Neer Dose Karnataka
Take a fresh look at your lifestyle.

ಪ್ರೀತಿಯಿಂದ ಚಿರು ಸರ್ಜಾ ರವರು ಮೇಘನರಾಜ್ ರವರನ್ನು ಯಾವ ಹೆಸರಿನಲ್ಲಿ ಕರೆಯುತ್ತಿದ್ದರು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಮ್ಮ ಕನ್ನಡ ಚಿತ್ರರಂಗದಲ್ಲಿ ಹಲವಾರು ನಟ-ನಟಿಯರು ಪ್ರೀತಿಸಿ ಮದುವೆಯಾಗಿ ಎಲ್ಲರ ಮನಗೆದ್ದಿರುವ ಉದಾಹರಣೆ ಸಾಕಷ್ಟಿವೆ. ಅಂತಹುದೇ ಜೋಡಿಯಲ್ಲಿ ಒಂದು ಜೋಡಿ ಮೇಘನರಾಜ ಹಾಗೂ ಚಿರುಸರ್ಜ ಜೋಡಿ. ಹೌದು ಸ್ನೇಹಿತರೇ ಈ ಜೋಡಿ ಖಂಡಿತವಾಗಿಯೂ ಕನ್ನಡ ಚಿತ್ರರಂಗದಲ್ಲಿ ಸ್ಪೆಷಲ್ ಸ್ಥಾನವನ್ನು ಪಡೆದಿರುತ್ತದೆ.

ಇತ್ತೀಚಿಗಷ್ಟೇ ಜೂನಿಯರ್ ಅವರ ನಾಮಕರಣ ನಡೆದ ಸಂದರ್ಭದಲ್ಲಿ ಮೇಘನ ರಾಜ್ ಅವರು ತಮ್ಮ ಪತಿ ಚಿರು ಸರ್ಜಾ ಅವರ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಭಾವುಕರಾಗಿ ಕೆಲವು ಸಾಲುಗಳನ್ನು ಕೂಡ ಬರೆದುಕೊಂಡಿದ್ದರು. ಇನ್ನು ಮೇಘನರಾಜ್ ಹಾಗೂ ಚಿರುಸರ್ಜ ಇಬ್ಬರು ಕೂಡ ಚಿತ್ರರಂಗದಲ್ಲಿ ಸಕ್ರಿಯರಾಗಿ ನಟಿಸಿಕೊಂಡಿದ್ದ ನಟರು. ಈ ಸಮಯದಲ್ಲಿ ಚಿರುಸರ್ಜ ರವರು ಮೇಘನಾ ರಾಜ್ ರವರಿಗೆ ಪ್ರಪೋಸ್ ಮಾಡಿ ತಮ್ಮ ಪ್ರೀತಿಯ ಕುರಿತಂತೆ ಹೇಳಿಕೊಳ್ಳುತ್ತಾರೆ. ಇದಕ್ಕೆ ಮೇಘನಾ ರಾಜ್ ಕೂಡ ಒಪ್ಪಿ ಇಬ್ಬರು ಕೂಡ ಹಿಂದೂ ಹಾಗೂ ಕ್ರೈಸ್ತ ಧರ್ಮದ ಪ್ರಕಾರವಾಗಿ ಕನ್ನಡ ಚಿತ್ರರಂಗವೇ ಮೆಚ್ಚಿಕೊಳ್ಳುವಂತೆ ಮದುವೆಯಾಗುತ್ತಾರೆ.

ಆದರೆ ಚಿರು ಸರ್ಜಾ ರವರ ಅಕಾಲಿಕ ಅಗಲಿಕೆ ಎರಡು ಕುಟುಂಬಕ್ಕೂ ಸಾಕಷ್ಟು ಬೇಸರವನ್ನು ಉಂಟುಮಾಡಿತ್ತು. ಇನ್ನು ಮೇಘನಾ ರಾಜ ರವರು ಚಿರು ಸರ್ಜಾ ತಮ್ಮನ್ನು ಏನೆಂದು ಕರೆಯುತ್ತಿದ್ದರು ಎಂಬುದಾಗಿ ಸಂದರ್ಶನವೊಂದರಲ್ಲಿ ಹೇಳಿ ಕೊಂಡಿದ್ದಾರೆ. ಹೌದು ಸ್ನೇಹಿತರೆ ಚಿರು ಸರ್ಜಾ ರವರು ಮನೆಯಲ್ಲಿದ್ದಾಗ ಮೇಘನರಾಜ ರವರೊಂದಿಗೆ ಸಿನಿಮಾ ನೋಡುತ್ತಿದ್ದರು. ಈ ಸಮಯದಲ್ಲೆಲ್ಲ ಮನೆಯಲ್ಲಿ ಪ್ರೀತಿಯಿಂದ ಮೇಘನರಾಜ್ ರವರನ್ನು ಚಿರುಸರ್ಜ ರವರು ಕುಟ್ಟೀಮಾ ಎಂದು ಕರೆಯುತ್ತಿದ್ದರು. ಈ ಕ್ಷಣಗಳನ್ನು ಇಂದಿಗೂ ಕೂಡ ನೆನೆಸಿಕೊಂಡು ಭಾವುಕರಾಗುತ್ತಾರೆ ನಟಿ ಮೇಘನಾ ರಾಜ್.

Comments are closed.