Neer Dose Karnataka
Take a fresh look at your lifestyle.

ತಾವು ಮಾಡಿದ ಆ ಒಂದು ತಪ್ಪಿನಿಂದ ಎಲ್ಲಾ ಅವಕಾಶಗಳನ್ನು ಕಳೆದುಕೊಂಡ ಪೂಜಾ ಗಾಂಧಿ, ಆ ತಪ್ಪು ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಚಿತ್ರರಂಗದಲ್ಲಿ ನಟಿಯರೇ ಆಗಲಿ ನಟನೆ ಆಗಿರಲಿ ಅವರ ಕಾಲ ಬಿದ್ದುಹೋಯಿತು ಎಂದರೆ ಅವರಿಗೆ ಚಿತ್ರರಂಗದಲ್ಲಿ ಬೇಡಿಕೆ ಇರುವುದಿಲ್ಲ ಎಂಬುದು ವರ್ಷಗಳಿಂದಲೂ ನೋಡಿಕೊಂಡು ಬಂದಿರುವ ಸತ್ಯ ಅಂಶವಾಗಿದೆ. ಈ ಮಾತು ಇಂದು ನಾವು ಹೇಳಹೊರಟಿರುವ ನಟಿಗೂ ಹೊರತಾಗಿಲ್ಲ. ಇವರು ಕೂಡ ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದ ಟಾಪ್ ನಟಿಯಾಗಿ ಮಿಂಚಿ ಮೆರೆದವರು ಆದರೆ ಇಂದಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಅವಕಾಶಗಳಿಲ್ಲದೆ ನಟಿಸಲು ಆಗುತ್ತಿಲ್ಲ.

ಹೌದು ಸ್ನೇಹಿತರೆ ನಾವು ಮಾತನಾಡಲು ಹೊರಟಿರುವುದು ಮುಂಗಾರು ಮಳೆ ಖ್ಯಾತಿಯ ಮಳೆ ಹುಡುಗಿ ಪೂಜಾಗಾಂಧಿ ಅವರ ಕುರಿತಂತೆ. ಹೌದು ಸ್ನೇಹಿತರೆ 2006 ರಲ್ಲಿ ಬಿಡುಗಡೆಯಾದಂತಹ ಮುಂಗಾರುಮಳೆ ಕೇವಲ ಕತೆಯಿಂದ ಮಾತ್ರವಲ್ಲದೆ ಹಾಡುಗಳಿಂದಲೂ ಕೂಡ ಸೂಪರ್ ಹಿಟ್ ಚಿತ್ರವಾಗಿ ಕನ್ನಡ ಚಿತ್ರರಂಗದಲ್ಲಿ ಎಂದು ಮರೆಯಲಾಗದಂತಹ ಹೊಸ ದಾಖಲೆಯನ್ನು ನಿರ್ಮಿಸಿತು. ಇಂದಿಗೂ ಕೂಡ ಮುಂಗಾರು ಮಳೆ ಚಿತ್ರದ ಹಾಡುಗಳು ಪ್ರೇಕ್ಷಕರ ಬಾಯಲ್ಲಿ ಗುಣುಗುಣಿಸುತ್ತಿವೆ. ಅಷ್ಟರಮಟ್ಟಿಗೆ ಈ ಚಿತ್ರ ಕನ್ನಡ ಚಿತ್ರರಂಗದಲ್ಲಿ ಯಶಸ್ವಿಯಾಗಿ ಸದ್ದು ಮಾಡಿತ್ತು.

ಈ ಚಿತ್ರದಲ್ಲಿ ನಟಿಸಿ ದಂತಹ ಗೋಲ್ಡನ್ ಸ್ಟಾರ್ ಗಣೇಶ್ ಪೂಜಾ ಗಾಂಧಿ ಹಾಗೂ ಅತಿಥಿ ಪಾತ್ರದಲ್ಲಿ ನಟಿಸಿ ದಂತಹ ದಿಗಂತ್ ಮಂಚಲೆ ಅವರಿಗೂ ಕೂಡ ಕನ್ನಡ ಚಿತ್ರರಂಗದಲ್ಲಿ ಭದ್ರವಾಗಿ ನೆಲೆಯೂರಲು ಬುನಾದಿಯನ್ನು ನಿರ್ಮಿಸಿತು. ಮುಂಗಾರು ಮಳೆ ಚಿತ್ರದ ಯಶಸ್ಸಿನ ನಂತರ ಪೂಜಾಗಾಂಧಿ ಅವರು ಕನ್ನಡ ಚಿತ್ರರಂಗದಲ್ಲಿ ಅಂದು ಟಾಪ್ ನಟರಾಗಿದ್ದಂತಹ ಗೋಲ್ಡನ್ ಸ್ಟಾರ್ ಗಣೇಶ್, ಕ್ರೇಜಿಸ್ಟಾರ್ ರವಿಚಂದ್ರನ್, ಅಜಯ ರಾವ್, ಪ್ರಜ್ವಲ್ ದೇವರಾಜ್ ಹೀಗೆ ಎಲ್ಲ ನಟರೊಂದಿಗೆ ನಟಿಸುವ ಮೂಲಕ ಟಾಪ್ ನಟಿಯಾಗಿ ಕಾಣಿಸಿಕೊಂಡರು. ನಂತರ ತಮಿಳು ತೆಲುಗು ಮಲೆಯಾಳಂ ಬೆಂಗಾಲಿ ಹೀಗೆ ಹಲವಾರು ಭಾಷೆಗಳಲ್ಲಿ ನಟಿಸುವ ಮೂಲಕವೂ ಕೂಡ ಜನಪ್ರಿಯತೆಯನ್ನು ಪಡೆದುಕೊಂಡಂತಹ ನಟಿಯೆಂದರೆ ಪೂಜಾಗಾಂಧಿ.

ಇವೆಲ್ಲದರ ಹಿಂದಿದ್ದ ಮುಖ್ಯಕಾರಣವೆಂದರೆ ಮುಂಗಾರು ಮಳೆ ಚಿತ್ರದ ಬಹುದೊಡ್ಡ ಯಶಸ್ಸು. ಇನ್ನು ಇದಾದನಂತರ ಪೂಜಾಗಾಂಧಿ ಅವರು 2012 ರಲ್ಲಿ ದಂಡುಪಾಳ್ಯ1 ಚಿತ್ರದ ಮೂಲಕ ವಿಭಿನ್ನ ಪಾತ್ರದ ಮೂಲಕ ನಾಯಕ ನಟಿಯಾಗಿ ಕಾಣಿಸಿಕೊಳ್ಳತೊಡಗಿದರು. ದಂಡುಪಾಳ್ಯ 1,2 ಹಾಗೂ 3 ಚಿತ್ರಗಳಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ಪೂಜಾಗಾಂಧಿ ಅವರು. 2012 ರಲ್ಲಿ ಪೂಜಾಗಾಂಧಿ ಅವರು ರಿಯಲ್ ಎಸ್ಟೇಟ್ ಉದ್ಯಮಿ ಆನಂದ್ ಗೌಡ ಎನ್ನುವವರನ್ನು ಪ್ರೀತಿಸಿ ಎಂಗೇಜ್ಮೆಂಟ್ ಕೂಡ ಮಾಡಿಕೊಳ್ಳುತ್ತಾರೆ. ಆದರೆ ಈ ಎಂಗೇಜ್ಮೆಂಟ್ ಸಂಸಾರದ ಒಳಗಿದ್ದ ಹಲವಾರು ವೈಮನಸ್ಯ ಗಳಿಂದಾಗಿ ಮುರಿದುಬೀಳುತ್ತದೆ.

ಇನ್ನು ಇದೆ ಸಂದರ್ಭ ದಲ್ಲಿ ಪೂಜಾಗಾಂಧಿ ಅವರು ಜಿಲೇಬಿ ಎಂಬ ಚಿತ್ರವನ್ನು ನಿರ್ಮಾಣ ಮಾಡಿ ಅದರಲ್ಲಿ ನಷ್ಟ ಅನುಭವಿಸಿ ಆರ್ಥಿಕ ಸಂಕಷ್ಟಕ್ಕೆ ಒಳಗಾಗುತ್ತಾರೆ. ಇದಾದ ನಂತರ ಅವರ ಜನಪ್ರಿಯತೆ ಹಾಗೂ ಬೇಡಿಕೆ ಕನ್ನಡ ಚಿತ್ರರಂಗದಲ್ಲಿ ಗಮನೀಯವಾಗಿ ಕಡಿಮೆಯಾಗುತ್ತದೆ. ಇನ್ನು 2016 ರಲ್ಲಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದಂತಹ ಕನ್ನಡದ ಅತ್ಯಂತ ಶ್ರೀಮಂತ ಹಾಗೂ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡದಲ್ಲಿ ಪೂಜಾಗಾಂಧಿ ಅವರು ಸ್ಪರ್ಧಿಯಾಗಿ ಮನೆಯೊಳಗೆ ಹೋಗುತ್ತಾರೆ.

ಇಲ್ಲೂ ಕೂಡ ಜನಪ್ರಿಯತೆಯನ್ನು ಗಳಿಸಿಕೊಳ್ಳುತ್ತಾರೆ. ಆದರೆ ಚಿತ್ರರಂಗದಲ್ಲಿ ಅವರು ಅದಾದನಂತರ ಕಾಣಿಸಿಕೊಂಡಿದ್ದು ಅತ್ಯಂತ ವಿರಳ. 2018 ರಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದಂತಹ ದಂಡುಪಾಳ್ಯ3 ಚಿತ್ರವೇ ಅವರ ಕೊನೆಯ ಚಿತ್ರ. ಇದಾದ ನಂತರ ಪೂಜಾಗಾಂಧಿ ಅವರು ಕನ್ನಡ ಚಿತ್ರರಂಗದಲ್ಲಿ ಕಾಣಿಸಿಕೊಳ್ಳಲಿಲ್ಲ ಚಿತ್ರರಂಗದಿಂದ ಪೂಜಾಗಾಂಧಿ ಅವರು ದೂರವಾಗಿರಲು ಕಾರಣಗಳೇನು ಹಾಗೂ ಅವರ ಜೀವನದಲ್ಲಿ ನಡೆದ ಘಟನೆಗಳು ಏನು ಎಂಬುದನ್ನು ನಾವು ಸವಿಸ್ತಾರವಾಗಿ ತಿಳಿಯೋಣ ಬನ್ನಿ ಸ್ನೇಹಿತರೆ.

ಹೌದು ಸ್ನೇಹಿತರೆ ಹಲವಾರು ಘಟನೆಗಳು ಪೂಜಾ ಗಾಂಧಿಯವರು ಚಿತ್ರರಂಗದಿಂದ ದೂರವಿರಲು ಕಾರಣ ಎಂಬುದಾಗಿ ಬೊಟ್ಟು ಮಾಡಿ ತೋರಿಸುತ್ತದೆ. ಕೆಲ ಸುದ್ದಿಗಳ ಪ್ರಕಾರ 2018 ರಲ್ಲಿ ಪೂಜಾಗಾಂಧಿ ಅವರು ತಮ್ಮ ಸಂಭಾವನೆಯನ್ನು 40 ಲಕ್ಷ ರೂಪಾಯಿಗಳಿಗೆ ಏರಿಸಿದೆ ಇದಕ್ಕೆ ಕಾರಣ ಎಂದು ಹೇಳಬಹುದಾಗಿದೆ. ಇನ್ನು ಬರಬರುತ್ತಾ ಪೂಜಾಗಾಂಧಿ ಅವರ ತೂಕ ಜಾಸ್ತಿಯಾಗಿದ್ದು ಅವರ ಜನಪ್ರಿಯತೆ ಚಿತ್ರರಂಗದಲ್ಲಿ ಕಡಿಮೆಯಾಗುವುದಕ್ಕೆ ಕಾರಣವಾಯಿತು ಎಂದು ಹೇಳಲಾಗುತ್ತಿದೆ.

ಇನ್ನು ಫೈವ್ ಸ್ಟಾರ್ ಹೋಟೆಲ್ ಒಂದರಲ್ಲಿ ಪೂಜಾಗಾಂಧಿ ಅವರು ಬಿಲ್ಲನ್ನು ಬರಿಸದೆ ಓಡಿಹೋಗಿದ್ದು ಕೂಡ ಅವರ ಇಮೇಜಿಗೆ ಧಕ್ಕೆ ತಂದಿತ್ತು. ಇನ್ನು ಚಿತ್ರರಂಗದ ಜೊತೆಗೆ ರಾಜಕೀಯ ಪಕ್ಷಗಳಲ್ಲಿ ಕೂಡ ಕಾಣಿಸಿಕೊಂಡಿದ್ದು ಅವರ ಜನಪ್ರಿಯತೆಗಳನ್ನು ಮಾಡಿಸಿದ್ದು ಎಂದು ಹೇಳಬಹುದಾಗಿದೆ. ಏನಾದರಾಗಲಿ ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್ ನಟಿಯಾಗಿ ಮೆರೆದಾಡಿದಂತಹ ಪೂಜಾಗಾಂಧಿ ಅವರನ್ನು ಈ ಪರಿಸ್ಥಿತಿಯಲ್ಲಿ ನೋಡಲು ಖಂಡಿತವಾಗಿಯೂ ಬೇಸರವಾಗುತ್ತದೆ. ಮುಂದಿನ ದಿನಗಳಲ್ಲಿ ಪೂಜಾ ಗಾಂಧಿಯವರಿಗೆ ಉತ್ತಮ ಅವಕಾಶಗಳು ದೊರೆಯಲಿ ಎಂದು ಹಾರೈಸೋಣ.

Comments are closed.