Neer Dose Karnataka
Take a fresh look at your lifestyle.

ವಿಷ್ಣು ಸಿನಿಮಾ “ದೊಡ್ಡ ಮನುಷ್ಯ” ನಿಂತಿದ್ದಕ್ಕೆ ಗೊತ್ತಾ?? ಯಜಮಾನ ಹಿಂದಿಗೆ ಮಾಡಲಾಗಲಿಲ್ಲ ಯಾಕೆ ಗೊತ್ತಾ??

2

ನಮಸ್ಕಾರ ಸ್ನೇಹಿತರೇ ವಿಷ್ಣುವರ್ಧನ್ ಎಂದರೆ ಕನ್ನಡ ಚಿತ್ರರಂಗದಲ್ಲಿ ಸಹನಾ ಮೂರ್ತಿಯ ಪ್ರತಿರೂಪ ಎಂಬ ವ್ಯಕ್ತಿತ್ವದ ಕಲ್ಪನೆಯನ್ನು ಉಳ್ಳವರು. ಅವರ ಸಹನೆ ಹಾಗೂ ತಾಳ್ಮೆ ಕನ್ನಡ ಚಿತ್ರರಂಗದ ಪ್ರತಿಯೊಬ್ಬರಿಗೂ ಸ್ಪೂರ್ತಿದಾಯಕ ವಾದದ್ದು. ಆದರೆ ನಾವು ಇಂದು ಅವರು ಎರಡು ಚಿತ್ರಗಳ ಕುರಿತು ಹೇಳಲು ಹೊರಟಿದ್ದೇವೆ ಸ್ನೇಹಿತರೆ.

ಮೊದಲನೇದಾಗಿ ವಿಷ್ಣುವರ್ಧನ್ ನಟನೆಯ ಯಜಮಾನ ಚಿತ್ರ ಹಿಂದಿಗೆ ಡಬ್ ಆಗಲಿಲ್ಲ ಯಾಕೆ ಎಂಬುದು. ಹೌದು ಸ್ನೇಹಿತರೆ ಈ ಚಿತ್ರದ ನಿರ್ಮಾಪಕ ರೆಹಮಾನ್ ರವರು ಈ ಕುರಿತಂತೆ ಹೇಳಿದ್ದಾರೆ. ಕನ್ನಡದಲ್ಲಿ ಅತ್ಯಂತ ಯಶಸ್ಸನ್ನು ಕಂಡಂತಹ ಈ ಚಿತ್ರ ಹಿಂದಿಯಲ್ಲಿ ಜಿತೇಂದ್ರ ಹಾಗೂ ಅರವಿಂದ್ ಕೌಶಿಕ್ ರವರಿಂದ ಹಕ್ಕುಗಳನ್ನು ಪಡೆಯಲು ಬುಲಾವ್ ಬಂದಿತ್ತಂತೆ. ಹೀಗಾಗಿ ಹಕ್ಕುಗಳನ್ನು ರೆಹಮಾನ್ ರವರು ಹಿಂದಿ ನಿರ್ಮಾಪಕ ಹಾಗೂ ನಿರ್ದೇಶಕರಿಗೆ ಮಾರಿಬಿಟ್ಟಿದ್ದರು. ಇನ್ನು ಇನ್ನೊಂದು ವಿಷಯ ಏನೆಂದರೆ ನಿರ್ಮಾಪಕರು ರೆಹಮಾನ್ ರವರು ವಿಷ್ಣುವರ್ಧನ್ ರವರೊಂದಿಗೆ ಒಳ್ಳೆಯ ಬಾಂಧವ್ಯವನ್ನು ಇಟ್ಟುಕೊಂಡಿದ್ದರಿಂದ ಸಿನಿಮಾ ಮಾಡಲು ಡೇಟ್ ಗಳನ್ನು ಕೊಟ್ಟಿದ್ದರು. ರೆಹಮಾನ್ ರವರು ರವರು ದೊಡ್ಡ ಮನುಷ್ಯ ಚಿತ್ರದ ಟೈಟಲ್ ಕೂಡ ರಿಜಿಸ್ಟರ್ ಮಾಡಿದ್ದರು.

ಮಾತ್ರವಲ್ಲದೆ ಚಿತ್ರದ ಚಿತ್ರೀಕರಣವನ್ನು ಸೆಪ್ಟೆಂಬರ್ ನಿಂದ ಪ್ರಾರಂಭ ಮಾಡಲು ಕೂಡ ಯೋಚಿಸಿದರಂತೆ. ಆದರೆ ನಿರ್ದೇಶಕರಾದ ಎಸ್ ನಾರಾಯಣ್ ರವರು ಚಿತ್ರವನ್ನು ಸೆಪ್ಟೆಂಬರ್ನಲ್ಲಿ ಮಾಡೋದು ಬೇಡ ಸಮಯ ಚೆನ್ನಾಗಿಲ್ಲ ಜನವರಿಯಿಂದ ಪ್ರಾರಂಭ ಮಾಡುವ ಎಂದು ಹೇಳಿದ್ದರಂತೆ. ನಿರ್ದೇಶಕರು ಹೇಳಿದ ಮೇಲೆ ಅದಕ್ಕೆ ಅಡ್ಡ ಮಾತಾಡುವುದು ಏನಿದೆಯೆಂದು ರೆಹಮಾನ್ ರವರು ಕೂಡ ಒಪ್ಪಿಕೊಂಡರು. ಆದರೆ ಜನವರಿ ಬರುವ ಮುಂಚೆಯೇ ಡಿಸೆಂಬರ್ನಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ರವರು ನಮ್ಮನ್ನೆಲ್ಲ ಬಿಟ್ಟು ಬಾರದ ಲೋಕಕ್ಕೆ ಪಯಣ ಬೆಳೆಸಿದ್ದರು. ಹೀಗಾಗಿ ದೊಡ್ಡ ಮನುಷ್ಯ ಚಿತ್ರ ಪೂರ್ಣವಾಗದೆ ಅರ್ಧಕ್ಕೆ ನಿಂತು ಬಿಟ್ಟಿತು. ಕನ್ನಡ ಚಿತ್ರರಂಗದಲ್ಲಿ ವಿಷ್ಣುವರ್ಧನ್ ರವರು ಅಭಿಮಾನಿಗಳ ಹೃದಯ ಸಿಂಹಾಸನದಲ್ಲಿ ಎಂದೂ ಮರೆಯಲಾರದ ವ್ಯಕ್ತಿತ್ವವಾಗಿ ಅಜರಾಮರವಾಗಿ ಉಳಿದುಕೊಂಡರು .

Leave A Reply

Your email address will not be published.