Neer Dose Karnataka
Take a fresh look at your lifestyle.

ಕೆಜಿಎಫ್ 2ಗೆ ಸೇರ್ಪಡೆಯಾಗಲಿದ್ದಾರೆ 90ರ ದಶಕದ ಇಬ್ಬರು ನಾಯಕಿಯರು ಯಾರ್ಯಾರು ಗೊತ್ತೇ?? ಯಾವ ಪಾತ್ರ ಗೊತ್ತೇ??

3

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದ ಮಾರುಕಟ್ಟೆಯನ್ನು ಪರಭಾಷೆಗಳಿಗೆ ಕೂಡ ಹೆಚ್ಚಿಸಿದಂತಹ ಖ್ಯಾತಿ ನಮ್ಮ ಕನ್ನಡದ ಕೆಜಿಎಫ್ ಚಾಪ್ಟರ್ 1ಕ್ಕೆ ಸೇರುತ್ತದೆ. ರಾಕಿಂಗ್ ಸ್ಟಾರ್ ನಟನೆಯ ಕೆಜಿಎಫ್ ಚಾಪ್ಟರ್ 1 ಕನ್ನಡ ಚಿತ್ರರಂಗದ ಗತ್ತು ಹಾಗೂ ಗಾಂಭೀರ್ಯವನ್ನು ದೇಶದಾದ್ಯಂತ ಸಾರಿದ ಚಿತ್ರ.

ಇನ್ನು ಈಗ ಕೆಜಿಎಫ್ ಚಾಪ್ಟರ್ 2ಕ್ಕೆ ಇಡೀ ಜಗತ್ತೇ ಕಾದು ನಿಂತಿದೆ. ಇನ್ನು ಚಿತ್ರತಂಡದ ಪ್ರತಿಯೊಬ್ಬರು ಸದಸ್ಯರು ಹೇಳುವಂತೆ ಕೆಜಿಎಫ್ ಚಾಪ್ಟರ್ ಒಂದಕ್ಕಿಂತ ಎರಡನೇ ಭಾಗ ನೆಕ್ಸ್ಟ್ ಲೆವೆಲ್ ನಲ್ಲಿ ಇರುತ್ತದೆ. ಇನ್ನು ಕೆಜಿಎಫ್ ಚಾಪ್ಟರ್ ಎರಡರಲ್ಲಿ ಅತ್ಯಂತ ದೊಡ್ಡ ತಾರಾಗಣವೇ ಇದೆ. ರಾಕಿಂಗ್ ಸ್ಟಾರ್ ಯಶ್ ಶ್ರೀನಿಧಿ ಶೆಟ್ಟಿ ಅಚ್ಯುತ್ ಪ್ರಕಾಶ್ ರಾಜ್ ಮಾಳವಿಕಾ ಸಂಜಯ್ ದತ್ ರವೀನ ತಂಡನ್ ರಮೇಶ್ ರಾವ್ ಈಶ್ವರಿ ರಾವ್ ವಸಿಷ್ಟ ಸಿಂಹ. ಹೇಗೆ ಹೆಸರು ಹೇಳುತ್ತ ಹೋದರೆ ಮುಗಿಯದ ಅಂತಹ ಅಷ್ಟರಮಟ್ಟಿಗೆ ದೊಡ್ಡ ದೊಡ್ಡ ಹೆಸರುಗಳು ಈ ಚಿತ್ರದಲ್ಲಿದೆ.

ಇನ್ನು ಬಹುನಿರೀಕ್ಷಿತ ಬಾಲಿವುಡ್ ಚಿತ್ರಗಳನ್ನು ಮೀರಿಸುವ ಅಷ್ಟರ ಮಟ್ಟಿಗೆ ಇದರ ಜನಪ್ರಿಯತೆಯ ಈಗಾಗಲೇ ಭಾರತದಾದ್ಯಂತ ಹರಡಿದೆ. ಇನ್ನು ಈ ತಾರಾ ಗಣಕ್ಕೆ ಕನ್ನಡದ 90ರ ದಶಕದ ನಟಿಯರು ಕೂಡ ಸೇರಲಿದ್ದಾರಂತೆ. ಹೌದು ಸ್ನೇಹಿತರ ಅವರಿನ್ಯಾರು ಅಲ್ಲ ಸುಧಾರಾಣಿ ಹಾಗೂ ಶೃತಿ. ಇನ್ನು ಅವರು ಕೆಜಿಎಫ್ ಚಿತ್ರದಲ್ಲಿ ನಟಿಸುತ್ತಿಲ್ಲ. ಅವರು ಕೆಜಿಎಫ್ ಚಿತ್ರದ ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಿರುವ ರವೀನ ತಂಡನ್ ಹಾಗೂ ಈಶ್ವರಿ ರಾವ್ ರವರ ಕನ್ನಡ ಡಬ್ಬಿಂಗ್ ಗೆ ಧ್ವನಿ ಆಗಲಿದ್ದಾರೆ. ರವೀನ ತಂಡನ್ ರವರ ರಮಿಕ ಸೆನ್ ಪಾತ್ರಕ್ಕೆ ಸುಧಾರಾಣಿ ಅವರು ಕನ್ನಡದ ಧ್ವನಿಯಾದರೆ ಈಶ್ವರಿ ರಾವ್ ರವರ ಹೊಸ ಪಾತ್ರಕ್ಕೆ ಶೃತಿಯವರು ದನಿಯಾಗಲಿದ್ದಾರೆ.

Leave A Reply

Your email address will not be published.