Neer Dose Karnataka
Take a fresh look at your lifestyle.

ಉಪೇಂದ್ರ ಹೀರೋ ಆಗಬಾರದಿತ್ತು, ಇದು ನನ್ನ ಬೇಸರಕ್ಕೆ ಕಾರಣ ಎಂದ ಬ್ಯಾಂಕ್ ಜನಾರ್ಧನ್, ಯಾಕಂತೆ ಗೊತ್ತೆ??

ನಮಸ್ಕಾರ ಸ್ನೇಹಿತರೇ ಬ್ಯಾಂಕ್ ಜನಾರ್ಧನ್ ಕನ್ನಡ ನಾಡು ಕಂಡ ಖ್ಯಾತ ಹಾಸ್ಯ ಕಲಾವಿದ. ಸಿನಿಮಾ ಇರಲಿ, ಧಾರವಾಹಿ ಇರಲಿ, ನಾಟಕಗಳಿರಲಿ, ಬೋಳು ತಲೆಯ ಬ್ಯಾಂಕ್ ಜನಾರ್ಧನ್ ಇದ್ದರಂತೂ ಅಲ್ಲಿ ನಗುವಿಗೆ ತೊಂದರೆ ಇಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿದ್ದವು. ಹತ್ತಿರಹತ್ತಿರ ಸಾವಿರ ಸಿನಿಮಾಗಳಲ್ಲಿ ನಟಿಸಿರುವ ಬ್ಯಾಂಕ್ ಜನಾರ್ಧನ್ ಸದ್ಯ ಕನ್ನಡ ಚಿತ್ರರಂಗದ ಈಗಿನ ನಿರ್ದೇಶಕರ ಬಗ್ಗೆ ಬೇಸರದ ಘಟನೆಯೊಂದನ್ನ, ಇತ್ತೀಚಿನ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ.

ಬ್ಯಾಂಕ್ ಜನಾರ್ಧನ್ ಮೊದಲು ಗುರುತಿಸಿಕೊಂಡಿದ್ದು ಕಾಶೀನಾಥ್ ರ ಸಿನಿಮಾಗಳಲ್ಲಿ. ಆ ಕಾಲದಲ್ಲಿ ಒಂದು ಸಿನಿಮಾ ಪೂರ್ತಿ ನಟಿಸಿದರೇ ಹೆಚ್ಚೆಂದರೇ ಐದು ಸಾವಿರ ರೂಪಾಯಿ ಸಂಭಾವನೆ ಸಿಗುತ್ತಿತ್ತು. ಆದರೇ ನನಗೆ ಉಪೇಂದ್ರ ಕರೆಸಿಕೊಂಡು ಅವರ ಸಿನಿಮಾ ಶ್ ನಲ್ಲಿ ಪೋಲಿಸ್ ಪಾತ್ರ ಕೊಟ್ಟರು. ಆ ಪಾತ್ರದಿಂದಲೇ ನನಗೆ ಜನ ಎಲ್ಲಿಯೇ ಹೋದರು ಇಂದಿಗೂ ಗುರುತಿಸುತ್ತಾರೆ. ನಾಟಕಗಳಿರಲಿ, ಹೊರ ಊರಿನ ಜಾತ್ರೆ, ಅಥವಾ ಸಮಾರಂಭಗಳಿರಲಿ, ಇಲ್ಲವೇ ಟಿವಿ ಇಂಟರ್ವೂಗಳಲ್ಲಿಯೂ ಸಳ ಸರ್ ಶ್ ಸಿನಿಮಾದಲ್ಲಿ ನೀವು ಬೈದ ಬೈಗುಳಗಳನ್ನ ಒಮ್ಮೆ ಹೇಳಿ ಸರ್, ಪ್ಲೀಸ್ ಎಂದು ಅಂಗಲಾಚುತ್ತಾರಂತೆ. ಹಾಗಾಗಿ ನಾನು ಉಪೇಂದ್ರನಿಗೆ ಕೃತಜ್ಞನಾಗಿದ್ದೇನೆ.

ಆದರೇ ಉಪೇಂದ್ರ ಮೇಲೆ ನನಗೊಂದು.ಬೇಸರವಿದೆ. ಆತ ನಟನಾಗದೇ ನಿರ್ದೇಶಕನಾಗಿಯೇ ಮುಂದುವರಿಯಬೇಕಿತ್ತು, ಹಾಗೊಂದು ವೇಳೆ ಮುಂದುವರೆದಿದ್ದರೇ, ಕನ್ನಡ ಸಿನಿಮಾ ಇಂಡಸ್ಟ್ರಿ ಇಂದು ಬಹು ಎತ್ತರಕ್ಕೆ ಬೆಳೆದಿರುತ್ತಿತ್ತು ಎಂದು ಹೇಳಿದರು. ಅದಲ್ಲದೇ ಈಗ ಹೊಸ ನಿರ್ದೇಶಕರು ನಮ್ಮನ್ನ ಸರಿಯಾಗಿ ಗುರುತಿಸುತ್ತಿಲ್ಲ. ನನ್ನನ್ನು ಸೇರಿ ಹಲವಾರು ಹಿರಿಯ ಕಲಾವಿದರು ಅವಕಾಶಗಳಿಲ್ಲದೇ ಜೀವನ ನಿರ್ವಹಣೆಯೇ ಕಷ್ಟವಾಗಿದೆ. ಆಗ ಕ್ಲಾಪ್ ಮಾಡುತ್ತಿದ್ದವರು, ಸಹ ನಿರ್ದೇಶಕರಾಗಿದ್ದವರು ಇಂದು ನಿರ್ದೇಶಕರಾಗಿದ್ದಾರೆ. ಅವರಿಗೆ ನಮ್ಮ ಬಗ್ಗೆ ಚೆನ್ನಾಗಿ ಗೊತ್ತು, ಆದರೂ ಸಹ ಕರೆದು ಒಂದು ಅವಕಾಶವನ್ನು ಸಹ ನೀಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಈ ಬಗ್ಗೆ ಗಂಭೀರ ಚಿಂತನೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Comments are closed.