Neer Dose Karnataka
Take a fresh look at your lifestyle.

ಇಂದು ನೂರಾರು ಕೋಟಿ ಆಸ್ತಿ ಹೊಂದಿದ್ದರೂ ಕೂಡ ತಂದೆ ತೀರಿಕೊಂಡಾಗ ದರ್ಶನ್ ರವರ ಮಾಡಿದ್ದ ಸಾಲ ಎಷ್ಟು ಗೊತ್ತೇ??

12

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದ ನಟರಲ್ಲಿ ಚಾಲೆಂಜಿಂಗ್ ಸ್ಟಾರ್ ಡಿ ಬಾಸ್ ರವರು ಖಂಡಿತವಾಗಿಯೂ ಪ್ರತ್ಯೇಕವಾಗಿ ನಿಲ್ಲುತ್ತಾರೆ ಎಂದರೆ ತಪ್ಪಾಗಲಾರದು. ಏಕೆಂದರೆ ಕನ್ನಡ ಚಿತ್ರರಂಗದ ಸ್ಟಾರ್ ನಟನ ಮಗನಾಗಿದ್ದರೂ ಕೂಡ ಅವರು ಚಿತ್ರರಂಗಕ್ಕೆ ಬಂದಿದ್ದ ಹಾಗೂ ಬಂದು ಇಲ್ಲಿ ಬೆಳೆದು ನಿಂತಿದ್ದ ಹಾದಿಯನ್ನು ನೋಡಿದರೆ ಖಂಡಿತವಾಗಿಯೂ ಎಲ್ಲರಿಗೆ ಸ್ಪೂರ್ತಿ ಎಂದರೆ ತಪ್ಪಾಗಲಾರದು.

ಹೌದು ಸ್ನೇಹಿತರೆ ಇಂದಿಗೆ d-boss ರವರ ಬಳಿ ಕೋಟ್ಯಂತರ ಮೌಲ್ಯದ ಕಾರುಗಳು ಬಂಗಲೆಗಳು ಆಸ್ತಿಯ ಐಶ್ವರ್ಯ ಇದೆ. ಆದರೆ ಇದನ್ನೆಲ್ಲಾ ಪಡೆಯಲು ಅವರು ಕನ್ನಡ ಚಿತ್ರರಂಗದಲ್ಲಿ ಪಟ್ಟಂತಹ ಶ್ರಮ ಅವರಿಗೆ ಗೊತ್ತು. ಹೀಗಾಗಿ ಇಂದಿಗೂ ಕೂಡ ಎಷ್ಟೇ ದುಡ್ಡಿದ್ದರೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಸರಳತೆಯನ್ನು ತಮ್ಮ ಮೈಗೂಡಿಸಿಕೊಂಡಿದ್ದಾರೆ. ಕೋಟ್ಯಾಂತರ ರೂಪಾಯಿ ಆಸ್ತಿ ಇದ್ದರೂ ಕೂಡ ಎಲ್ಲರ ನೆಚ್ಚಿನ ದಾಸನಾಗಿ ಇಂದಿಗೂ ಕೂಡ ಕಾಣಿಸಿಕೊಳ್ಳುತ್ತಾರೆ. ಇಂದಿಗೆ d-boss ರವರ ಬಳಿ ಕೋಟ್ಯಂತರ ಹಣ ಇರಬಹುದು ಆದರೆ ಒಂದು ಕಾಲದಲ್ಲಿ ಅವರು ಕೂಡ ಸಾಲ ಮಾಡಿಕೊಂಡಿದ್ದು ಸ್ನೇಹಿತರೆ.

ಹೌದು ಸ್ನೇಹಿತರೆ ಒಮ್ಮೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ತಂದೆ ತೂಗುದೀಪ್ ಶ್ರೀನಿವಾಸ್ ರವರು ಇಹಲೋಕ ತ್ಯಜಿಸಿದ ಸಂದರ್ಭದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಶಿವಮೊಗ್ಗದ ನೀನಾಸಂ ಸಂಸ್ಥೆಯಲ್ಲಿ ಇದ್ದರು. ಆಗ ಅವರ ಬಳಿ ಮೈಸೂರಿಗೆ ಬರಲು ಬಸ್ ಟಿಕೆಟ್ ಗೆ ಕೂಡ ಕಾಸಿರಲಿಲ್ಲ. ಹೀಗಾಗಿ ನೀನಾಸಂ ಸಂಸ್ಥೆಯಲ್ಲಿ ಅಡುಗೆ ಮಾಡಿಕೊಂಡಿದ್ದ ರತ್ನ ಎಂಬುವರ ಬಳಿ 500 ರೂಪಾಯಿ ಸಾಲ ಪಡೆದುಕೊಂಡು ಮೈಸೂರಿಗೆ ತಮ್ಮ ತಂದೆಯನ್ನು ಕೊನೆಯ ಬಾರಿಗೆ ನೋಡಲು ಬಂದಿದ್ದರು. ಇಂದಿಗೂ ಕೂಡ ಅದನ್ನು ನೆನೆಸಿಕೊಂಡು ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಭಾವುಕರಾಗುತ್ತಾರೆ. ಅಂದು 500 ರೂಪಾಯಿಗೂ ಕೂಡ ಪರದಾಡಿದ ದರ್ಶನ್ ರವರು ಇಂದು ಕೋಟ್ಯಂತರ ರೂಪಾಯಿ ಆಸ್ತಿಯ ಹಾಗೂ ಕೋಟ್ಯಂತರ ಜನರ ನೆಚ್ಚಿನ ನಾಯಕ ನಟನಾಗಿದ್ದಾರೆ.

Leave A Reply

Your email address will not be published.