Neer Dose Karnataka
Take a fresh look at your lifestyle.

ಸುಬ್ಬಲಕ್ಷ್ಮಿ ಸಂಸಾರ ಖ್ಯಾತಿಯ ನಟಿ ದೀಪ ಭಾಸ್ಕರ್ ಅವರ ಹೊಸ ಮನೆಯ ಗ್ರಹಪ್ರವೇಶ ಹೇಗಿತ್ತು ಗೊತ್ತಾ??

ನಮಸ್ಕಾರ ಸ್ನೇಹಿತರೇ ನಮ್ಮ ರಾಜ್ಯದಲ್ಲಿ ಸಿನಿಮಾಗಳಿಗಿಂತ ಹೆಚ್ಚಾಗಿ ಈಗ ಕನ್ನಡ ಕಿರುತೆರೆಯ ಪ್ರೇಕ್ಷಕರು ಜಾಸ್ತಿಯಾಗಿದ್ದಾರೆ. ಇನ್ನು ನಟರ ವಿಷಯದಲ್ಲೂ ಕೂಡ ಕಿರುತೆರೆಯ ಧಾರವಾಹಿಗಳಲ್ಲಿ ನಟ ನಟಿಯರ ಕುರಿತಂತೆ ಕನ್ನಡ ಪ್ರೇಕ್ಷಕರು ಈಗಾಗಲೇ ಸಾಕಷ್ಟು ಆಸಕ್ತಿಯನ್ನು ಹೆಚ್ಚಿಸಿಕೊಂಡಿದ್ದಾರೆ. ಇನ್ನು ಈ ಹಿಂದೆ ಹಲವಾರು ವರ್ಷಗಳ ಹಿಂದೆ ಸುಬ್ಬಲಕ್ಷ್ಮಿ ಸಂಸಾರ ಎಂಬ ದಾರವಾಹಿ ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿತ್ತು.

ಪ್ರೇಕ್ಷಕರು ಅಚ್ಚುಮೆಚ್ಚಿನಿಂದ ನೋಡುತ್ತಿದ್ದ ದಾರವಾಹಿಗಳ ಲಿಸ್ಟಿನಲ್ಲಿ ಸುಬ್ಬಲಕ್ಷ್ಮಿ ಸಂಸಾರ ಧಾರವಾಹಿ ಕೂಡ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ. ಇನ್ನೂ ಧಾರವಾಹಿನಿ ಪ್ರಮುಖ ಪಾತ್ರದಲ್ಲಿ ನಟಿಯಾಗಿ ನಟಿಸುತ್ತಿದ್ದಂತಹ ದೀಪ ಭಾಸ್ಕರ್ ರವರು ನಿಮಗೆಲ್ಲಾ ಗೊತ್ತೇ ಇರುತ್ತಾರೆ. ದೀಪ ಭಾಸ್ಕರ್ ಅವರು ಇಂದಿಗೂ ಕೂಡ ಎಲ್ಲಿ ಹೋದರು ಕೂಡ ಅವರನ್ನು ಸುಬ್ಬಲಕ್ಷ್ಮಿ ಎಂದೇ ಕರೆಯುತ್ತಾರೆ. ಅಷ್ಟರಮಟ್ಟಿಗೆ ಈ ಧಾರವಾಹಿ ಕಿರುತೆರೆಯ ವಾಹಿನಿಯಲ್ಲಿ ಸಂಚಲನವನ್ನು ಸೃಷ್ಟಿಸಿತ್ತು ಎಂದರೆ ನಂಬಲೇಬೇಕು. ಇನ್ನು ಇವರು ಕನ್ನಡ ಚಿತ್ರರಂಗದಲ್ಲಿ ಬಾಲನಟಿಯಾಗಿ ಕೂಡ ಕಾಣಿಸಿಕೊಂಡಿದ್ದರು ಇದಕ್ಕಾಗಿ ಅವರು ರಾಜ್ಯ ಪ್ರಶಸ್ತಿಯನ್ನು ಕೂಡ ಪಡೆದುಕೊಂಡಿದ್ದರು.

ಇನ್ನು ಇವರು ಕನ್ನಡ ಚಿತ್ರರಂಗದಲ್ಲಿ ಡಬ್ಬಿಂಗ್ ಆರ್ಟಿಸ್ಟ್ ಆಗಿ ಕೂಡ ಕಾಣಿಸಿಕೊಂಡಿದ್ದಾರೆ. ಹೌದು ಸ್ನೇಹಿತರೆ ಕನ್ನಡ ಚಿತ್ರರಂಗದ ಖ್ಯಾತ ನಟಿ ಆಗಿರುವಂತಹ ರಮ್ಯಾರವರ ವಾಯ್ಸ್ ಗೆ ಇವರೇ ತಮ್ಮ ದನಿಯನ್ನು ನೀಡುತ್ತಿದ್ದರು. ಇತ್ತೀಚಿಗಷ್ಟೇ ದೀಪ ಭಾಸ್ಕರ್ ರವರ ಹೊಸ ಮನೆಯ ಗ್ರಹಪ್ರವೇಶ ನಡೆದಿದ್ದು ಮನೆಗೆ ಗುರುಕೃಪಾ ಎಂಬ ಹೆಸರಿಡಲಾಗಿದೆ. ಇನ್ನು ಕೇವಲ ನಟಿ ಹಾಗು ಡಬ್ಬಿಂಗ್ ಆರ್ಟಿಸ್ಟ್ ಆಗಿ ಮಾತ್ರವಲ್ಲದೆ ನೃತ್ಯಗಾರ್ತಿಯಾಗಿ ಕೂಡ ಇವರು ಕಾಣಿಸಿಕೊಂಡಿದ್ದರು. ಇವರ ಹೊಸ ಮನೆಯ ಗ್ರಹಪ್ರವೇಶ ನಡೆದಿದ್ದು ಮನೆಯನ್ನು ನೀವು ಕೂಡ ಈ ಕೆಳಗಿನ ವಿಡಿಯೋ ಮುಖಾಂತರ ನೋಡಬಹುದಾಗಿದೆ.

Comments are closed.