Neer Dose Karnataka
Take a fresh look at your lifestyle.

ಕೊನೆಗೂ ಅಡುಗೆ ಎಣ್ಣೆ ಬೆಳೆಗಳ ಮೇಲೆ ಗಮನ ಹರಿಸಿದ ಕೇಂದ್ರ, ಗ್ರಾಹಕರಿಗೆ ಸಿಹಿ ಸುದ್ದಿ , ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಯಾವುದೇ ವಸ್ತುವಿನ ಮೇಲೆ ನೋಡಿದರೂ ಕೂಡ ಬೆಲೆ ಏರಿಕೆಯ ಹೇರಿಕೆ ಮುಂದುವರೆದಿದೆ. ಅದಕ್ಕೆ ಮುಖ್ಯ ಕಾರಣವಾಗಿರುವುದು ಈ ಮಹಾಮಾರಿ. ಹೌದು ಸ್ನೇಹಿತರೆ ಈ ಮಹಾಮಾರಿಯ ಕಾರಣದಿಂದಾಗಿ ಭಾರತದಾದ್ಯಂತ ಲಾಕ್ಡೌನ್ ಒಂದು ವರ್ಷಕ್ಕೂ ಅಧಿಕ ಕಾಲ ಹೇರಲಾಗಿತ್ತು. ಹಾಗಾಗಿ ವ್ಯಾಪಾರ ವಹಿವಾಟುಗಳಿಗೆ ತಡೆ ಹೇರಲಾಗಿತ್ತು. ಮಾತ್ರವಲ್ಲದೆ ಭಾರತದ ಜನರಿಗೆ ಉಚಿತವಾಗಿ ರೇಷನ್ ಹಾಗೂ ಇತರೆ ಸೌಲಭ್ಯಗಳನ್ನು ನೀಡುವುದರ ಮೂಲಕ ಭಾರತ ಸರ್ಕಾರ ಬೊಕ್ಕಸವನ್ನು ಖರ್ಚುಮಾಡಿತು.

ಆದರೆ ಇದೀಗ ಬರುತ್ತಿರುವ ಸುದ್ದಿಯ ಪ್ರಕಾರ ಭಾರತೀಯರಿಗೆ ಅಡುಗೆ ತೈಲದ ಮೇಲೆ ರಿಯಾಯಿತಿ ದೊರೆಯುವುದರಲ್ಲಿ ಇನ್ನೇನು ಕೆಲವೇ ದಿನಗಳು ಮಾತ್ರ ಉಳಿದಿವೆ ಎಂದು ಹೇಳಲಾಗುತ್ತಿದೆ. ಹೌದು ಸ್ನೇಹಿತರೆ ಈ ಹಿಂದೆ ಆಮದು ಬೆಲೆ ಮೇಲೆ 15% ಟ್ಯಾಕ್ಸ್ ಅನ್ನು ಹೇರಲಾಗುತ್ತಿತ್ತು. ಈಗ ಆ ಟ್ಯಾಕ್ಸ್ ಅನ್ನು 7.5% ಇಳಿಸಲಾಗಿದೆ ಎಂದು ಘೋಷಣೆ ಮಾಡಲಾಗಿದೆ. ಹಾಗಾಗಿ ಭಾರತದಲ್ಲಿ ಅಡುಗೆ ಎಣ್ಣೆಯ ಬೆಲೆ ಮೇಲೆ ಗಮನೀಯ ಮಟ್ಟದ ಬೆಲೆ ಇಳಿಕೆ ಕಾಣಲಿದೆ ಎಂದು ಹೇಳಲಾಗುತ್ತಿದೆ.

ಇನ್ನು ನಮ್ಮ ದೇಶದಲ್ಲಿ ಅಡುಗೆ ಖಾದ್ಯಗಳು ಎಣ್ಣೆ ಉತ್ಪಾದನೆ ಕೇವಲ 70ರಿಂದ 80 ಲಕ್ಷ ಟನ್ ಗಳಷ್ಟು ಮಾತ್ರ. ಆದರೆ ನಮಗೆ ಅಗತ್ಯವಿರುವ ಎಣ್ಣೆಯ ಅಗತ್ಯತೆ ಎಷ್ಟು ಗೊತ್ತಾ ಸ್ನೇಹಿತರೆ ಬರೋಬ್ಬರಿ 25 ಮಿಲಿಯನ್ ಟನ್ ನಷ್ಟು. ಹೀಗಾಗಿ ಹೊರ ದೇಶಗಳಿಂದ ಆಮದು ಮಾಡಿಕೊಳ್ಳುವುದು ಅತ್ಯಗತ್ಯವಾಗಿದೆ. ಇದರಿಂದಾಗಿಯೇ ಸುಂಕದ ಬೆಲೆ ಸೇರಿಸಿ ನಮ್ಮಲ್ಲಿಗೆ ಬರುವಾಗ ಅದರ ಬೆಲೆ ಜಾಸ್ತಿ ಆಗಿರುತ್ತದೆ. ಆದರೆ ಈ ಬಾರಿ ಸುಂಕವನ್ನು ಅರ್ಧಕ್ಕೆ ಅರ್ಧದ ಪ್ರಮಾಣದಷ್ಟು ಕಡಿಮೆ ಮಾಡುವ ಮೂಲಕ ಜನಸಾಮಾನ್ಯರಿಗೆ ಕಡಿಮೆ ಬೆಲೆಯಲ್ಲಿ ಖಾದ್ಯದ ಎಣ್ಣೆ ಸಿಗುವುದು ಖಾತ್ರಿಯಾಗಿದೆ. ಇನ್ನು 7.5% ಕಂದಾಯದ ಕಡಿಮೆ ಬೆಲೆಯ ಎಣ್ಣೆ ಲಭ್ಯ ಕೇವಲ ಸೆಪ್ಟೆಂಬರ್ 30ರ ವರೆಗೆ ಮಾತ್ರ ಎಂದು ಹೇಳಲಾಗುತ್ತಿದೆ. ಹಾಗಾಗಿ ಅಲ್ಲಿ ಒಳಗೆ ಎಷ್ಟು ಬೇಕೋ ಅಷ್ಟು ಪ್ರಮಾಣದ ಎಣ್ಣೆಯನ್ನು ಶೇಖರಿಸಿಟ್ಟುಕೊಳ್ಳುವ ಸಮಂಜಸವಾದುದು ಎಂಬುದು ನಮ್ಮ ಅಭಿಪ್ರಾಯ.

Comments are closed.