Neer Dose Karnataka
Take a fresh look at your lifestyle.

ಎಲ್ಲಾ ಸವಾಲುಗಳನ್ನು ಮೆಟ್ಟಿ ನಿಂತ ಸೂರ್ಯಕಾಂತ್ ರವರಿಗೆ ಭಾವನಾತ್ಮಕ ಉಡುಗೊರೆ, ಕಣ್ಣಂಚಲ್ಲಿ ನೀರು ತರಿಸಿದ ವೇದಿಕೆ

4

ನಮಸ್ಕಾರ ಸ್ನೇಹಿತರೇ ಕೆಲವರಿಗೆ ತಮ್ಮ ದೇಹದಲ್ಲಿ ಹುಟ್ಟಿನಿಂದ ಕೆಲವು ನ್ಯೂನ್ಯತೆಗಳಿರುತ್ತವೆ. ಆದರೆ ಅವುಗಳನ್ನು ಮೆಟ್ಟಿ ನಿಂತು ಸಾಮಾನ್ಯ ಜನರೂ ಮಾಡಲಾರದಂತ ಸಾಧನೆಗಳನ್ನು ಮಾಡಿದವರು ಇದ್ದಾರೆ. ಕ್ರೀಡೆ, ಸಿನಿಮಾ, ಹಾಡು, ನೃತ್ಯ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿಯೂ ತಮ್ಮ ಸಾಧನೆಯಿಂದ ತಮಗೆ ನ್ಯೂನ್ಯತೆ ಇದೆ ಅನ್ನೊದನ್ನ ಮರೆತವರಿದ್ದಾರೆ. ಇಂಥವರು ಎಲ್ಲ ಅಂಗಗಳೂ ಸರಿಯಾಗಿದ್ದೂ ಏನನ್ನೂ ಮಾಡದೇ ಜೀವನ ವ್ಯರ್ಥ ಮಾಡುತ್ತಾರಲ್ಲ, ಅಂಥವರಿಗೆ ದೊಡ್ಡ ಪಾಠ, ಇತರರಿಗೆ ಮಾದರಿ.

ಸ್ನೇಹಿತರೆ, ಎಸ್ ಪಿ ಬಾಲಸುಬ್ರಹ್ಮಣ್ಯ ಅವರ ಸ್ಮರಣಾರ್ಥ ಎದೆ ತುಂಬಿ ಹಾಡುವೆನು ಕಾರ್ಯಕ್ರಮವನ್ನು ಮತ್ತೆ ಆರಂಭಿಸಿ ಹೊಸ ಕಂಠಕ್ಕೆ ವೇದಿಕೆ ಒದಗಿಸಿಕೊಡುತ್ತಿರುವುದು ನಿಮಗೆ ಗೊತ್ತೇ ಇದೆ. ಈ ಬಾರಿ ಸಾಕಷ್ಟು ವಿಭಿನ್ನತೆಗಳಿವೆ. ಅದರಲ್ಲೂ ಈ ಕಾರ್ಯಕ್ರಮದ ಮೆರುಗನ್ನು ಇನ್ನಷ್ಟು ಹೆಚ್ಚಿಸಿದ್ದು ಕಲ್ಬುರ್ಗಿಯಿಂದ ಬಂದ ಗಾಯಕ ಸೂರ್ಯಕಾಂತ್. ಇವರು ಒಬ್ಬ ಉತ್ತಮ ಗಾಯಕ. ಇವರು ಇತರ ಎಲ್ಲಾ ಗಾಯಕರಿಗಿಂತ ವಿಭಿನ್ನ. ಹೇಗೇ ಅಂತಿರಾ! ಸೂರ್ಯಕಾಂತ್ ಅವರಿಗ್ ಸರಳವಾಗಿ ಪದಗಳ ಉಚ್ಛಾರಣೆ ಮಾಡಲು ಸಾಧ್ಯವಾಗುವುದಿಲ್ಲ. ಆದರೆ ಇದು ಅವರ ಗಾಯನದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂಬುದೇ ವಿಶೇಷ!

ಸೂರ್ಯಕಾಂತ್ ಅವರು ತಮ್ಮ ಆತ್ಮವಿಶ್ವಾಸದಿಂದಲೇ ಗಾಯನವನ್ನು ಕಲಿತಿದ್ದು. ಇವರು ಆಡಿಶನ್ ನಲ್ಲಿಯೇ ತೀರ್ಪುಗಾರರ ಮನಸ್ಸನ್ನು ಗೆದ್ದಿದ್ದು ಈ ವಾರ ಅವರಿಗೊಂದು ಭಾವನಾತ್ಮಕ ಉಡುಗೊರೆ ನೀಡಿತ್ತು ಎದೆತುಂಬಿ ಹಾಡುವೆನು ವೇದಿಕೆ. ಹೌದು ಸ್ನೇಹಿತರೆ ಸೂರ್ಯಕಾಂತ ಅವರ ತಾಯಿ ಕೂಲಿ ಮಾಡಿ ಮಕ್ಕಳನ್ನು ಸಾಕಿದ್ದಾರೆ. ಸೂರ್ಯಕಾಂತ್ ಅಂಥ ಪ್ರತಿಭೆಯನ್ನು ಹೆತ್ತ ತಾಯಿತನ್ನ ವೇದಿಕೆ ಮೇಲೆ ಕರೆತಂದು ಸೂರ್ಯಕಾಂತ್ ಅವರಿಗೆ ಸರ್ಪ್ರೈಸ್ ನೀಡಲಾಗಿತ್ತು. ಇನ್ನು ಮುಂದೆಯೂ ಕೂಡ ಸೂರ್ಯಕಾಂತ್ ಅವರಿಗೆ ಇದೇ ರೀತಿಯ ಪ್ರೋತ್ಸಾಹ ಕೊಡಲಿದ್ದಾರೆ ಕನ್ನಡಿಗರು.

Leave A Reply

Your email address will not be published.