Neer Dose Karnataka
Take a fresh look at your lifestyle.

ಬರುತ್ತಿದೆ ವಿಷ್ಣು ಅಭಿನಯದ ಬಂಧನ – 2 ಸಿನಿಮಾ, ವಿಷ್ಣು ದಾದಾ ಪಾತ್ರದಲ್ಲಿ ಅಭಿನಯಿಸುತ್ತಿರುವ ಟಾಪ್ ನಟ ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲಾ ತಿಳಿದಿರುತ್ತದೆ. ಸಾಹಸ ಸಿಂಹ, ಅಭಿನಯ ಭಾರ್ಗವ ವಿಷ್ಣುವರ್ಧನ್ ಅಭಿನಯದ ಸೂಪರ್ ಹಿಟ್ ಸಿನಿಮಾ ಯಾವುದೆಂದರೇ ಅದು ಬಂಧನ ಎಂದು. ವಿಷ್ಣುವರ್ಧನ್ ಅಭಿನಯದ ಹಲವಾರು ಸಿನಿಮಾಗಳು ಸೂಪರ್ ಹಿಟ್ ಆದರೂ, ಬಂಧನಕ್ಕೆ ಮಾತ್ರ ವಿಶೇಷ ಸ್ಥಾನಮಾನ. ಮಹಿಳೆಯರು ಕೊಂಚ ಜಾಸ್ತಿ ಇಷ್ಟಪಟ್ಟ ಸಿನಿಮಾ ಅದು. ಸಿನಿಮಾದ ಎಲ್ಲಾ ಹಾಡುಗಳು ಸೂಪರ್ ಹಿಟ್ ಆಗಿದ್ದವು. ಡಾಕ್ಟರ್ ಹರೀಶ್ ಆಗಿ ವಿಷ್ಣುವರ್ಧನ್, ಡಾಕ್ಟರ್ ನಂದಿನಿ ಆಗಿ ಸುಹಾಸಿನಿ, ಜೈ ಜಗದೀಶ್ ಅಭಿನಯ ಮನೋಜ್ಞವಾಗಿತ್ತು. ಈ ಸಿನಿಮಾ ಬಿಡುಗಡೆಯಾದ 18 ಚಿತ್ರಮಂದಿರಗಳಲ್ಲಿ ಶತದಿನದ ಪ್ರದರ್ಶನ ಕಂಡು, ಹಲವು ಚಿತ್ರಮಂದಿರಗಳಲ್ಲಿ 25 ವಾರ ಓಡಿತ್ತು. ಒಂದು ಥಿಯೇಟರ್ ನಲ್ಲಿ ಬರೋಬ್ಬರಿ 469 ದಿನ ಪ್ರದರ್ಶನ ಕಂಡಿತ್ತು. ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ಈ ಸಿನಿಮಾ, ಬಾಬು ಹಾಗೂ ವಿಷ್ಣುವರ್ಧನ್ ಸಿನಿಮಾ ಕರಿಯರ್ ಗೆ ದೊಡ್ಡ ಬ್ರೇಕ್ ಸಹ ನೀಡಿತ್ತು.

ಇತ್ತೀಚಿಗೆ ಹಳೆಯ ಸೂಪರ್ ಹಿಟ್ ಸಿನಿಮಾಗಳ ಸಿಕ್ವೇಲ್ ಆರಂಭವಾಗಿತ್ತು. ಈಗ ಆ ಸರಣಿಗೆ ಬಂಧನ ಸಿನಿಮಾ ಸಹ ಸೇರಿದೆ. ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬುರವರೇ ಬಂಧನ – 2 ಚಿತ್ರವನ್ನ ನಿರ್ದೇಶಿಸುತ್ತಿದ್ದಾರೆ. ಈ ವಿಷಯವನ್ನ ಇತ್ತಿಚೆಗೆ ಬಹಿರಂಗಪಡಿಸಿದ ಬಾಬು , ಬಂಧನ – 2 ಸಿನಿಮಾಕ್ಕೆ ಸ್ರ್ಕಿಪ್ಟ್ ವರ್ಕ್ ನಡೆಯುತ್ತಿದ್ದು, ಅಣಜಿ ನಾಗರಾಜ್ ಬಂಡವಾಳ ಹೂಡುತ್ತಿದ್ದಾರೆ. ಇನ್ನು ಹಳೇ ಬಂಧನ ಸಿನಿಮಾದ ಪಾತ್ರಗಳು ಇಲ್ಲಿ ಮುಂದುವರಿಯಲಿದ್ದು, ಸುಹಾಸಿನಿ, ಜೈ ಜಗದೀಶ್ ತಾರಾಗಣದಲ್ಲಿ ಕಾಣಿಸಕೊಳ್ಳಲಿದ್ದಾರೆ.

ಇನ್ನು ಈ ಸಿನಿಮಾದ ನಾಯಕ ನಟನಾಗಿ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ರವರ ಪುತ್ರ, ಡೆಡ್ಲಿಸೋಮ ಖ್ಯಾತಿಯ ನಟ ಆದಿತ್ಯರವರೇ ಕಾಣಿಸಕೊಳ್ಳಲಿದ್ದಾರೆ. ರಾಜೇಂದ್ರ ಸಿಂಗ್ ಬಾಬುರವರ ಪ್ರಕಾರ ಬಂಧನ-2 ಒಂದು ರೀತಿಯಲ್ಲಿ ಹಳೇ ಬೇರು ಮತ್ತು ಹೊಸ ಚಿಗುರುಗಳ ಸಮ್ಮಿಶ್ರಣ ಎಂದು ಹೇಳಬಹುದು ಎಂದಿದ್ದಾರೆ. ಇದೇ ನವೆಂಬರ್ ಅಥವಾ ಡಿಸೆಂಬರ್ ನಲ್ಲಿ ಸಿನಿಮಾ ಸೆಟ್ಟೇರಲಿದ್ದು ಆದಷ್ಟು ಬೇಗ ಜನರ ಮುಂದೆ ಬರಲಿದ್ದೇವೆ ಎಂದು ಸಿಂಗ್ ಬಾಬು ಹೇಳಿದ್ದಾರೆ. ಸುಹಾಸಿನಿ-ವಿಷ್ಣುವರ್ಧನ್ ಜೋಡಿಯ ನಟನೆ ನೋಡಿ ಖುಷಿಪಟ್ಟಿದ್ದ ಎಲ್ಲರೂ ಬಂಧನ-2 ಸಿನಿಮಾವನ್ನು ನೋಡಿ ಸಹ ಇಷ್ಟಪಡಲಿದ್ದಾರೆ ಎಂಬ ವಿಶ್ವಾಸವನ್ನು ನಿರ್ದೇಶಕರು ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Comments are closed.