Neer Dose Karnataka
Take a fresh look at your lifestyle.

ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ಅಜಿತ್ ಹಾಗೂ ಗಾಯಕಿ ಇಂಪನ ಜೋಡಿಯ ಮದುವೆಯ ಸುಂದರ ಕ್ಷಣಗಳನ್ನು ನೋಡಿ,

ನಮಸ್ಕಾರ ಸ್ನೇಹಿತರೇ ಇತ್ತೀಚಿಗೆ ಲಾಕ್ಡೌನ್ ಸಂದರ್ಭದಲ್ಲಿ ಹಲವಾರು ಸೆಲೆಬ್ರಿಟಿಗಳು ಈ ಸಮಯವನ್ನು ತಮ್ಮ ಮದುವೆಗೆ ಅಂತಾನೆ ಮೀಸಲಿಟ್ಟಿದ್ದಾರೆ ಅಂತ ಅನ್ಸುತ್ತೆ. ಇತ್ತೀಚಿಗಷ್ಟೇ ಕನ್ನಡ ಕಿರುತೆರೆಯ ಸೂಪರ್ ಜೋಡಿಗಳು ಆದಂತಹ ಚಂದನ್ ಗೌಡ ಹಾಗೂ ಕವಿತ ಗೌಡರವರು ಮದುವೆಯಾಗಿದ್ದರು. ನಂತರ ನಟಿ ಪ್ರಣೀತಾ ಸುಭಾಷ್ ಯಾಮಿ ಗೌತಮ್ ಹೀಗೆ ಹಲವಾರು ಮಂದಿ ಸೆಲೆಬ್ರಿಟಿಗಳು ಈ ಸಮಯದಲ್ಲಿ ಸರಳವಾಗಿ ವಿವಾಹವಾಗುವುದರ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಈಗ ಈ ಸರದಿಗೆ ಮತ್ತೊಬ್ಬ ಕನ್ನಡದ ಸೆಲೆಬ್ರಿಟಿ ಜೋಡಿ ಕಾಲಿಟ್ಟಿದೆ ಎಂದು ಹೇಳಬಹುದಾಗಿದೆ. ಹೌದು ಸ್ನೇಹಿತರೆ ನಟ ಅಜಿತ್ ಜಯರಾಜ್ ಹಾಗೂ ಗಾಯಕಿ ಇಂಪನಾ ಇಬ್ಬರು ಕೂಡ ನಿನ್ನಯಷ್ಟೇ ವಿವಾಹವಾಗುವ ಮೂಲಕ ವೈವಾಹಿಕ ಜೀವನಕ್ಕೆ ಸಂತೋಷವಾಗಿ ಕಾಲಿಟ್ಟಿದ್ದಾರೆ. ಹೌದು ಸ್ನೇಹಿತರೆ ನಟ ಅಜಿತ್ ಜಯರಾಜ ಈ ಹಿಂದೆ ಬೆಂಗಳೂರಿನ ಡಾನ್ ಆಗಿದ್ದ ಎಂ ಪಿ ಜೈರಾಜ್ ಅವರ ಏಕೈಕ ಪುತ್ರ. ಇನ್ನು ಇಂಪನಾ ಜಯರಾಜ್ ಅವರ ಕುರಿತಂತೆ ನಿಮಗೆಲ್ಲಾ ಗೊತ್ತೇ ಇದೆ ಸರಿಗಮಪ ಸಿಂಗಿಂಗ್ ಶೋ ನಲ್ಲಿ ತಮ್ಮದೇ ಆದಂತಹ ಹಾಡುಗಾರಿಕೆಯ ಚಾತುರ್ಯತೆ ಮೂಲಕ ಕನ್ನಡಿಗರ ಮನಗೆದ್ದಂತಹ ಪ್ರತಿಭಾನ್ವಿತ ಗಾಯಕಿ.

ಇಬ್ಬರು ಕೂಡ ನಿನ್ನೆಯಷ್ಟೇ ಗುರುಹಿರಿಯರ ಸಮ್ಮುಖದಲ್ಲಿ ಸರಳವಾಗಿ ವಿವಾಹವಾಗುವುದರ ಮೂಲಕ ಮದುವೆಯೆಂಬ ಬಂಧನದಲ್ಲಿ ಬಿಗಿಯಾಗಿದ್ದಾರೆ. ಅಜಿತ್ ಜಯರಾಜ್ ಇನ್ನು ಕೂಡ ಕನ್ನಡ ಚಿತ್ರರಂಗದಲ್ಲಿ ಪಾದಾರ್ಪಣೆ ಮಾಡಲು ತಯಾರಿಗಳನ್ನು ನಡೆಸುತ್ತಿದ್ದು ಮುಂದಿನ ದಿನಗಳಲ್ಲಿ ಚಿತ್ರರಂಗದಲ್ಲಿ ಸಕ್ರಿಯವಾಗಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಅಜಿತ್ ಜಯರಾಜ್ ಹಾಗೂ ಇಂಪನಾ ಜಯರಾಜ ಅವರ ಮದುವೆ ಫೋಟೋಗಳು ಹಾಗೂ ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ ಅಭಿಮಾನಿಗಳು ಇವರಿಬ್ಬರಿಗೆ ಮದುವೆಯ ಶುಭಾಶಯಗಳನ್ನು ಕೋರಿದ್ದಾರೆ. ಇನ್ನು ಅಜಿತ್ ಜಯರಾಜ್ ಹಾಗೂ ಇಂಪನ ಜಯರಾಜ್ ಅವರ ಮದುವೆಯ ಫೋಟೋಗಳನ್ನು ಹಾಗೂ ವಿಡಿಯೋ ತುಣುಕುಗಳನ್ನು ನೀವು ಕೂಡ ಇಲ್ಲಿ ಕೆಳಗಡೆ ನೋಡಬಹುದಾಗಿದೆ.

Comments are closed.