Neer Dose Karnataka
Take a fresh look at your lifestyle.

ಸೂರ್ಯಕಾಂತ್ ರವರಿಗೆ ಭರ್ಜರಿ ಉಡುಗೊರೆ ಕೊಟ್ಟ ದರ್ಶನ್, ಒಂದೇ ನಿರ್ಧಾರದ ಮೂಲಕ ಸೂರ್ಯ ಜೀವನ ಬದಲಾಯಿಸಲು ಮುಂದಾದ ದರ್ಶನ್, ಏನು ಗೊತ್ತೇ??

5

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಕನ್ನಡ ಕಿರುತೆರೆಯ ವಾಹಿನಿಯ ಸಿಂಗಿಂಗ್ ಶೋನಲ್ಲಿ ಹಲವಾರು ಪ್ರತಿಭೆಗಳು ಕನ್ನಡ ಪ್ರೇಕ್ಷಕರ ಮನಗೆದ್ದಿದೆ. ಇದರಲ್ಲಿ ಇತ್ತೀಚಿನ ದಿನಗಳಲ್ಲಿ ಎಲ್ಲರಿಗಿಂತ ಹೆಚ್ಚಿನ ಸುದ್ದಿಯಲ್ಲಿರುವುದು ಸೂರ್ಯಕಾಂತ್ ರವರು. ಹೌದು ಸ್ನೇಹಿತರೆ ಸೂರ್ಯಕಾಂತ್ ರವರು ಸಾಕಷ್ಟು ದೊಡ್ಡ ಮಟ್ಟದಲ್ಲಿ ಕನ್ನಡ ಕಿರುತೆರೆಯ ವಾಹಿನಿಯಲ್ಲಿ ಸದ್ದನ್ನು ಮಾಡುತ್ತಿದ್ದಾರೆ. ಹೌದು ಗೆಳೆಯರೆ ಲೆಜೆಂಡರಿ ಗಾಯಕರಾಗಿರುವಂತಹ ದಿವಂಗತ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ನಡೆಸಿಕೊಡುತ್ತಿದ್ದಂತಹ ಎದೆತುಂಬಿ ಹಾಡುವೆನು ಕಾರ್ಯಕ್ರಮ ಈಗ ಮತ್ತೊಮ್ಮೆ ವಾಪಸಾಗಿದೆ.

ಎಂವಿ ಕಾರ್ಯಕ್ರಮವನ್ನು ತೀರ್ಪುಗಾರರಾಗಿ ನಡೆಸಿಕೊಡುತ್ತಿರುವುದು ರಾಜೇಶ್ ಕೃಷ್ಣನ್ ವಿ ಹರಿಕೃಷ್ಣ ಹಾಗೂ ರಘು ದೀಕ್ಷಿತ್. ಈ ಮೂವರು ಸಂಗೀತ ದಿಗ್ಗಜರು ನಡೆಸಿಕೊಡುತ್ತಿರುವ ಎದೆತುಂಬಿ ಹಾಡುವೆನು ಕಾರ್ಯಕ್ರಮದ ಸ್ಪರ್ಧಿ ಆಗಿರುವ ಸೂರ್ಯಕಾಂತ್ ಅವರು ಈಗಾಗಲೇ ತಮ್ಮ ಹಾಡಿನ ಮೂಲಕ ರಾಜ್ಯಾದ್ಯಂತ ಜನಪ್ರಿಯರಾಗಿದ್ದಾರೆ. ಮಾತನಾಡಲು ತೊದಲುತಿದ್ದರೂ ಕೂಡ ಹಾಡನ್ನು ಮಾತ್ರ ಚೆನ್ನಾಗಿ ಹಾಡುತ್ತಾರೆ . ಇದಕ್ಕಾಗಿಯೇ ಕರ್ನಾಟಕದ ಹಲವಾರು ಪ್ರೇಕ್ಷಕರು ಇವರ ಅಭಿಮಾನಿಗಳಾಗಿದ್ದರೆ.

ಇನ್ನು ಇವರನ್ನು ಸಂಪರ್ಕಿಸಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ ಮುಂದಿನ ಚಿತ್ರಗಳಲ್ಲಿ ಹಾಡಿಸುವ ಭರವಸೆಯನ್ನು ಕೂಡ ನೀಡಿದ್ದಾರೆ. ಮಾತ್ರವಲ್ಲದೆ ತಮ್ಮ ಮನೆಗೆ ಆಹ್ವಾನಿಸಿದ್ದು ಅವರ ಬಳಿ ಹಾಡು ಕೂಡ ಕೇಳಲು ಆಸಕ್ತನಾಗಿದ್ದೇನೆ ಎಂಬ ಮಾತನ್ನು ಹೇಳಿದ್ದಾರೆ. ಯಾವುದೇ ಹೊಸ ಪ್ರತಿಭೆ ಇರಲಿ ಅವರಿಗೆ ಸಪೋರ್ಟ್ ಮಾಡೋದು ಎಂದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರಿಗೆ ಇಷ್ಟ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಹೃದಯ ವೈಶಾಲ್ಯತೆ ಕುರಿತಂತೆ ಹಾಗೂ ಸೂರ್ಯಕಾಂತ್ ರವರ ಪ್ರತಿಭೆಯ ಕುರಿತಂತೆ ನಿಮ್ಮ ಅನಿಸಿಕೆ ಏನು ಎಂಬುದನ್ನು ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Leave A Reply

Your email address will not be published.