Neer Dose Karnataka
Take a fresh look at your lifestyle.

ಅಸಲಿಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ರವರು ರಾಧಿಕಾ ರವರ ಮದುವೆಯಾಗುವುದರ ಹಿಂದಿನ ಕಾರಣವೇನು ಗೊತ್ತೇ??

18

ನಮಸ್ಕಾರ ಸ್ನೇಹಿತರೇ ನಮ್ಮ ಕನ್ನಡ ಚಿತ್ರರಂಗದಲ್ಲಿ ನಟಿ ರಾಧಿಕಾ ಕುಮಾರಸ್ವಾಮಿ ಅವರ ಜೀವನ ಹಲವಾರು ಜನರಿಗೆ ಇನ್ನೂ ಸರಿಯಾಗಿ ಗೊತ್ತಿಲ್ಲ. ಅವರು ಕುಮಾರಸ್ವಾಮಿ ಅವರನ್ನು ಮದುವೆಯಾಗಿದ್ದು ಯಾಕೆ ಏನಾಯಿತು ಎಂಬ ವಿಷಯವನ್ನು ನಾವು ಇಂದಿನ ವಿಷಯದಲ್ಲಿ ಸಂಪೂರ್ಣವಾಗಿ ತಿಳಿಸುತ್ತೇವೆ ಬನ್ನಿ.

ಸ್ನೇಹಿತರೆ ಕುಮಾರಸ್ವಾಮಿ ಅವರು ಕೇವಲ ಮಾಜಿ ಮುಖ್ಯಮಂತ್ರಿಯಾಗಿ ಜನಪ್ರಿಯ ಜನನಾಯಕನಾಗಿ ಜಾತ ರಾಜಕಾರಣಿಯಾಗಿ ಮಾತ್ರ ಕಾಣಿಸಿಕೊಂಡಿಲ್ಲ. ಬದಲಾಗಿ ಕನ್ನಡ ಚಿತ್ರರಂಗದಲ್ಲಿ ಹಲವಾರು ಸೂಪರ್ ಯಶಸ್ಸಿನ ಚಿತ್ರಗಳನ್ನು ನಿರ್ಮಿಸುವ ಮೂಲಕ ನಿರ್ಮಾಪಕನಾಗಿ ಕೂಡ ಕನ್ನಡ ಚಿತ್ರರಂಗದ ನಂಟನ್ನು ಹೊಂದಿದ್ದಾರೆ. ಆದರೆ ಮಗಳ ವಯಸ್ಸಿನ ರಾಧಿಕಾ ರವರನ್ನು ಈ ಮಧ್ಯದಲ್ಲಿ ಅವರು ಪರಿಚಯ ಮಾಡಿಕೊಳ್ಳುತ್ತಾರೆ. ಪರಿಚಯ ಸ್ನೇಹಕ್ಕೆ ತಿರುಗಿ ಸ್ನೇಹ ಪ್ರೀತಿಗೆ ತಿರುಗುತ್ತದೆ. ಈ ಪ್ರೀತಿ ಸಮಾಜದ ಕಣ್ಣಿಗೆ ಬೇರೆಯಾದ ರೀತಿಗೆ ಕಾಣಿಸುವ ಅಷ್ಟರ ಮಟ್ಟಿಗೆ ಬೆಳೆಯುತ್ತದೆ.

ಹೌದು ಸ್ನೇಹಿತರೆ ಈ ಮಧ್ಯದಲ್ಲಿ ರಾಧಿಕಾ ಕುಮಾರಸ್ವಾಮಿ ಅವರು ಗರ್ಭಿಣಿಯಾಗುತ್ತಾರೆ. ನಂತರ ಕುಮಾರಸ್ವಾಮಿಯವರು ರಾಧಿಕಾ ಅವರನ್ನು ವಿದೇಶಕ್ಕೆ ಕಳಿಸಿರುತ್ತಾರೆ. ಇದಾದ ಹಲವಾರು ವರ್ಷಗಳ ಕಾಲ ರಾಧಿಕಾ ಕುಮಾರಸ್ವಾಮಿ ಅವರು ತಮ್ಮ ಮಗಳು ಶಮಿಕಾ ಜೊತೆಗೆ ವಿದೇಶದಲ್ಲಿ ನೆಲೆಸಿರುತ್ತಾರೆ. ಒಮ್ಮೆಲೆ ಕಣ್ಮರೆಯಾದಂತಹ ರಾಧಿಕಾ ರವರ ಕುರಿತಂತೆ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಸುದ್ದಿಗಳು ಹರಿದಾಡಲಾರಂಭಿಸುತ್ತವೆ. ನಂತರ ಹಲವಾರು ವರ್ಷಗಳ ನಂತರ ಮತ್ತೊಮ್ಮೆ ಭಾರತಕ್ಕೆ ಅದರಲ್ಲೂ ಕರ್ನಾಟಕಕ್ಕೆ ಬಂದು ನೆಲೆಸುತ್ತಾರೆ ನಮ್ಮ ರಾಧಿಕಾ ಕುಮಾರಸ್ವಾಮಿ. ಆದರೆ ಸಾಕಷ್ಟು ವರ್ಷಗಳಿಂದ ಕಾಣೆಯಾಗಿದ್ದ ಅಂತಹ ರಾಧಿಕಾ ರವರು ಮದುವೆಯಾಗಿ ಬಂದಿರುವುದು ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡಿತ್ತು. ರಾಧಿಕಾ ರವರು ತಮ್ಮ ಹೆಸರಿನ ಮುಂದೆ ಕೆ ಸ್ವಾಮಿ ಎಂಬ ಸರ್ ನೇಮ್ ಇಟ್ಟುಕೊಂಡಿದ್ದರು. ಹಲವಾರು ವರ್ಷಗಳ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಕುಮಾರಸ್ವಾಮಿ ಅವರೊಂದಿಗಿನ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಇದ್ದಂತಹ ಹಲವಾರು ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

Leave A Reply

Your email address will not be published.