Neer Dose Karnataka
Take a fresh look at your lifestyle.

ಕನ್ನಡದಲ್ಲಿ ನಟನೆ ಆರಂಭಿಸಿ ಇಂದು ಟಾಪ್ ನಟಿಯರರಾಗಿರುವವರು ಯಾರ್ಯಾರು ಗೊತ್ತೇ?? ನೀವು ನಂಬಲಾರದ ಹೆಸರುಗಳು ಲಿಸ್ಟಿನಲ್ಲಿ.

10

ನಮಸ್ಕಾರ ಸ್ನೇಹಿತರೇ, ಪ್ರತಿ ಪ್ರತಿಭಾನ್ವಿತ ಕಲಾವಿದನಿಗೆ ತನ್ನ ಪ್ರತಿಭೆಯನ್ನು ತೋರಿಸಲು ಸೂಕ್ತ ಅವಕಾಶ ಸಿಗಬೇಕು. ತಮ್ಮ ನಟನಾ ಕೌಶಲ್ಯವನ್ನು ಪ್ರದರ್ಶಿಸಲು ಬಯಸುವ ಕಲಾವಿದರಿಗೆ, ಭಾಷೆ ಯಾವಾಗಲೂ ಅಡ್ಡಿಯಾಗುವುದಿಲ್ಲ. ಹಾಗಾಗಿ ಇಂದು ಸಿನಿ ಪರದೆಯ ಮೇಲೆ ಮಿಂಚುತ್ತಿರುವ ಕೆಲವು ಪ್ರಸಿದ್ಧ ನಟಿಯರು ತಮ್ಮ ನಟನಾ ವೃತ್ತಿಯನ್ನು ಪ್ರಾದೇಶಿಕ ಚಿತ್ರಗಳಲ್ಲಿ ನಟಿಸುವುದರ ಮೂಲಕವೇ ಶುರು ಮಾಡಿದ್ದು. ಇಂದು ಭಾರತೀಯ ಚಿತ್ರರಂಗದಲ್ಲಿ ಹೆಸರು ಮಾಡಿರುವ ಅನೇಕ ನಟಿಯರು ಕನ್ನಡ ಚಿತ್ರರಂಗದಲ್ಲಿ ಮೊದಲು ಬಣ್ಣ ಹಚ್ಚಿದ್ದು. ಇಂದು ನಾವು ನೋಡುವ ಕೆಲವು ಪ್ರಸಿದ್ಧ ನಟಿಯರು ಕನ್ನಡ ಚಿತ್ರರಂಗದಲ್ಲಿ ತಮ್ಮ ನಟನಾ ವೃತ್ತಿಯನ್ನು ಆರಂಭಿಸಿದರು ಎಂದರೆ ಆಶ್ಚರ್ಯವಾಗಬಹುದು. ಹಾಗಾದರೆ ಯಾರು ಆ ನಟಿಯರು ಬನ್ನಿ ನೋಡೋಣ.

ನಟಿ ರೇಖಾ ಇಂದು ಭಾರತೀಯ ಚಿತ್ರರಂಗದ ಅತ್ಯುತ್ತಮ ನಟಿಯರಲ್ಲಿ ಒಬ್ಬರು. ಭಾನುರೇಖಾ ಗಣೇಶನ್ ಅವರ ಜನ್ಮ ನಾಮಧೇಯ. ಬಾಲಿವುಡ್ ನಲ್ಲಿ ರೇಖಾ ಎಂದೇ ಫೇಮಸ್. ಇದುವರೆಗೆ ಹಲವಾರು ಫಿಲ್ಮ್‌ಫೇರ್ ಮತ್ತು ರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿರುವ ನಟಿ ರೇಖಾ 180 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ, ಈ ಸುಂದರ ಮತ್ತು ಪ್ರತಿಭಾವಂತ ನಟಿ ಕನ್ನಡ ಚಲನಚಿತ್ರದ ಮೂಲಕ ತನ್ನ ನಟನಾ ವೃತ್ತಿಯನ್ನು ಆರಂಭಿಸಿದರು ಎಂಬುದು ನಿಮಗೆ ಗೊತ್ತೇ? ಹೌದು, ರೇಖಾ ಅವರು 1969ರಲ್ಲಿ ಬಿಡುಗಡೆಯಾದ ’ಆಪರೇಷನ್ ಜಾಕ್‌ಪಾಟ್ ನಲಿ ಸಿಐಡಿ 999’ ಚಿತ್ರದಲ್ಲಿ ಡಾ. ರಾಜಕುಮಾರ್ ಅವರ ಜೊತೆ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.

ಇನ್ನು ನಟಿ ಜಯಲಲಿತಾ ಇವರದ್ದು, ರಾಜಕೀಯ ಮತ್ತು ತಮಿಳು ಚಿತ್ರರಂಗ ಎರಡರಲ್ಲೂ ಕೇಳಿಬರುವ ದೊಡ್ಡ ಹೆಸರು. ಆಕೆಯನ್ನು ಪ್ರೀತಿಯಿಂದ ತಲೈವಿ ಎಂದು ಕರೆಯಲಾಗುತ್ತಿತ್ತು. ಜಯಲಲಿತಾಅವರು ಸಿನಿಮಾ ಮತ್ತು ರಾಜಕೀಯ ಎರಡರಲ್ಲೂ ಸಾಧನೆ ಮಾಡಿದ ಅಪರೂಪದ ನಟಿಯಾಗಿದ್ದರು. ರಾಜಕೀಯ ಪ್ರವೇಶಿಸುವುದಕ್ಕೂ ಮೊದಲು, ಅವರು ಅತ್ಯಂತ ಜನಪ್ರಿಯ ನಟಿ. ಆಶ್ಚರ್ಯವೇನೆಂದರೆ ಜಯಲಲಿತಾ ಅವರು 1961 ರಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ’ಶ್ರೀಶೈಲ ಮಹಾತ್ಮೆ’ ಎಂಬ ಚಲನಚಿತ್ರದಲ್ಲಿ ಬಾಲ ದೇವತೆಯ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು.

ದಿವಂಗತ ನಟ ಸೌಂದರ್ಯ ಅವರು ಭಾರತೀಯ ಚಿತ್ರರಂಗದ ಪ್ರತಿಭಾವಂತ ನಟಿಯರಲ್ಲಿ ಒಬ್ಬರಾಗಿದ್ದವರು. ಈಕೆ ಬಹುಭಾಷಾ ತಾರೆ. ಅವರು ಟಾಲಿವುಡ್‌ನಲ್ಲಿ ಹೆಚ್ಚು ಜನಪ್ರಿಯರಾಗಿದ್ದರೂ, 1992 ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರ ’ಗಂಧರ್ವ’ದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುವ ಮೂಲಕ ನಟನೆಯನ್ನು ಆರಂಭಿಸಿದ್ದರು.

ಇನ್ನು ನಟಿ ರಕುಲ್ ಪ್ರೀತ್ ಸಿಂಗ್ ಅವರು ತೆಲುಗು, ತಮಿಳು ಮತ್ತು ಹಿಂದಿ ಚಿತ್ರಗಳಲ್ಲಿ ಹೆಚ್ಚಾಗಿ ನಟಿಸುತ್ತಿದ್ದರೂ ಮೊಟ್ಟ ಮೊದಲ ಬಾರಿಗೆ ಬಣ್ಣ ಹಚ್ಚಿದ್ದು ಕನ್ನಡ ಚಿತ್ರದಲ್ಲಿ. 2009 ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರ ’ಗಿಲ್ಲಿ’ಯಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ನಟನೆಯನ್ನು ಆರಂಬಿಸಿದರು.

ನಿತ್ಯಾ ಮೆನನ್ ದಕ್ಷಿಣ ಭಾರತದ ಪ್ರಸಿದ್ಧ ನಟಿಯರಲ್ಲಿ ಒಬ್ಬರು. ಈ ಪ್ರತಿಭಾವಂತ ನಟಿ ತನ್ನ 17 ನೇ ವಯಸ್ಸಿನಲ್ಲಿ 2006ರಲ್ಲಿ ಬಿಡುಗಡೆಯಾದ ’7 ಒ’ಕ್ಲಾಕ್’ ಎಂಬ ಕನ್ನಡ ಚಿತ್ರದಲ್ಲಿ ಪೋಷಕ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುವ ಮೂಲಕ ತನ್ನ ನಟನಾ ವೃತ್ತಿಯನ್ನು ಆರಂಭಿಸಿದರು.

ಇನ್ನು ಎಲ್ಲರಿಗೂ ಅತ್ಯಂತ ಚಿರಪರಿಚಿತ ನಟಿ ದೀಪಿಕಾ ಪಡುಕೋಣೆ ಬಾಲಿವುಡ್ ನ ಬಹು ಬೇಡಿಕೆಯ ನಟಿಯಾಗಿರುವ ಇವರು ಕನ್ನಡ ಚಲನಚಿತ್ರ ’ಐಶ್ವರ್ಯ’ದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ನಾಯಕಿಯಾಗಿ ನಟಿಸಿ ನಟನಾ ವೃತ್ತಿ ಆರಂಭಿಸಿದ್ರು. ಇದು ಇಂದ್ರಜಿತ್ ಲಂಕೇಶ್ ನಿರ್ಮಿಸಿದ ಚಿತ್ರವಾಗಿದ್ದು 2006 ರಲ್ಲಿ ಬಿಡುಗಡೆಯಾಗಿತ್ತು.

Leave A Reply

Your email address will not be published.