Neer Dose Karnataka
Take a fresh look at your lifestyle.

ಮತ್ತೊಮ್ಮೆ ವೈರಲ್ ಆದ ಮೇಘನ್ ರಾಜ್ ವರ್ಕ್ ಔಟ್ ಮಾಡುತ್ತಿರುವ ವಿಡಿಯೋ, ಹೇಗಿದೆ ಗೊತ್ತಾ ಮೇಘನಾ ರವರ ತಯಾರಿ.

11

ನಮಸ್ಕಾರ ಸ್ನೇಹಿತರೇ ಮೇಘನರಾಜ್ ರವರು ಚಿರು ಸರ್ಜಾ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ನಂತರ ಚಿರು ಸರ್ಜಾ ರವರ ಅಕಾಲಿಕ ಅಗಲಿಕೆ ಮೇಘನಾರಾಜ್ ಜೀವನದಲ್ಲಿ ಸಾಕಷ್ಟು ಬದಲಾವಣೆಗಳನ್ನು ಉಂಟುಮಾಡಿತು. ಹೌದು ಸ್ನೇಹಿತರೆ ಚಿರುಸರ್ಜ ಅವರನ್ನು ಕಳೆದುಕೊಂಡ ಮೇಲೆ ಮೇಘನಾ ರಾಜ್ ಅವರು ಯಾವುದೇ ಸಿನಿಮಾ ಸಂಬಂಧಿತ ಕಾರ್ಯಕ್ರಮಗಳಲ್ಲಿ ಸಿನಿಮಾಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಇದಾದ ನಂತರ ಅವರ ಬೇಸರದ ಜೀವನದಲ್ಲಿ ಸಂತೋಷವನ್ನು ಮೂಡಿಸಿದ್ದು ಅವರ ಮಗನಾದ ಜೂನಿಯರ್ ಚಿರು ಸರ್ಜಾ ರವರ ಜನನ.

ಜೂನಿಯರ್ ಚಿರು ಸರ್ಜಾ ರವರ ಆಗಮನದ ನಂತರ ಕೇವಲ ಮೇಘನರಾಜ ರವರ ಜೀವನದಲ್ಲಿ ಮಾತ್ರವಲ್ಲದೆ ಸರ್ಜಾ ಕುಟುಂಬದಲ್ಲಿ ಕೂಡ ಸಂತೋಷದ ಮನೆಮಾಡಿತ್ತು. ಇನ್ನು ಹಲವಾರು ಸಮಯಗಳ ಕಾಲ ಚಿತ್ರರಂಗದಿಂದ ದೂರವಿದ್ದ ಮೇಘನರಾಜ್ ಅವರು ಕೊನೆಗೂ ಕೂಡ ಮನೋರಂಜನೆ ಕ್ಷೇತ್ರಕ್ಕೆ ಮತ್ತೆ ಕಂಬ್ಯಾಕ್ ಮಾಡಲು ಸೂಚನೆ ನೀಡಿದ್ದಾರೆ. ಹೌದು ಸ್ನೇಹಿತರೆ ಇತ್ತೀಚಿಗಷ್ಟೇ ಕೆಲವಾರು ಸುದ್ದಿಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತಂತೆ ಸಾಕಷ್ಟು ಸುದ್ದಿ ಹರಿದಾಡಿತ್ತು.

ಇನ್ನು ಇದಕ್ಕೆ ಪೂರಕವೆಂಬಂತೆ ಇತ್ತೀಚಿಗಷ್ಟೇ ಕೆಲ ಸಂದರ್ಶನದಲ್ಲಿ ನಾನು ಕೆಲಸಮಯದಲ್ಲೇ ಚಿತ್ರರಂಗಕ್ಕೆ ವಾಪಸ್ ಆಗಲಿದ್ದೇನೆ ಎಂಬ ಮಾತನ್ನು ಸ್ವತಃ ಮೇಘನರಾಜ್ ರವರು ಕೂಡ ಹೇಳಿದ್ದರು. ಇತ್ತೀಚೆಗಷ್ಟೇ ಮೇಘನರಾಜ್ ರವರು ಇದಕ್ಕೆ ತಯಾರಿ ಎಂಬಂತೆ ಜಿಮ್ ನಲ್ಲಿ ವರ್ಕೌಟ್ ಮಾಡಲು ಕೂಡ ಪ್ರಾರಂಭಿಸಿದ್ದಾರೆ. ಹೀಗಾಗಿ ಮೇಘನರಾಜ್ ರವರು ಕನ್ನಡ ಚಿತ್ರರಂಗಕ್ಕೆ ಮತ್ತೆ ನಟಿಸಲು ಪ್ರಾರಂಭಿಸುವುದು ನಿಜ ಎನ್ನುವುದು ಕನ್ಫರ್ಮ್ ಆಗಿದೆ. ಒಂದು ಕಾಲದಲ್ಲಿ ಕನ್ನಡದ ಅತ್ಯಂತ ಬಹುಬೇಡಿಕೆ ನಟಿಯಾಗಿದ್ದ ಮೇಘನರಾಜ್ ರವರು ಈಗ ಮತ್ತೆ ನಟಿಸುವ ಮೂಲಕ ಅದೇ ಸ್ಥಾನವನ್ನು ಪಡೆದುಕೊಳ್ಳಲಿ ಎಂಬುದು ಅವರ ಅಭಿಮಾನಿಗಳ ಹಾರೈಕೆ. ಇನ್ನು ಮೇಘನಾರಾಜ್ ರವರು ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿರುವ ವಿಡಿಯೋ ಸಾಕಷ್ಟು ವೈರಲ್ ಆಗಿದ್ದು ನೀವು ಕೂಡ ಈ ಕೆಳಗಡೆ ನೋಡಬಹುದಾಗಿದೆ.

Leave A Reply

Your email address will not be published.