ಧಾರಾವಾಹಿ ನಟರ ಸಂಭಾವನೆ ಎಷ್ಟು ಗೊತ್ತಾ? ಇವರುಗಳಲಿ ಯಾರು ಹೆಚ್ಚು ಸ್ಥಿತಿವಂತರು ಗೊತ್ತೇ?? ಒಬ್ಬೊರರ ಸಂಭಾವನೆ ಎಷ್ಟು ಗೊತ್ತೇ??
ನಮಸ್ಕಾರ ಸ್ನೇಹಿತರೇ, ಹಿರಿತೆರೆ ಮಾತ್ರವಲ್ಲ, ಇದೀಗ ಕಿರುತೆರೆ ಧಾರಾವಾಹಿಗಳಲ್ಲೂ ಅದ್ಧೂರಿಯಾಗಿ ಚಿತ್ರೀಕರಣ ನಡೆಸಲಾಗುತ್ತದೆ. ಮದುವೆ ಮೊದಲಾದ ಕಾರ್ಯಕ್ರಮಗಳನ್ನಂತೂ ಬಹಳ ಐಷಾರಾಮಿ ಸೇತ್ ಗಳನ್ನು ಹಾಕಿ ಚಿತ್ರೀಕರಣ ಮಾಡಲಾಗುತ್ತದೆ. ಅಂದ ಮೇಲೆ ಇದರಲ್ಲಿ ನಟಿಸುವ ನಟ ನಟಿಯರ ಬಗ್ಗೆ ಕೇಳಬೇಕಾ? ಅವರ ಗೆಟಪ್ ಗಳೂ ಹಾಗೆಯೇ ಇರುತ್ತವೆ. ಹಾಗಾದ್ರೆ ನಿಜ ಜೀವನದಲ್ಲಿ ನಿಮ್ಮ ನೆಚ್ಚಿನ ಹಿರೋಗಳಿಗೆ ಸಿಗುವ ಸಂಭಾವನೆ ಎಷ್ಟು? ಎಷ್ಟು ಮೌಲ್ಯದ ಆಸ್ತಿ ಹೊಂದಿದ್ದಾರೆ ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ.
ತ್ರಿವೇಣಿ ಸೀರಿಯಲ್ ಖ್ಯಾತಿಯ ಚಂದು ಬಿ ಗೌಡಅವರು ಸುಂದರವಾದ ಲುಕ್ ಹೊಂದಿದ್ದಾರೆ. ವರಿಗೆ ಒಂದು ಎಪಿಸೋಡ್ ಗೆ ಸಿಗುವ ಸಂಭಾವನೆ 14 ಸಾವಿರ ರೂಪಾಯಿ. ಇವರ ಈಗಿನ ಆಸ್ತಿ ಮೌಲ್ಯ 1.2 ಕೋಟಿ ರೂಪಾಯಿ. ಇನ್ನು ಕೃಷ್ಣ ಸುಂದರಿ ಧಾರಾವಾಹಿಯಲ್ಲಿ ನಟಿಸುತ್ತಿರುವ ದಿಲೀಪ್ ಶೆಟ್ಟಿ. ಇವರಿಗೆ ಒಂದು ಎಪಿಸೋಡ್ ಗೆ 15 ಸಾವಿರ ರೂಪಾಯಿ ಸಂಭಾವನೆ ನೀಡಲಾಗುತ್ತದೆ. ಇವರು ಒಟ್ಟೂ 1.4 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ.
ಸತ್ಯ ಧಾರವಾಹಿಯ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ ಸಾಗರ್ ಬಿಳಿಗೌಡ. ಇವರಿಗೆ ಎಪಿಸೋಡ್ ಒಂದಕ್ಕೆ ಸಿಗುವ ಸಂಭಾವನೆ 8 ರಿಂದ 25,000 ರೂಪಾಯಿಗಳು. ಲಕ್ಷಣ ಸೀರಿಯಲ್ ನ ನಟ ಜಗನ್ ಚಂದ್ರಶೇಖರ್. ಇವರು ಬಿಗ್ ಬಾಸ್ ಸ್ಪರ್ಧಿ ಕೂಡ ಆಗಿದ್ದವರು. ಲಕ್ಷಣ ಧಾರಾವಾಹಿಯ ನಿರ್ಮಾಪಕ ಹಾಗೂ ನಟರಾದ ಜಗನ್ ಒಟ್ಟೂ 2.5 ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ಇನ್ನು ಮರಳಿ ಮನಸಾಗಿದೆ ಧಾರವಾಹಿ ಖ್ಯಾತಿಯ ಚಂದನ್ ಕುಮಾರ್ ಕೂಡ ಬಿಗ್ ಬಾಸ್ ಸ್ವರ್ಧಿಯಾಗಿದ್ದವರು. ಇತ್ತೀಚಿಗೆ ಕವಿತಾ ಅವರನ್ನು ಮದುವೆಯಾದ ಇವರು ತಮ್ಮ ನಟನೆಗೆ ಒಂದು ಎಪಿಸೋಡ್ ಗಾಗಿ ಸುಮಾರು 10 ಸಾವಿರ ರೂಪಾಯಿ ಸಂಬಾವನೆ ಪಡೆಯುತ್ತಾರೆ. ಒಂದು ಅಂದಾಜಿನ ಪ್ರಕಾರ ಇವರಿಗೆ ಇರುವ ಆಸ್ತಿ 2.5 ಕೋಟಿ ಮೌಲ್ಯದ್ದು.
ಕನ್ನಡತಿ ಸೀರಿಯಲ್ ನ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿರುವ ಕಿರಣ್ ರಾಜ್. ಇಂದಿನ ಯೂತ್ ಐಕಾನ್ ಆಗಿರುವ ಕಿರಣ್ ರಾಜ್ ಒಂದು ಎಪಿಸೋಡ್ ಗೆ ಸುಮಾರು 16 ರಿಂದ 30 ಸಾವಿರ ಸಂಭಾವನೆ ಗಳಿಸುತ್ತಿದ್ದಾರ್ಎ. ಇನ್ನು ಇವರ ಒಟ್ಟು ಆಸ್ತಿ ಮೌಲ್ಯ 3.5 ಕೋಟಿ. ಪುಟ್ಟ ಗೌರಿ ಮದುವೆಯ ಮಹೇಶ ಅಥವಾ ಗಟ್ಟಿಮೇಳ ಧಾರಾವಾಹಿ ಖ್ಯಾತಿಯ ನಟ ರಕ್ಷಿತ್ ಗೌಡ. ಇನ್ನು ಇವರು ನಿರ್ಮಾಪಕರೂ ಆಗಿದ್ದು ಇವರು 5ರಿಂದ 6 ಕೋಟಿ ರೂಪಾಯಿ ಮೌಲ್ಯದ ಆಸ್ತಿಯ ಒಡೆಯ.
ಹಾಗೆಯೇ ಜೊತೆ ಜೊತೆಯಲಿ ಧಾರಾವಾಹಿ ಖ್ಯಾತಿಯ ನಟ ಆರ್ಯವರ್ಧನ್ ಅಲಿಯಾಸ್ ಅನಿರುದ್ಧ. ಇವರಿಗೆ ಒಂದು ಎಪಿಸೋಡ್ ಗಾಗಿ ಸುಮಾರು 35ರಿಂದ 50 ಸಾವಿರ ರೂಪಾಯಿ ಸಂಭಾವನೆ ಸಿಗತ್ತೆ. 10 ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ಇನ್ನು ಇತ್ತೀಚಿಗೆ ಶುರುವಾಗಿ ಬಹಳ ಬೇಗ ಹೆಟ್ ಆಗುತ್ತಿರುವ ಧಾರಾವಾಹಿ ಹಿಟ್ಲರ್ ಕಲ್ಯಾಣ. ಇದರ ಮುಖ್ಯಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ದಿಲೀಪ್ ರಾಜ್. ಈ ಸೀರಿಯಲ್ ನಲ್ಲಿ ನಟಿಸುತ್ತಿರುವುದು ಮಾತ್ರವಲ್ಲದೇ ಸೀರಿಯಲ್ ನ ನಿರ್ಮಾಪಕರೂ ಆಗಿರುವ ದಿಲೀಪ್ ರಾಜ್ ಅವರ ಒಟ್ಟು ಆಸ್ತಿ ಮೌಲ್ಯ ಸುಮಾರು 11 ಕೋಟಿ ಎಂದು ಅಂದಾಜಿಸಲಾಗಿದೆ.