Neer Dose Karnataka
Take a fresh look at your lifestyle.

ನನಗೆ ಕನ್ನಡ ಬಿಟ್ಟರೆ ಬೇರೆ ಬರೋದೇ ಇಲ್ಲ ಎಂದು ಹೇಳಿ, ನಂತರ 5 ಭಾಷೆಯಲ್ಲಿ ನಟಿಸಿ ಗೆದ್ದ ಕನ್ನಡತಿ ಯಾರು ಗೊತ್ತೇ ??

ನಮಸ್ಕಾರ ಸ್ನೇಹಿತರೇ ಕೆಲ ನಟಿಯರು ಕನ್ನಡ ಬಂದರೂ ಕೂಡ ಕನ್ನಡ ಬರುವುದಿಲ್ಲ ಎಂದು ಬೇರೆ ಭಾಷೆಯಲ್ಲಿ ನಟಿಸಿಕೊಂಡು ಅಲ್ಲಿನ ಸಂಸ್ಕೃತಿಗೆ ಒಗ್ಗಿಕೊಂಡಿದ್ದಾರೆ. ಆದರೆ ಇಂದು ನಾವು ಹೇಳುವಂತಿರುವ ನಟಿ ಕನ್ನಡ ಬಿಟ್ಟರೆ ಬೇರೆ ಭಾಷೆ ಬರುವುದಿಲ್ಲ ಎಂದು ಹೇಳಿಕೊಂಡು ಪಂಚ ಭಾಷೆಗಳಲ್ಲಿ ನಟಿಸಿದ ಹೆಮ್ಮೆಯ ಕನ್ನಡತಿ ಎಂದು ಹೇಳಬಹುದಾಗಿದೆ. ಹೌದು ಸ್ನೇಹಿತರೆ ನಾವು ಹೇಳಲು ಹೊರಟಿರುವುದು ಎಲ್ಲರೂ ಇವರನ್ನು ಮೊದಲು ಅಂದುಕೊಂಡಿದ್ದು ಮಲಯಾಳಂ ಮೂಲದವರು ಎಂದು. ಆದರೆ ಈಗ ಎಲ್ಲರಿಗೂ ಗೊತ್ತಾಗಿದೆ ಇವರು ಬೆಂಗಳೂರಿನಲ್ಲಿ ಹುಟ್ಟಿ ಬೆಳೆದು ಇಲ್ಲ ಇರುವವರು ಎಂದು.

ಹೌದು ಸ್ನೇಹಿತರೆ ನಾವು ಮಾತನಾಡಲು ಹೊರಟಿರುವುದು ನಿತ್ಯ ಮೆನನ್ ಅವರ ಕುರಿತಂತೆ. ನಿತ್ಯ ಮೆನನ್ ರವರು ಬೆಂಗಳೂರಲ್ಲಿ ಜನಿಸಿ ಇಲ್ಲೇ ಹುಟ್ಟಿ ಬೆಳೆದು ವಿದ್ಯಾಭ್ಯಾಸವನ್ನು ಕೂಡ ಇಲ್ಲೇ ಮುಗಿಸಿದವರು. ಇನ್ನು ಇವರು ಕನ್ನಡ ಚಿತ್ರರಂಗದ ಮೂಲಕವೇ ಚಿತ್ರಲೋಕಕ್ಕೆ ಕೂಡ ಪಾದಾರ್ಪಣೆ ಮಾಡಿದ್ದು. ಹೌದು ಸ್ನೇಹಿತರೆ seven-o-clock ಚಿತ್ರದ ಮೂಲಕ ಪಾದರ್ಪಣೆ ಮಾಡಿದ ನಿತ್ಯ ಮೆನನ್ ರವರು ನಂತರದ ದಿನಗಳಲ್ಲಿ ಕನ್ನಡ ತಮಿಳು ತೆಲುಗು ಮಲಯಾಳಂ ಹಾಗೂ ಹಿಂದಿ ಚಿತ್ರರಂಗದಲ್ಲಿ ಕೂಡ ಹಾಗೂ ಬೇಡಿಕೆ ನಟಿಯಾಗಿ ಕಾಣಿಸಿಕೊಂಡಿದ್ದಾರೆ.

ಇನ್ನು ನಿತ್ಯ ಮೆನನ್ ರವರು ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗಷ್ಟೇ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಕೋಟಿಗೊಬ್ಬ-2 ಚಿತ್ರದ ಮೂಲಕ ವಾಪಸಾಗಿ ಕನ್ನಡಿಗರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ನಿತ್ಯ ಮೆನನ್ ರವರು ಕನ್ನಡ ಚಿತ್ರರಂಗದಲ್ಲಿ ನಡೆಸಿದಂತಹ ಮುಖ್ಯವಾದ ಅಂತಹ ಚಿತ್ರವೆಂದರೆ ಅದು ಚೇತನ್ ಕುಮಾರ್ ನಟನೆಯ ಮೈನಾ ಚಿತ್ರ. ಹೌದು ಸ್ನೇಹಿತರೆ ನಿತ್ಯಾ ಮೆನನ್ ಅವರ ನಟನೆ ಮೈನಾ ಚಿತ್ರದಲ್ಲಿ ಎಲ್ಲರೂ ಕೂಡ ಮೆಚ್ಚುವಂತಾಗಿತ್ತು. ಯಾವುದೇ ಪಾತ್ರವನ್ನು ಕೂಡ ಸುಲಲಿತವಾಗಿ ನಿರ್ವಹಿಸಬಲ್ಲ ಅಂತಹ ನಟಿ ಎಂದರೆ ತಪ್ಪಾಗಲಾರದು. ನಿತ್ಯ ಮೆನನ್ ರವರು ಕನ್ನಡ ಚಿತ್ರರಂಗದಲ್ಲಿ ಇನ್ನೂ ಕೂಡ ಹೆಚ್ಚಿನ ಚಿತ್ರಗಳಲ್ಲಿ ನಟಿಸಲಿ ಎಂದು ಆಶಿಸೋಣ ಸ್ನೇಹಿತರೆ.

Comments are closed.