Neer Dose Karnataka
Take a fresh look at your lifestyle.

ಹೊಸ ಫೋಟೋ ತೆಗೆಸಿಕೊಳ್ಳಲು ಹೋಗಿ, ಹೊಸ ಮಾಂಗಲ್ಯ ಖರೀದಿಸಿದ ಪ್ರಿಯಾಂಕಾ, ಬೆಲೆ ಕೇಳಿದರೆ ತಲೆ ಸುತ್ತುತ್ತದೆ, ಎಷ್ಟು ಗೊತ್ತೇ??

24

ನಮಸ್ಕಾರ ಸ್ನೇಹಿತರೇ ಸೆಲಿಬ್ರಿಟಿಗಳು, ಅವರ ವಿಶೇಷ ಉಡುಪು, ಆಭರಣ, ಲುಕ್ ಗಳಿಂದ ಜನರನ್ನು ಆಕರ್ಷಿಸುತ್ತಾರೆ. ಬೇರೆ ಬೇರೆ ಬ್ರಾಂಡ್ ಗಳ ಫೋಟೊ ಶೂಟ್ ಅಥವಾ ವಯಕ್ತಿಕ ಫೋಟೋ ಶೂಟ್ ಗಳ ಮೂಲಕವೂ ಕೂಡ ಮಿಂಚುತ್ತಾರೆ. ಇದೀಗ ನ್ಯೂ ಲುಕ್ ನಲ್ಲಿ ಮಿಂಚಿ ಸುದ್ದಿಯಲ್ಲಿರುವುದು ಬಾಲಿವುಡ್ ದೇಸಿ ಬೆಡಗಿ ಪ್ರಿಯಾಂಕಾ ಚೋಪ್ರಾ.

ಹೌದು ಪುಗ್ಗಿ ಇದೀಗ ಹಾಟ್ ಲುಕ್ ಜೊತೆಗೆ ಟ್ರೆಡಿಶನ್ ಮಿಶ್ರಿತ ಫೋಟೋ ಶೂಟ್ ಒಂದರಲ್ಲಿ ಇತ್ತೀಚೆಗೆ ಕಾಣಿಸಿಕೊಂಡಿದ್ದರು. ಈ ಪೋಟೋ ಶೂಟ್ ನಲ್ಲಿ ಸಣ್ಣದಾದ ಮಾಂಗಲ್ಯ ಸರವನ್ನು ಧರಿಸಿರುವುದು ಸಕ್ಕತ್ ಲುಕ್ ಕೊಡುತ್ತೆ. ಈ ಮಾಂಗಲ್ಯ ಸರ ಆಕರ್ಷಕವಾಗಿಯೂ ಹಾಗೂ ದುಬಾರಿಯಾಗಿಯೂ ಇದೆ. 2021 ಆಗಸ್ಟ್ ತಿಂಗಳಿನಲ್ಲಿ ಇಟಾಲಿಯನ್ ಬ್ರ್ಯಾಂಡ್ ಬ್ಲಗರಿಗೆ ಪ್ರಿಯಾಂಕಾ ಚೋಪ್ರಾ ಜಾಗತಿಕ ಬ್ರಾಂಡ್ ಅಂಬಾಸಿಡರ್ ಆಗಿ ನೇಮಕಗೊಂಡಿದ್ದಾರೆ. ರೋಮನ್ ಹೈ ಜ್ಯುವೆಲ್ಲರಿ ಹೌಸ್ ನ ಪರವಾಗಿ ಪಿಗ್ಗಿ ಕಾಣಿಸಿಕೊಳ್ಳುತ್ತಿದ್ದಾರೆ. ಬ್ಲಗರಿ, ಅತ್ಯಾಧುನಿಕ ರತ್ನ, ಹರಳು ಮೊದಲಾದ ಆಭರಣಗಳು ಹಾಗೂ ದುಬಾರಿ ಕೈಗಡಿಯಾರಗಳನ್ನು ಮಾರಾಟ ಮಾಡುವ ಒಂದು ಬ್ರಾಂಡ್ ಆಗಿದೆ.

ಬ್ಲಗರಿ ಇತ್ತೀಚಿಗೆ ಭಾರತೀಯರ ಭಾವನಾತ್ಮಕ ಆಭರಣ ಎಂದೇ ಕರೆಯಲ್ಪಡುವ ಚಿನ್ನದ ಮಾಂಗಲ್ಯ ಸರವನ್ನು ಲಾಂಚ್ ಮಾಡಿದೆ. 18 ಕ್ಯಾರೆಟ್ ಚಿನ್ನದ ಈ ಐಷಾರಾಮಿ ಮಾಂಗಲ್ಯ ಸರವನ್ನು ಧರಿಸಿ ಪ್ರಿಯಾಂಕಾ ಫೋಟೊ ತೆಗೆಸಿದ್ದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ, ತದ ನಂತರ ಅದನ್ನು ಇವರೇ ಖರೀದಿ ಮಾಡಿದ್ದಾರೆ. ಈ ಬ್ಲಗರಿ ಹಾರದ ಮಧ್ಯದಲ್ಲಿ ಸಣ್ಣ ಕಪ್ಪು ಓನಿಕ್ಸ್ ಕಲ್ಲುಗಳನ್ನು ಹಾಗೂ ವಜ್ರವನ್ನು ಹೊಂದಿದೆ. ಇದನ್ನು ಡಬಲ್-ಲೋಗೋ ಚಿನ್ನದಿಂದ ಕವರ್ ಮಾಡಲಾಗಿದೆ. ಇನ್ನು ಈ ಅದ್ಭುತವಾದ ಚಿನ್ನದ ಮಾಂಗಲ್ಯ ಸರದ ಬೆಲೆ 3,49,000 ರೂಪಾಯಿ. ಪ್ರಿಯಾಂಕಾ ಚೋಪ್ರಾ ಹಾಗೂ ಅಮೇರಿಕಾದ ನಿಕ್ ಜೋನಾಸ್ ಜೋಡಿ ಈಗಾಗಲೇ ಸಾಕಷ್ಟು ಹೆಸರು ಮಾಡಿದ ಜೋಡಿ. 2018 ಇವರ ವಿವಾಹ ಹಿಂದೂ ಹಾಗೂ ಕ್ರಿಶ್ಚಿಯನ್ ಎರಡೂ ಸಂಪ್ರದಾಯಗಳ ಪ್ರಕಾರ ಆಗಿದ್ದು ವಿಶೇಷ.

Leave A Reply

Your email address will not be published.