Neer Dose Karnataka
Take a fresh look at your lifestyle.

ಜೊತೆ ಜೊತೆಯಲಿಯಲ್ಲಿ ಅನು-ಆರ್ಯ ಮದುವೆಯ ಎಪಿಸೋಡ್ ಗಳಿಗೆ ಖರ್ಚು ಮಾಡಲಾಗಿರುವ ಹಣ ಎಷ್ಟು ಕೋಟಿ ಗೊತ್ತೇ??

ನಮಸ್ಕಾರ ಸ್ನೇಹಿತರೇ ಸಿನಿಮಾರಂಗದಲ್ಲಿ ಕೆಲವು ಅದ್ದೂರಿ ಚಿತ್ರಗಳನ್ನು ನಿರ್ಮಾಣಮಾಡಲಾಗುತ್ತದೆ. ಅವುಗಳನ್ನು ಹೈ ಬಜೆಟ್ ಫಿಲ್ಮ್ ಎನ್ನಲಾಗುತ್ತದೆ. ತಮಿಳು, ತೆಲುಗು, ಹಿಂದಿ ಚಿತ್ರಗಳಂತೆ ಕನ್ನಡದಲ್ಲಿಯೂ ಕೂಡ ಅಧಿಕ ಬಂಡವಾಳ ಹೂಡಿ ಚಿತ್ರಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಅದರಲ್ಲೂ ಕಮರ್ಶಿಲ್ ಚಿತ್ರಗಳನ್ನು ವಿದೇಶಗಳಲ್ಲಿಯೂ ಕೂಡ ಚಿತ್ರೀಕರಣ ಮಾಡಲಾಗುತ್ತದೆ. ಜೊತೆಗೆ ಬಾಲಿವುಡ್ ನಿಂದ ಅಥವಾ ಇತರ ಭಾಷೆಗಳಿಂದ ನಟಿಯರನ್ನೂ ಕೂಡ ಕರೆಸಿಕೊಳ್ಳಲಾಗುತ್ತದೆ. ಅರೆ ಇದ್ಯಾಕೆ ಸಿನಿಮಾ ಬಗ್ಗೆ ಇಷ್ಟೊಂದು ಮಾತಾಡ್ತಾ ಇದ್ದೇವೆ ಅಂತನಾ. ಬರಿ ಸಿನಿಮಾ ಮಾತ್ರವಲ್ಲ ನಿಮ್ಮ ನೆಚ್ಚಿನ ಧರವಹಿಗಳೂ ಕೂಡ ಇದೆ ‘ಹೈ ಬಜೆಟ್’ ನಿರ್ಮಾಣದ ಸಾಲಿಗೆ ಸೇರಿಕೊಳ್ಳುತ್ತಿವೆ. ಅದ್ಯಾವ ಧಾರವಾಹಿ ಹೇಳ್ತೀವಿ ನೋಡಿ.

ಸ್ನೇಹಿತರೆ ಇತ್ತೀಚಿಗೆ ಕನ್ನಡ ಧಾರಾವಾಹಿಗಳು ಕಥೆಗಳಿಗಿಂತ ಹೆಚ್ಚಾಗಿ ಜನರನ್ನು ಆಕರ್ಷಿಸುತ್ತಾ ಇರುವುದು ಧಾರವಾಹಿ ನಿರ್ಮಾಣ. ಹೌದು ಕನ್ನಡ ಕಿರುತೆರೆಯಲ್ಲಿ ವೈಭವವನ್ನು ತೋರಿಸುವಂಥ ಇತರ ಭಾಷೆಯ ಧಾರಾವಾಹಿಗಳು ರಿಮೇಕ್ ಆಗ್ತಾ ಇರೋದು ನಮಗೆಲ್ಲ ಗೊತ್ತೇ ಇದೆ. ಈ ಧಾರಾವಾಹಿಗಳಲ್ಲಿ ಎಲ್ಲವನ್ನೂ ಅದ್ದೂರಿ ಸೆಟ್ ನಲ್ಲಿ ನಿರ್ಮಾಣ ಮಾಡಲಾಗತ್ತೆ. ಆದರೆ ಇದೀಗ ಕನ್ನಡದ್ದೇ ನಿರ್ಮಾಣದ ಧಾರಾವಾಹಿಗಳೂ ಕೂಡ ಈ ಸಾಲಿಗೆ ಸೇರಿವೆ. ಇದಕ್ಕೆ ಜೊತೆಜೊತೆಯಲಿ ಧಾರಾವಾಹಿಯೇ ಸಾಕ್ಷಿ.

ಹಲವು ಟ್ವಿಸ್ಟ್ ಗಳನ್ನು ನೀಡುತ್ತಿರುವ ಜಿತೆಜೊತೆಯಲಿ ಧಾರಾವಾಹಿ ತಂಡ ಅಭಿಮಾನಿಗಳ ಕಣ್ಣಿಗೆ ತಂಪನ್ನು ಉಣಿಸುವಲ್ಲಿಯೂ ಯಶಸ್ವಿಯಾಗಿದೆ. ಇತ್ತೀಚಿಗೆ ಅನು ಸಿರಿಮನೆ ಹಾಗೂ ಆರ್ಯವರ್ಧನ್ ಅವರ ಮದುವೆಯ ಎಪಿಸೋಡ್ ಗಳನ್ನು ಪ್ರಸಾರ ಮಾಡಲಾಗಿತ್ತು. ಇಲ್ಲಿ ಪ್ರತಿಯೊಂದು ಶಾಸ್ತ್ರಗಳನ್ನು ಸಾಕಷ್ಟು ಐಷಾರಾಮಿ ಸೆಟ್ ಗಳಲ್ಲಿ ಶೂಟ್ ಮಾಡಲಾಗಿತ್ತು. ಪ್ರತಿ ಎಪಿಸೋಡ್ ಗಳೂ ಕೂಡ ರಂಗುರಂಗಾಗಿ ಪ್ರಸಾರವಾಗಿತ್ತು. ಇನ್ನು ಪಾತ್ರಧಾರಿಗಳ ಉಡುಪುಗಳ ಬಗ್ಗೆಯಂತೂ ಕೇಳಲೇಬೇಡಿ. ಯಾವ ರಾಜಮನೆತನದ ಸದಸ್ಯರ ಉಡುಗೆಗೂ ಕಡಿಮೆ ಇಲ್ಲದಷ್ಟು ಅದ್ಭುತವಾಗಿತ್ತು.

ಹಾಗೆಯೇ ಈ ಮದುವೆ ಎಪಿಸೋಡ್ ನ್ನು ಬಾಲಿವುಡ್ ನಟ ನಟಿಯ ಮದುವೆಯಂತೆ ವಿದೇಶಗಲ್ಲಿಯೇ ಚಿತ್ರೀಕರಣ ಮಾಡುವ ಇರಾದೆ ಕೂಡ ಇತ್ತಂತೆ. ಆದರೆ ಕೋವಿಡ್ ಕಾರಣದಿಂದ ಹೊರಗಡೆ ಶೂಟಿಂಗ್ ಮಾಡಲು ಆಗಲಿಲ್ಲ. ಆದರೂ ಯಾವುದೇ ಕೊರತೆ ಕಾಡದ ರೀತಿಯಲ್ಲಿ ಧಾರಾವಾಹಿ ಸೆಟ್ ಹಾಕಲಾಗಿತ್ತು. ಅಂದಹಾಗೆ ಇದಕ್ಕೆಲ್ಲ ಎಷ್ಟು ಖರ್ಚಾಗುರಬಹುದು ಊಹಿಸಬಲ್ಲಿರಾ !? ಯಾವುದೇ ಸಿನಿಮಾ ಗೂ ಕಡಿಮೆ ಇಲ್ಲದ ರೀತಿಯಲ್ಲಿ ಅಂದರೆ ಸುಮಾರು 12 ಕೋಟಿಯಷ್ಟು ವೆಚ್ಚ ಮಾಡಲಾಗಿದೆಯಂತೆ. ಹೌದು ವೀಕ್ಷಕರಿಗೆ ಇಷ್ಟವಾಗಿವ ರೀತಿಯಲ್ಲಿ ಧಾರಾವಾಹಿ ಮಾಡಲು ಅಧಿಕ ಹಣ ಹೂಡಿಕೆ ಮಾಡಿದೆ ಧಾರಾವಾಹಿ ತಂಡ.

Comments are closed.