ನು ಪುನೀತ್ ಅವರ ಡ್ಯಾನ್ಸ್ ಬಗ್ಗೆ ಸುದೀಪ್ ಕೂಡ ಮೆಚ್ಚುಗೆಯ ಮಾತುಗಳಾಡುತ್ತಾರೆ.

Leave A Reply

Your email address will not be published.