Neer Dose Karnataka
Take a fresh look at your lifestyle.

ಸಿಂಪಲ್ ಎಂದು ಹೇಳಿ ನಿಖಿಲ್ ಕುಮಾರ್ ರವರು ರೇವತಿ ಅವರ ಸೀಮಂತ ಕಾರ್ಯಕ್ರಮಕ್ಕೆ ಖರ್ಚು ಮಾಡಿದ್ದು ಎಷ್ಟು ಕೋಟಿ ಗೊತ್ತೇ??

ನಮಸ್ಕಾರ ಸ್ನೇಹಿತರೇ ಸ್ಯಾಂಡಲ್ವುಡ್ನಲ್ಲಿ ಇತ್ತೀಚಿನ ದಿನಗಳಲ್ಲಿ ಸುದ್ದಿಯಲ್ಲಿರುವ ಜೋಡಿಗಳು ಎಂದರೆ ನಿಖಿಲ್ ಕುಮಾರ್ ಹಾಗೂ ರೇವತಿ ದಂಪತಿಗಳು. ಹೌದು ಸ್ನೇಹಿತರೆ ಅರೆಂಜ್ ಮ್ಯಾರೇಜ್ ಆಗಿದ್ದರೂ ಕೂಡ ನಿಖಿಲ್ ಕುಮಾರ್ ಹಾಗೂ ರೇವತಿ ಜೋಡಿ ಅಭಿಮಾನಿಗಳಿಗೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರ ಫೇವರೆಟ್ ಆಗಿದ್ದಾರೆ. ಇನ್ನು ಕಳೆದ ವರ್ಷ ಲಾಕ್ಡೌನ್ ನಲ್ಲಿ ಮದುವೆಯಾಗಿದ್ದ ನಿಖಿಲ್ ಹಾಗೂ ರೇವತಿ ಬೆಂಗಳೂರಿಗೆ ಬರದೆ ರಾಮನಗರದ ತೋಟದ ಮನೆಯಲ್ಲೇ ಇದ್ದರು.

ಇನ್ನು ರೇವತಿ ಯವರು ಆರ್ಕಿಟೆಕ್ಟ್ ಆಗಿದ್ದರಿಂದ ರಾಮನಗರದ ತೋಟದ ಮನೆಯಲ್ಲಿ ಪರಿಸರಸ್ನೇಹಿ ಮನೆಯೊಂದನ್ನು ಕಟ್ಟಲು ಪ್ರಾರಂಭಿಸಿದರು. ಇನ್ನು ದಿನಕಳೆದಂತೆ ನಿಖಿಲ್ ಕುಮಾರ್ ರವರು ಚಿತ್ರೀಕರಣದಲ್ಲಿ ಕೂಡ ಬ್ಯುಸಿಯಾದರು. ಇದರ ನಡುವಲ್ಲಿ ನಿಖಿಲ್ ಹಾಗೂ ರೇವತಿ ದಂಪತಿಗಳು ವಿವಾಹದ ವಾರ್ಷಿಕೋತ್ಸವದ ಕೂಡ ಸಂಭ್ರಮದಿಂದ ಆಚರಿಸಿಕೊಂಡಿದ್ದರು. ಇದಾದ ಕೆಲವೇ ತಿಂಗಳಲ್ಲಿ ರೇವತಿ ಅವರು ಗರ್ಭವತಿಯಾಗಿದ್ದು ಎಲ್ಲರಿಗೂ ತಿಳಿದು ಇಡೀ ಕುಟುಂಬವೇ ಸಂತೋಷದಿಂದ ಕುಣಿದಾಡಿದರು. ಇತ್ತೀಚಿಗಷ್ಟೇ ನಿಖಿಲ್ ಕುಮಾರ್ ರವರು ತಮ್ಮ ಪತ್ನಿಯ ಸೀಮಂತ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಿದ್ದಾರೆ ಎಂಬ ಮಾಹಿತಿ ಸಿಕ್ಕಿತು ಆದರೆ ಅದು ಹೇಳಿದಷ್ಟು ಸರಳವಾಗಿರಲಿಲ್ಲ.

ಹೌದು ಸ್ನೇಹಿತರೆ ನಿಖಿಲ್ ಕುಮಾರ್ ರವರು ತಮ್ಮ ಪತ್ನಿಯ ಸೀಮಂತ ಕಾರ್ಯಕ್ರಮವನ್ನು ಬೆಂಗಳೂರಿನ ಹೆಚ್ ಎಸ್ ಆರ್ ಲೇಔಟ್ ನ ಮಾನ್ವಿ ಕನ್ವೆನ್ಷನ್ ಹಾಲ್ನಲ್ಲಿ ಅದ್ದೂರಿಯಾಗಿ ಮಾಡಿದ್ದಾರೆ. ಈ ಸಮಾರಂಭದಲ್ಲಿ ಕುಟುಂಬದ ಸದಸ್ಯರು ಸ್ನೇಹಿತರು ಹಾಗೂ ರಾಜಕಾರಣ ಹಾಗೂ ಸಿನಿಮಾ ಕ್ಷೇತ್ರದ ಗಣ್ಯರು ಕೂಡ ಭಾಗವಹಿಸಿದ್ದರು. ಇನ್ನು ಇಲ್ಲಿ ತರಹೇವಾರಿ ತಿನಿಸುಗಳನ್ನು ಕೂಡ ಭೋಜನಕ್ಕಾಗಿ ಮಾಡಲಾಗಿತ್ತು. ಇನ್ನು ಇಲ್ಲಿ ಎಲ್ಲರಿಗೂ ಊಟಕ್ಕಾಗಿ ಬೆಳ್ಳಿಯ ತಟ್ಟೆಗಳನ್ನು ಇಡಲಾಗಿತ್ತು. ಊಹಿಸಿದ್ದಕ್ಕಿಂತಲೂ ನಿಖಿಲ್ ಕುಮಾರ್ ಅವರು ತಮ್ಮ ಪತ್ನಿಯ ಸೀಮಂತ ಕಾರ್ಯಕ್ರಮವನ್ನು ಅದ್ದೂರಿಯಾಗಿ ಮಾಡಿ ಮುಗಿಸಿದ್ದಾರೆ. ಹೌದು ಸ್ನೇಹಿತರೆ ನಿಖಿಲ್ ಕುಮಾರ್ ರವರು ರೇವತಿ ಅವರ ಸೀಮಂತ ಕಾರ್ಯಕ್ರಮಕ್ಕಾಗಿ ಬರೋಬ್ಬರಿ 8.7 ಕೋಟಿ ರೂಪಾಯಿಗಳಷ್ಟು ಖರ್ಚು ಮಾಡಿದ್ದಾರೆ. ಈ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Comments are closed.