Neer Dose Karnataka
Take a fresh look at your lifestyle.

ಒಂದು ಕಾಲದ ಟಾಪ್ ನಟಿ ಕಾಂಚನ ರವರಿಗೆ ಸ್ವಂತ ತಂದೆ ತಾಯಿಯೇ ಮೋಸ ಮಾಡಿ, ಇಂದು ಕಾಂಚನ ರವನ್ನು ಯಾವ ಪರಿಸ್ಥಿತಿಗೆ ತಂದಿದ್ದಾರೆ ಗೊತ್ತೇ??

10

ನಮಸ್ಕಾರ ಸ್ನೇಹಿತರೇ ಇಂದಿನ ಕಾಲದಲ್ಲಿ ಮಾತ್ರವಲ್ಲದೆ ಅಂದಿನ ಕಾಲದಲ್ಲಿ ಕೂಡ ದಕ್ಷಿಣ ಭಾರತ ಚಿತ್ರರಂಗದಲ್ಲಿ ಬಹುಭಾಷಾ ತಾರೆಯರು ಸುಪ್ರಸಿದ್ಧರಾಗಿದ್ದರು. ತಮ್ಮ ನಟನೆಯ ಮೂಲಕ ಭಾಷೆಯ ಎಲ್ಲೆಯನ್ನು ಮೀರಿ ಎಲ್ಲಾ ಭಾಷೆಗಳಲ್ಲಿ ಕೂಡ ನಾಯಕನಟಿಯರಾಗಿ ನಟಿಸಿದ್ದರು. ಅವರಲ್ಲಿ ಇಂದು ನಾವು ಒಬ್ಬರ ಕುರಿತಂತೆ ಹೇಳಲು ಹೊರಟಿದ್ದೇವೆ ಅವರೇ ಕಾಂಚನ ರವರು. ಹೌದು ಸ್ನೇಹಿತರೆ ಆಂಧ್ರಪ್ರದೇಶದ ಮೂಲದವರಾಗಿದ್ದ ರು ಕೂಡ ಅವರು ಬೆಳೆದಿದ್ದು ಚೆನ್ನೈನಲ್ಲಿ. ಇನ್ನು ಕಾಂಚನ ಎಂದರೆ ನಿಮಗೆ ಸಡನ್ನಾಗಿ ನೆನಪಾಗಿರಲಿಕ್ಕಿಲ್ಲ.

ಹೌದು ಸ್ನೇಹಿತರೆ ಕಾಂಚನ ರವರು ಬೇಡಿಕೆಯಲ್ಲಿ ಇದ್ದಿದ್ದು 60 ಹಾಗೂ ಎಪ್ಪತ್ತರ ದಶಕದಲ್ಲಿ. ಇನ್ನು ಅವರು ನಟಿಸಿರುವ ಪ್ರಮುಖ ಕನ್ನಡ ಚಿತ್ರ ಎಂದರೆ ಬಬ್ರುವಾಹನ ಎಂದಾಗ ನಿಮಗೆ ಅವರು ಯಾರು ಯಾರೆಂದು ನೆನಪಾಗಬಹುದು. ಇನ್ನು ಅವರು ದಕ್ಷಿಣ ಭಾರತದ ಎಲ್ಲಾ ಚಿತ್ರರಂಗದಲ್ಲಿಯೂ ಕೂಡ ಬಹು ಬೇಡಿಕೆಯ ನಟಿಯಾಗಿ ಸಾಕಷ್ಟು ಹಣವನ್ನು ಸಂಪಾದಿಸುತ್ತಾರೆ. ಇನ್ನು ಒಮ್ಮೆ ಕಾಂಚನ ರವರ ತಂದೆ-ತಾಯಿ ಖಾಲಿ ಪತ್ರಕ್ಕೆ ಕಾಂಚನ ರವರಿಂದ ಸಹಿ ಹಾಕಿಸಿಕೊಳ್ಳುತ್ತಾರೆ. ಅವರ ಆಸ್ತಿಯನ್ನೆಲ್ಲ ಅವರ ತಂದೆ ತಾಯಿಯರೇ ಲಪಟಾಯಿಸಿ ಕೊಳ್ಳುತ್ತಾರೆ. ಮಾತ್ರವಲ್ಲದೆ ಮನೆಯಿಂದಲೂ ಕೂಡ ಹೊರದಬ್ಬಲ್ಪಡುತ್ತಾರೆ.

ಇದಾದ ನಂತರ ಅವರಿಗೆ ಅರಿವಾಗುತ್ತದೆ ತನಗೆ ಯಾಕೆ ಮದುವೆ ಮಾಡಿಸಿಲ್ಲ ಎಂಬುದಾಗಿ. ಇನ್ನು ಈ ಕುರಿತಂತೆ ಕಾಂಚನ ಅವರು ಕೋರ್ಟಿಗೆ ಮೊರೆ ಹೋಗುತ್ತಾರೆ. ಈ ಪ್ರಕರಣದಲ್ಲಿ ಕಾಂಚನ ರವರು 2010 ರಲ್ಲಿ ವಿಜಯ ಸಾಧಿಸುತ್ತಾರೆ. ಆದರೆ ಅಷ್ಟೊತ್ತಿಗಾಗಲೇ ಕಾಂಚನ ಅವರು ಸಂಪೂರ್ಣವಾಗಿ ಅಧ್ಯಾತ್ಮಿಕವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಹೀಗಾಗಿ 15 ಕೋಟಿ ರೂಪಾಯಿಯನ್ನು ತಿರುಪತಿ ತಿಮ್ಮಪ್ಪನ ಸನ್ನಿಧಾನಕ್ಕೆ ನೀಡುತ್ತಾರೆ ನಟಿ ಕಾಂಚನ ರವರು. ಇನ್ನು ಕಾಂಚನ ಅವರ ಬಾಳಿನ ಸ್ಟೋರಿಯನ್ನು ನೋಡಿ ನಿಮಗೆ ಏನು ಅನಿಸಿತು ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡೋ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Leave A Reply

Your email address will not be published.