Neer Dose Karnataka
Take a fresh look at your lifestyle.

600 ಕ್ಕೂ ಹೆಚ್ಚಿನ ಸಿನೆಮಾಗಳಲ್ಲಿ ನಟಿಸಿರುವ ಟೆನಿಸ್ ಕೃಷ್ಣ ಮಗಳು ಹೇಗಿದ್ದಾರೆ ಗೊತ್ತಾ?? ಹೀರೋಯಿನ್ ಗೆ ಕಮ್ಮಿ ಇಲ್ಲ

2

ನಮಸ್ಕಾರ ಸ್ನೇಹಿತರೇ ನಮ್ಮ ಬಾಲ್ಯದ ದಿನಗಳಲ್ಲಿ ನಾವು ಅತ್ಯಂತ ಹೆಚ್ಚಾಗಿ ಇಷ್ಟಪಡುತ್ತಿದ್ದಂತಹ ಹಾಸ್ಯನಟ ಎಂದರೆ ಅದು ಖಂಡಿತವಾಗಿಯೂ ಟೆನಿಸ್ ಕೃಷ್ಣ ಎಂದರೆ ತಪ್ಪಾಗಲಾರದು. ಟೆನಿಸ್ ಕೃಷ್ಣ ಅವರು ಟೆನಿಸ್ ಆಟವನ್ನು ಹೆಚ್ಚಾಗಿ ಹಾಡುತ್ತಿದ್ದರಿಂದ ಕನ್ನಡ ಚಿತ್ರರಂಗ ಅವರನ್ನು ಟೆನಿಸ್ ಕೃಷ್ಣ ಎಂದು ಕರೆಯುತ್ತಿತ್ತು. ಹೌದು ಸ್ನೇಹಿತರೆ ಟೆನ್ನಿಸ್ ಕೃಷ್ಣರವರ 90ರ ದಶಕದಲ್ಲಿ ಕನ್ನಡ ಚಿತ್ರರಂಗಕ್ಕೆ ಹಾಸ್ಯನಟನಾಗಿ ಪಾದರ್ಪಣೆ ಮಾಡುತ್ತಾರೆ.

ಆ ಕಾಲದಲ್ಲಿ ಹಲವಾರು ಘಟಾನುಘಟಿ ಹಾಸ್ಯ ಕಲಾವಿದರು ಇದ್ದರು ಕೂಡ ಟೆನ್ನಿಸ್ ಕೃಷ್ಣರವರ ಅತ್ಯಂತ ವೇಗವಾಗಿ ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಾರೆ. ಇನ್ನು ಟೆನಿಸ್ ಕೃಷ್ಣ ರವರು ಅಂದಿನ ಕಾಲದ ಸೂಪರ್ ಸ್ಟಾರ್ ಗಳಾದ ರಾಜಕುಮಾರ್ ವಿಷ್ಣುವರ್ಧನ್ ರೆಬೆಲ್ ಸ್ಟಾರ್ ಅಂಬರೀಶ್ ಶಶಿಕುಮಾರ್ ಅನಂತನಾಗ್ ಹೀಗೆ ಹಲವಾರು ನಟರೊಂದಿಗೆ ಹಾಸ್ಯ ಕಲಾವಿದನಾಗಿ ನಟಿಸಿ ಜನಪ್ರಿಯತೆ ಪಡೆದುಕೊಂಡಿದ್ದಾರೆ. ಇದು ಕೇವಲ ಅಂದಿನ ಕಾಲದಲ್ಲಿ ಮಾತ್ರವಲ್ಲದೆ ಇಂದಿನ ಕಾಲದ ನಟರಾದಂತಹ ಶಿವರಾಜಕುಮಾರ್ ಕಿಚ್ಚ ಸುದೀಪ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರೊಂದಿಗೂ ಕೂಡ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಟೆನಿಸ್ ಕೃಷ್ಣ ರವರು 600ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ಕಾಣಿಸಿಕೊಂಡು ದಾಖಲೆ ನಿರ್ಮಿಸಿದ್ದಾರೆ. ಇನ್ನು ಕೇವಲ ಸಿನಿಮಾದಲ್ಲಿ ಮಾತ್ರವಲ್ಲದೆ ನಿಜ ಜೀವನದಲ್ಲಿ ಕೂಡ ಎಲ್ಲರ ಮುಖದಲ್ಲಿ ನಗು ತರಿಸುವುದರಲ್ಲಿ ಟೆನಿಸ್ ಕೃಷ್ಣರವರು ಸದಾ ಮುಂದೆ ಎಂದು ಹೇಳಬಹುದಾಗಿದೆ.

ಟೆನಿಸ್ ಕೃಷ್ಣ ಅವರು ಇತ್ತೀಚಿನ ದಿನಗಳಲ್ಲಿ ಚಿತ್ರರಂಗದಿಂದ ದೂರವಾಗಿದ್ದು ಮನೆಯಲ್ಲಿ ಸುಖ ಸಂತೋಷದಿಂದ ನೆಮ್ಮದಿಯಿಂದ ಕಾಲ ಕಳೆಯುತ್ತಿದ್ದಾರೆ. ಇನ್ನು ಟೆನ್ನಿಸ್ ಕೃಷ್ಣ ರವರಿಗೆ ರಂಜಿತ ಎಂಬ ಮಗಳಿದ್ದು ಯಾವ ಹೀರೋಯಿನ್ ಗೂ ಕಮ್ಮಿ ಇಲ್ಲದಂತೆ ಸೌಂದರ್ಯವತಿ ಯಾಗಿದ್ದಾರೆ. ಆದರೆ ಬೇಸರದ ವಿಷಯವೆಂದರೆ ತಂದೆಯಂತೆ ಅವರು ಚಿತ್ರರಂಗಕ್ಕೆ ಕಾಲಿಡದೆ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದಾರೆ ಮಾತ್ರವಲ್ಲದೆ ಇವರಿಗೆ ಮದುವೆ ಕೂಡ ಆಗಿದೆ. ಈಗ ಸದ್ಯಕ್ಕೆ ರಂಜಿತಾ ರವರು ತಮ್ಮ ಗಂಡನೊಂದಿಗೆ ಸುಖ ಸಂಸಾರವನ್ನು ನಡೆಸುತ್ತಿದ್ದಾರೆ. ಇನ್ನು ಟೆನ್ನಿಸ್ ಕೃಷ್ಣರವರ ಕುರಿತಂತೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಬಾಕ್ಸ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Leave A Reply

Your email address will not be published.