Neer Dose Karnataka
Take a fresh look at your lifestyle.

ರಮೇಶ್ ಅರವಿಂದ್,ವಿಷ್ಣು, ಉಪ್ಪಿ ರವರ ಬಗ್ಗೆ ಮಾತನಾಡಿದ ಸುದೀಪ್ ಹೇಳಿದ್ದೇನು ಗೊತ್ತೇ??

3

ನಮಸ್ಕಾರ ಸ್ನೇಹಿತರೇ ಒಬ್ಬರು ಇನ್ನೊಬ್ಬರನ್ನು ಹೊಗಳುವುದು, ಇನ್ನೊಬ್ಬರ ವ್ಯಕ್ತಿತ್ವದ ಬಗ್ಗೆ ಉತ್ತಮ ಮಾತುಗಳನ್ನಾಡುವುದು ಅಥವಾ ಕಷ್ಟ ಕಾಲದಲ್ಲಿ ಸಹಾಯ ಮಾಡಿದವರ ಹೆಸರನ್ನು ಎಲ್ಲರ ಎದುರಲ್ಲಿ ಹೇಳಿ ಅವರನ್ನು ಸ್ಮರಿಸಿಕೊಳ್ಳುವುದು ಇವುಗಳನ್ನ ಯಾರೂ ಮಾಡುವುದೇ ಇಲ್ಲ ಅದರಲ್ಲೂ ಚಿತ್ರರಂಗದಲ್ಲಿ ಒಬ್ಬ ಸ್ಟಾರ್ ನಟ ಇನ್ನೊಬ್ಬ ನಟರ ಬಗ್ಗೆ ಮಾತನಾಡುವುದು ಕಡಿಮೆಯೇ. ಆದರೆ ಕನ್ನಡ ಚಿತ್ರರಂಗ ಕೆಲವೊಮ್ಮೆ ಭಿನ್ನವಾಗಿ ಕಾಣುತ್ತದೆ. ಯಾಕೆಂದರೆ ಇಲ್ಲಿ ಕೆಲವು ನಟರು ಇನ್ನೊಬ್ಬರ ಸಾಧನೆಯನ್ನು ಮೆಚ್ಚಿ ಅವರನ್ನು ಫಾಲೋ ಮಾಡುವವರಿದ್ದಾರೆ. ಅಂಥವರಲ್ಲಿ ನಮ್ಮ ಕಿಚ್ಚ ಸುದೀಪ್ ಮೊದಲಿಗರು.

ಕಿಚ್ಚ ಸುದೀಪ್ ಅವರು ತಾವೇ ಸ್ವತಃ ಸ್ಟಾರ್ ನಟರಾದರೂ ಕೂಡ ತಮ್ಮ ಅಭಿನಯ ಚಕ್ರವರ್ತಿ ಎಂಬ ಹೆಸರು ಬಂದಿದ್ದೆ ಇತರರಿಂದ ಪಡೆದ ಸ್ಪೂರ್ತಿಯಿಂದ ಎಂದೇ ಹೇಳುತ್ತಾರೆ. ಕಿಚ್ಚ ಸುದೀಪ್ ಕಾರ್ಯಕ್ರಮವೊಂದರಲ್ಲಿ ಮಾತನಾಡಿ ನಟ ರಮೇಶ್ ಅರವಿಂದ್ ನನಗೆ ಸ್ಪೂರ್ತಿ ಎನ್ನುತ್ತಾರೆ. ಸಾಮಾನ್ಯವಾಗಿ ಹಾಸ್ಯ ಸಿನಿಮಾವಾಗಿರಲಿ ಅಥವಾ ಪ್ರೇಮ ಕಥನವಾಗಿರಲಿ ಇಂಥ ಕಮರ್ಶಿಯಲ್ ಚಿತ್ರ 25 ವಾರ ಓಡುವುದು ಸಹಜ. ಆದ್ರೆ ರಮೇಶ್ ಅರವಿಂದ್ ಅವರು ಅಳುವಂಥ ಚಿತ್ರವನ್ನೇ 25 ವಾರ ಓಡುವಷ್ಟು ಉತ್ತಮ ಅಭಿನಯ ಎಂದರು.

ಕಿಚ್ಚ ಸುದೀಪ್ ಅವರು ವಿಷ್ಣು ದಾದಾ ಅವರನ್ನು ತುಂಬಾನೇ ಫಾಲೋ ಮಾಡುತ್ತಾರಂತೆ. ಹಾಗೆಯೇ ರವಿ ಚಂದ್ರನ್ ಅವರಿಂದ ಪ್ರೀತಿ ಮಾಡುವುದನ್ನು ಕಲಿತೆ, ಒಂದು ಚಿತ್ರವನ್ನು ಬೇರೆ ಬೇರೆ ರೀತಿ ಮಾದುವುದನ್ನು ಅವರನ್ನು ನೋಡಿ ಕಲಿಬೇಕು ಎಂದರು ಕಿಚ್ಚ. ಇನ್ನು ಸುದೀಪ್ ಅವರು ಹೇಳಿದ ನ್ನೊಂದು ಇಂಟರ್ಸ್ಟಿಂಗ್ ವಿಷಯ ಅಂದ್ರೆ ಉಪೇಂದ್ರ ಅವರ ಬಗ್ಗೆ. ಸುದೀಪ್ ಅವರು ಉಪ್ಪಿಯವರಿಂದ ಕಲಿಯುವುದಕ್ಕೆ ಸಾಕಷ್ಟಿದೆ. ’ನಾನು ನಿರ್ದೇಶಕನಾಗಬೇಕು ಎಂದು ಓಡಾಡುತ್ತಿರುವಾಗ ನನ್ನನ್ನು ನೋಡಿ ಎಲ್ಲಾ ಇದೆ ನಿನಗೆ ನಟನಾಗು’ ಎಂದು ಹೇಳಿದ್ದು ಉಪ್ಪಿ ಸರ್. ಅವರ ಮಾತನ್ನು ಸಿರಿಯಸ್ಸಾಗಿ ತೆಗೆದುಕೊಂಡು ಇಂದು ನಾನು ನಿಮ್ಮ ಎದುರಿನಲ್ಲಿ ಹೀಗೆ ನಿಂತಿದ್ದೇನೆ ಎಂದರು ಸುದೀಪ್. ಇನ್ನುಈ ಸಂದರ್ಭದಲ್ಲಿ ತನ್ನ ಕಷ್ಟ ಕಾಲದಲ್ಲಿ ಹಣ ಸಹಾಯ ಮಾಡಿದ ರಾಕ್ ಲೈನ್ ವೆಂಕಟೇಶ್ ಅವರಿಗೂ ಕೃತಜ್ಞತೆ ಸಲ್ಲಿಸಲು ಮರೆಯಲಿಲ್ಲ ಅಭಿನಯ ಚಕ್ರವರ್ತಿ.

Leave A Reply

Your email address will not be published.