Neer Dose Karnataka
Take a fresh look at your lifestyle.

ಕನ್ನಡದ ಕ್ಯೂಟ್ ಜೋಡಿ ನಿಖಿಲ್,ರೇವತಿ ದಂಪತಿ ಹಾಗೂ ಪ್ರಜ್ವಲ್,ರಾಗಿಣಿ ದಂಪತಿಗಳ ಮನೆಯಲ್ಲಿ ಗಣೇಶನ ಹಬ್ಬ ಹೇಗಿತ್ತು ಗೊತ್ತೇ??

ನಮಸ್ಕಾರ ಸ್ನೇಹಿತರೇ ಗೌರಿ-ಗಣೇಶ ಹಬ್ಬ ಬಂತೆಂದರೆ ಸಾಕು ಎಲ್ಲರ ಮನೆಯಲ್ಲಿ ಸಂಭ್ರಮ ಸಡಗರ ಮುಗಿಲೇರಿ ಬಿಡುತ್ತೆ. ಎಲ್ಲರೂ ಕೂಡ ಈ ಹಬ್ಬವನ್ನು ಸಂತೋಷ ಸಡಗರದಿಂದ ಆಚರಿಸಿಯೇ ಆಚರಿಸುತ್ತಾರೆ. ಇನ್ನು ಈ ಬಾರಿ ಸ್ಯಾಂಡಲ್ವುಡ್ ಸೆಲೆಬ್ರಿಟಿಯರು ಕೂಡ ಗಣೇಶನ ಹಬ್ಬವನ್ನು ಸ್ಪೆಷಲ್ ಆಗಿ ಆಚರಿಸಿ ಸುದ್ದಿಯಾಗಿದ್ದಾರೆ.

ಹೌದು ಸ್ನೇಹಿತರೆ ಇವರೇ ನಿಖಿಲ್ ಕುಮಾರ್ ಹಾಗೂ ರೇವತಿ ದಂಪತಿಗಳು ಗೌರಿ-ಗಣೇಶ ಹಬ್ಬವನ್ನು ಮನೆಯಲ್ಲಿಯೇ ಕುಟುಂಬಸಮೇತರಾಗಿ ಆಚರಿಸಿದ್ದು ಇವರಿಬ್ಬರ ಗೌರಿ ಗಣೇಶ ಹಬ್ಬದ ಆಚರಣೆಯ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಕೂಡ ಆಗಿದೆ. ನಿಖಿಲ್ ಕುಮಾರ್ ರವರು ಚಿತ್ರೀಕರಣದ ಬ್ಯುಸಿ ಶೆಡ್ಯೂಲ್ ನಲ್ಲಿ ಕೂಡ ತಮ್ಮ ಪತ್ನಿ ಹಾಗೂ ಕುಟುಂಬಸ್ಥರೊಂದಿಗೆ ಗೌರಿ-ಗಣೇಶ ಹಬ್ಬ ಆಚರಿಸಿದ್ದು ಎಲ್ಲರ ಮನಗೆದ್ದಿದೆ.

ಇನ್ನು ಸ್ಯಾಂಡಲ್ವುಡ್ನ ಇನ್ನೊಬ್ಬ ನಟ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅವರ ಮನೆಯಲ್ಲಿ ಕೂಡ ಪರಿಸರಸ್ನೇಹಿ ಗಣಪನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಗಣೇಶನ ಹಬ್ಬವನ್ನು ಆಚರಿಸಿದ್ದು ವಿಶೇಷವಾಗಿ ಕಂಡುಬಂದಿದೆ. ಇನ್ನು ಈ ಸಮಯದಲ್ಲಿ ಪ್ರಜ್ವಲ್ ದೇವರಾಜ್ ಅವರ ತಂದೆ ದೇವರಾಜ್ ಅವರು ಕೂಡ ಮಿಂಚುತ್ತಿದ್ದರು ಕಾರಣ ಎಷ್ಟಾದರೂ ಗಣೇಶನ ಹಬ್ಬ ಅಲ್ವಾ. ಇನ್ನು ಪ್ರಜ್ವಲ್ ದೇವರಾಜ್ ಅವರ ಪತ್ನಿ ರಾಗಿಣಿ ಕೂಡ ಸಂತೋಷದಿಂದ ಗಣೇಶನ ಹಬ್ಬದಲ್ಲಿ ಪಾಲ್ಗೊಂಡಿದ್ದರು.

ತಾಯಿ ಚಂದ್ರಲೇಖ ರವರು ಕೂಡ ಮಕ್ಕಳ ಈ ಸಂತೋಷ ದಲ್ಲಿ ಪಾಲ್ಗೊಂಡಿದ್ದರು. ಇನ್ನು ಪ್ರಜ್ವಲ್ ದೇವರಾಜ್ ರವರ ತಮ್ಮನಾಗಿರುವಂತಹ ಪ್ರಣವ್ ದೇವರಾಜ್ ಅವರು ಕೂಡ ಸಾಂಸ್ಕೃತಿಕ ಉಡುಗೆಯಲ್ಲಿ ಸಂತೋಷದಿಂದ ಮನೆಯಲ್ಲಿ ಆಚರಿಸುವಂತಹ ಗಣೇಶನ ಹಬ್ಬದಲ್ಲಿ ಪಾಲ್ಗೊಂಡರು. ಒಟ್ಟಾರೆಯಾಗಿ ಕನ್ನಡ ಚಿತ್ರರಂಗದ ಎರಡು ಕುಟುಂಬಗಳ ಗಣೇಶನ ಹಬ್ಬದ ಆಚರಣೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.

Comments are closed.