Neer Dose Karnataka
Take a fresh look at your lifestyle.

ಯಾವುದೇ ಬ್ಯಾಕ್ ಗ್ರೌಂಡ್ ಇಲ್ಲದೇ, ಒಬ್ಬರೇ ಬೆಳೆದು ಇಂದು ಟಾಪ್ ನಟರಾಗಿರುವ ಟಾಪ್ 5 ನಾಯಕರು ಯಾರ್ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ, ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಜನ ನಟ ನಟಿಯರು ತಮ್ಮ ಕುಟುಂಬದ ಕಲಾ ಹಿನ್ನೆಲೆಯಿಂದ ಬಂದು ನಟನೆಯಲ್ಲಿ ಉತ್ತಮ ಹೆಸರು ಮಾಡಿದವರು. ಆದರೆ ಇನ್ನೂ ಕೆಲವರು ಯಾವುದೇ ನಟನಾ ಹಿನ್ನೆಲೆಯೂ ಇಲ್ಲದೆ ಸ್ವ ಪ್ರಯತ್ನದಿಂದ ಉತ್ತಮ ಕಲಾವಿದರಾದವರು. ಒಂದು ಕುಟುಂಬದ ಯಾವುದಾದರೂ ಸದಸ್ಯರು ಚಿತ್ರರಂಗದಲಿದ್ದಾರೆ ಎಂದರೆ ಚಿತ್ರರಂಗಕ್ಕೆ ಎಂಟ್ರಿ ಕೊಡುವುದು ಸುಲಭ. ಆದರೆ ಇಂಥ ಯಾವುದೇ ಪ್ರಭಾವವಿಲ್ಲದೆ ಸಿನಿಮಾಗಳಲ್ಲಿ ಸಾಧನೆ ಮಾಡುವುದು ಅಷ್ಟು ಸುಲಭವಲ್ಲ. ಇದಕ್ಕೆ ಪರಿಶ್ರಮದ ಜೊತೆಗೆ ಅದೃಷ್ಟ ಕೂಡ ಕೆಲಸ ಮಾಡಬೇಕಾಗುತ್ತದೆ. ಹಾಗಾದ್ರೆ ಕನ್ನಡದಲ್ಲಿ ಲಕ್ ನಿಂದ ಸ್ವಪ್ರಯತ್ನದಿಂದ ಟಾಪ್ ನಟ ಎನಿಸಿಕೊಂಡವಾರ್ಯರು ಬನ್ನಿ ನೋಡೋಣ.

ಉಪೇಂದ್ರ ರಾವ್ ಇವರ ನಿಜವಾದ ಹೆಸರು. ಸಿನಿಮಾಗಳಲ್ಲಿ ಉಪೇಂದ್ರ ಎಂದೇ ಫೇಮಸ್. ರಿಯಲ್ ಸ್ಟಾರ್ ಉಪೇಂದ್ರ ಅವರು ವಿಭಿನ್ನ ಕಥಾ ಚಿತ್ರ ನಿರ್ದೇಶಿಸುವಲ್ಲಿ ಗುರುತಿಸಿಕೊಂಡವರು. ಶಾಲಾ ಕಾಲೇಜು ಹಂತದಲ್ಲಿ ಸಾಕಷ್ಟು ಕಷ್ಟ ಅನುಭವಿಸಿದ ಉಪ್ಪಿಯವರಿಗೆ ಸಿನಿಮಾ ಡೈರೆಕ್ಟರ್ ಆಗಬೇಕು ಎಂಬ ಕನಸು ಇತ್ತು. ಹಾಗೆಯೇ ನಟ ಕಾಶಿನಾಥ್ ಅವರ ಕನಸು ನನಸಾಗಿಸಲು ಜೊತೆ ನಿಂತರು. ‘ತರ್ಲೆ ನನ್ ಮಗ’ ಚಿತ್ರದ ಯಶಸ್ವಿ ಪ್ರದರ್ಶನ ಕಂಡ ಬಳಿಕ ನಟ ಹಾಗೂ ನಿರ್ದೇಶಕರಾಗಿ ನಟ ಉಪೇಂದ್ರ ಗುರುತಿಸಿಕೊಂಡರು.

ಗಣೇಶ್ ಅವರು ನಿರೂಪಣೆ ಮಾಡುವ ಮೂಲಕ ಪರದೆ ಮೇಲೆ ಕಾಣಿಸಿದರು ಇವರಿಗೆ ದೊಡ್ಡ ಬ್ರೇಕ್ ಕೊಟ್ಟಿದ್ದು 2006ರ ಮುಂಗಾರು ಮಳೆ ಸಿನಿಮಾ. ಯಾವ ಹಿನ್ನೆಲೆಯೂ ಇಲ್ಲದೆ ಸ್ವ ಸಾಮರ್ಥ್ಯದಿಂದ ಲಕ್ಷ ಲಕ್ಷ ಅಭಿಮಾನಿಗಳನ್ನು ಸಂಪಡಿಸಿಕೊಂಡ ಹಿರಿಮೆ ಗೋಲ್ಡನ್ ಸ್ಟಾರ್ ಗಣೇಶ್ ಅವರದ್ದು. ಇನ್ನು ದುನಿಯಾ ವಿಜಯ್ ಅವರು ಸಾಕಷ್ಟು ಕಷ್ಟಗಳನ್ನು ಕಂಡವರು. ಸಿನಿಮಾದಲ್ಲಿ ಸೈಡ್ ವಿಲನ್ ಆಗಿ ಕೆಲಸ ಪ್ರಾರಂಭಿಸಿ ಸೂರಿಯ ದುನಿಯಾ ಚಿತ್ರದ ಮೂಲಕ ಕನ್ನಡ ಸಿನಿ ಪ್ರಿಯರ ಮನ ಗೆದ್ದರು. ಇವರೂ ಕೂಡ ತಮ್ಮ ಪ್ರಯತ್ನದಿಂದ ಯಶಸ್ಸನ್ನು ಕಂಡವರು.

ರಕ್ಷಿತ್ ಶೆಟ್ಟಿ ಅವರು ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದವರು. ಸಿನಿಮಾ ಹುಚ್ಚು ಆ ಕೆಲಸವನ್ನು ಬಿಡಿಸಿ ಚಿತ್ರರಂಗಕ್ಕೆ ಕರೆತಂದಿತು. ಇಂದು ಚಿತ್ರರಂಗದಲ್ಲಿ ಹೊಸ ಪ್ರಯೋಗವನ್ನೇನಾದರು ಮಾಡಿ ಯಶಸ್ಸಾದವರು ಎಂದರೆ ಅದು ರಕ್ಷಿತ್ ಶೆಟ್ಟಿ. ಹಾಗೆಯೇ ಯಶ್ ಕೂಡ ಯಾವುದೇ ಕಲಾ ಹಿನ್ನೆಲೆಯನ್ನು ಇಟ್ಟುಕೊಳ್ಳದೆ ಕನ್ನಡ ಚಿತ್ರರಂಗಕ್ಕೆ ಬಂದು ಇದು ಕೆಜಿಎಫ್ ನಂಥ ಚಿತ್ರದ ಮೂಲಕ ಕೇವಲ ಕರ್ನಾಟಕ ದಲ್ಲಿ ಮಾತ್ರವಲ್ಲ ದೇಶದಾದ್ಯಂತ ಸೂಪರ್ ಸ್ಟಾರ್ ಎನಿಸಿಕೊಂಡಿದ್ದಾರೆ.

Comments are closed.