Neer Dose Karnataka
Take a fresh look at your lifestyle.

ಒಂದು ಕಾಲದ ಟಾಪ್ ನಟಿ ಭಾನುಪ್ರಿಯಾ ರವರ ಮಗಳು ಹೇಗಿದ್ದಾರೆ ಗೊತ್ತಾ? ಇವರು ಕೂಡ ಹೀರೊಯಿನ್, ತುಂಬಾ ಫೇಮಸ್.

ನಮಸ್ಕಾರ ಸ್ನೇಹಿತರೇ ಇಂದಿನ ವಿಚಾರದಲ್ಲಿ ನಾವು ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ಕೂಡ ನಟಿಸಿದಂತಹ ಬಹುಭಾಷಾ ತಾರೆ ಯೊಬ್ಬರ ಕುರಿತಂತೆ ಮಾತನಾಡಲು ಹೊರಟಿದ್ದೇವೆ. ಇವರು ಕನ್ನಡದಲ್ಲಿ ಕೂಡ ಹಲವಾರು ಚಿತ್ರಗಳಲ್ಲಿ ನಟಿಸುವ ಮೂಲಕ ಜನಪ್ರಿಯತೆ ಪಡೆದು ಕೊಂಡಿದ್ದಾರೆ. ಹೌದು ಸ್ನೇಹಿತರೆ ನಾವು ಭಾನುಪ್ರಿಯ ರವರ ಕುರಿತಂತ ಹೇಳಲು ಹೊರಟಿದ್ದೇವೆ.

ಇನ್ನು ಇವರ ಕನ್ನಡ ಚಿತ್ರರಂಗದ ಜರ್ನಿಯ ಬಗ್ಗೆ ಹೇಳುವುದಾದರೆ ಇವರು ಕ್ರೇಜಿಸ್ಟಾರ್ ರವಿಚಂದ್ರನ್ ನಟನೆಯ ರಸಿಕ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆ ಮಾಡುತ್ತಾರೆ. ಇನ್ನು ಇವರು ಕದಂಬ ಸಿಂಹಾದ್ರಿಯ ಸಿಂಹ ಚತ್ರಪತಿ ಹೀಗೆ ಹಲವಾರು ಪ್ರಮುಖ ಚಿತ್ರಗಳಲ್ಲಿ ನಟಿಸುವ ಮೂಲಕ ಕೂಡ ತಮ್ಮ ಪಾತ್ರದ ಅಭಿನಯಕ್ಕಾಗಿ ಜನಪ್ರಿಯತೆಯನ್ನು ಗಳಿಸಿಕೊಂಡಿದ್ದಾರೆ. ಇನ್ನು ಇವರು ಮಹಾನ್ ನಟರಾದಂತಹ ಸಾಹಸಸಿಂಹ ವಿಷ್ಣುವರ್ಧನ್ ವಿಕ್ಟರಿ ವೆಂಕಟೇಶ್ ಮೆಗಾಸ್ಟಾರ್ ಚಿರಂಜೀವಿ ಹೇಗೆ ಹಲವಾರು ದೊಡ್ಡ ನಟರೊಂದಿಗೆ ನಟಿಸುವ ಮೂಲಕ ತಮ್ಮ ಪ್ರತಿಭೆಯನ್ನು ಸಾಬೀತು ಪಡಿಸಿಕೊಂಡಿದ್ದಾರೆ.

ಇನ್ನು ಭಾನುಪ್ರಿಯ ರವರ ವೈವಾಹಿಕ ಜೀವನದ ಬಗ್ಗೆ ಹೇಳುವುದಾದರೆ 1998 ರಲ್ಲಿ ಇವರು ಮದುವೆಯಾಗಿ ತಮ್ಮ ಪತಿಯೊಂದಿಗೆ ಅಮೆರಿಕದಲ್ಲಿ ನೆಲೆಸಿದ್ದರು. ಇವರಿಗೆ ಒಬ್ಬ ಹೆಣ್ಣುಮಗಳು ಕೂಡ ಇದ್ದಾರೆ. ಆದರೆ ನಂತರದ ವರ್ಷಗಳಲ್ಲಿ ಇವರಿಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿಬಂದು ಇಬ್ಬರೂ ಕೂಡ ದೂರ ಆಗಿದ್ದಾರೆ. ಇನ್ನು ಈಗ ತಮ್ಮ ಮಗಳೊಂದಿಗೆ ಚೆನ್ನೈನಲ್ಲಿ ನೆಲೆಸಿರುವ ಭಾನುಪ್ರಿಯ ರವರು ಆಗೊಮ್ಮೆ-ಈಗೊಮ್ಮೆ ಚಿತ್ರಗಳಲ್ಲಿ ಪೋಷಕ ನಟಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಿಮಗೂ ಕೂಡ ಭಾನುಪ್ರಿಯ ಅವರ ನಟನೆ ಇಷ್ಟವಾಗಿದೆ ಎಂದರೆ ಕಾಮೆಂಟ್ ಬಾಕ್ಸ್ ಆ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Comments are closed.