Neer Dose Karnataka
Take a fresh look at your lifestyle.

ವಿಷ್ಣುವರ್ಧನ್ ಸರ್ ರಾವರಿಗಾಗಿ ಮೋದಿ ರವರಿಗೆ ಹೊಸ ಬೇಡಿಕೆಯಿಟ್ಟ ಒಳ್ಳೆ ಹುಡುಗ ಪ್ರಥಮ್, ಐತಿಹಾಸಿಕ ನಿರ್ಧಾರ ತೆಗೆದುಕೊಳ್ಳುತ್ತಾ ಕೇಂದ್ರ??

10

ನಮಸ್ಕಾರ ಸ್ನೇಹಿತರೇ ರಾಜ್ಯದಲ್ಲಿ ಕರೋನಾ ತುಸು ಕಡಿಮೆಯಾದ ಹಿನ್ನೆಲೆಯಲಿ ಸಿನಿಮಾ ಶೂಟಿಂಗ್ ಗಳೂ ಕೂಡ ಒಂದರ ಹಿಂದೊಂದರಂತೆ ಶುರುವಾಗಿದೆ. ಆದರೆ ಸಿನಿಮಾ ನಟ ನಟಿಯರು ಕೇವಲ ಶೂಟಿಂಗ್ ನಲ್ಲಿ ಪಾಲ್ಗೊಳ್ಳುವುದು ಮಾತ್ರವಲ್ಲ, ಇದರ ಜೊತೆಗೆ ಕನ್ನಡದ ಸಿನಿಮಾ ರಂಗದಲ್ಲಿ ನಿರಂತರವಾಗಿ ಸೇವೆ ಸಲ್ಲಿಸಿರುವ ಮಹಾನ್ ನಟ ನಟಿಯರಿಗೆ ಪ್ರತಿಷ್ಠಿತ ಪ್ರಶಸ್ತಿಗಳನ್ನು ಪ್ರಧಾನ ಮಾಡಬೇಕು ಎಂದು ಅಭಿಯಾನವನ್ನು ಶುರು ಮಾಡಿದ್ದಾರೆ. ಇದರ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ನಟ ನಟಿಯರು ಅವಿರತವಾಗಿ ಕಲಾ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ಇದರಲ್ಲಿ ಕೇವಲ ದುಡ್ಡಿಗಾಗಿ ಮಾತ್ರವಲ್ಲ, ಕನ್ನಡದ ಮೇಲಿನ ಅಭಿಮಾನವೂ ಕೂಡ ಒಂಡು ಕಾರಣ ಎನ್ನಬಹುದು. ಕರ್ನಾಟಕದಿಂದ ಸ್ಯಾಂಡಲ್ ವುಡ್ ನಿಂದ ಭಾರತದ ನಾಗರಿಕ ಪ್ರಶಸ್ತಿಗೆ ಈ ಎರಡು ದಿಗ್ಗಜರ ಹೆಸರುಗಳನ್ನು ಸೂಚಿಸಲಾಗುತ್ತಿದೆ. ಅದರಲ್ಲಿ ಒಂದು ಗಾನ ಸಾಮ್ರಾಟ, ಕನ್ನಡ ಚಿತ್ರರಂಗದ ಮಹಾ ಗುರು ಹಂಸಲೇಖ ಅವರದ್ದು. ಇವರು ಕನ್ನಡ ಚಿತ್ರರಂಗದಲ್ಲಿ ಸಿನಿಮಾ ಹಾಡಿಗೆ ಕೊಡುತ್ತಿರುವ ಕೊಡುಗೆ ಅಷ್ಟಿಷ್ಟಲ್ಲ. ಅವರನ್ನು ಹಾಗಾಗಿ ಮಹಾ ಗುರು ಎಂದೇ ಕರೆಯಲಾಗುತ್ತಿದೆ. ಹಾಗೆಯೇ ಕನನ್ಡ ಚಿತ್ರರಂಗವನ್ನು ತಮ್ಮ ನಟನೆಯ ಮೂಲಕವೇ ಆಳುತ್ತಿರುವ ಇನ್ನೊಬ್ಬ ನಟ ಅನಂತ ನಾಗ್ ಅವರು.

ನಾಯಕ ನಟನಾಗಿ ಹಲವಾರು ಚಿತ್ರಗಳಲ್ಲಿ ಅಭಿನಯಿಸಿ, ಇದೀಗ ಪೋಷಕ ನಟನಾಗಿ ನಟಿಸುತ್ತಿದ್ದರೂ ಕೂಡ ಅವರ ಪಾತ್ರಗಳು ಸಾಕಷ್ಟು ವಿಭಿನ್ನವಾಗಿರುತ್ತವೆ. ಇಂಥ ಕಲಾ ಸೇವಕನಿಗೆ ಪದ್ಮಶ್ರೀ ನೀಡಬೇಕು ಎಂದು ರಿಷಭ್ ಶೆಟ್ಟಿ ಕೂಡ ಪೋಸ್ಟ್ ಹಾಕಿಕೊಂಡಿದ್ದಾರೆ. ಕರ್ನಾಟಕ ಸರ್ಕಾರ ಯಾರಿಗೆ ಪದ್ಮ ಪ್ರಶಸ್ತಿ ಸಿಗಬೇಕು ಎಂಬುದರ ಬಗ್ಗೆ ಪೀಪಲ್ಸ್ ಪದ್ಮ ಅಭಿಯಾನದ ಮೂಲಕ ಜನರ ಅಭಿಪ್ರಾಯಗಳನ್ನು ಕಲೆ ಹಾಕುತ್ತಿದ್ದು, ನಟ ನಟಿಯರೂ ಕೂಡ ತಮ್ಮ ಅಭಿಪ್ರಾಯಗಳನ್ನು ತಿಳಿಸುತ್ತಿದ್ದಾರೆ. ಇನ್ನು ಬಿಗ್ ಬಾಸ್ ವಿನ್ನರ್ ಆಗಿದ್ದ ಒಳ್ಳೆ ಹುಡುಗ ಪ್ರಥಮ್ ಇನ್ನೊಂದು ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಸುಮಾರು 40 ವರ್ಷಗಳ ಕಾಲ ಕಲಾ ಸೇವೆ ಸಲ್ಲಿಸಿದ್ದ ಡಾ. ವಿಷ್ಣು ವರ್ಧನ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಬೇಕು. ಅವರಿಗೆ ಒಂದು ಗೌರವಪೂರ್ಣ ಸ್ಮಾರಕ ನೀಡಲು 10 ವರ್ಷಗಳೇ ಕಳೆಯಿತು. ಇಂಥ ಮಹಾನ್ ನಟರಿಗೆ ಮೊದಲು ಗೌರವ ಸಿಗಬೇಕು ಎಂದು ಟ್ವೀಟ್ ಮಾಡಿದ್ದಾರೆ. ಇದಕ್ಕೆ ವಿಷ್ಣು ದಾದಾ ಅವರ ಸಾಕಷ್ಟು ಅಭಿಮಾನಿಗಳು ಬೆಂಬಲ ಸೂಚಿಸಿದ್ದಾರೆ.

Leave A Reply

Your email address will not be published.