Neer Dose Karnataka
Take a fresh look at your lifestyle.

ನಮ್ಮ ಕರ್ನಾಟಕದ ಹುಡುಗಿ ರಶ್ಮಿಕಾ ರವರ ಕೊಡಗಿನ ಮನೆ ಹೇಗಿದೆ ಗೊತ್ತಾ?? ಮೊದಲ ಬಾರಿಗೆ ತೋರಿಸ್ತೇವೆ ನೋಡಿ.

ನಮಸ್ಕಾರ ಸ್ನೇಹಿತರೇ, ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ, ಇದೀಗ ಸಾಕಷ್ಟು ಹೆಸರು ಮಾಡಿದಂಥ ನಟಿ. ಕೇವಲ ಕನ್ನಡದಲ್ಲಿ ಮಾತ್ರವಲ್ಲದೇ ಇತರ ಭಾಷೆಗಳಲ್ಲಿಯೂ ಕೂಡ ರಶ್ಮಿಕಾ ತುಂಬಾನ್ ಫೇಮಸ್ ಆಗಿದ್ದಾರೆ. ಇನ್ನು ರಶ್ಮಿಕಾ ಮಂದಣ್ಣ ಕಿರಿಕ್ ಪಾರ್ಟಿಯ ಮೂಲಕ ಕನ್ನಡದಲ್ಲಿ ನಟನೆಗೆ ಎಂಟ್ರಿ ಕೊಟ್ಟು ನಟ ರಕ್ಷಿತ್ ಶೆಟ್ಟಿ ಜೊತೆಗಿನ ಮದುವೆ ವಿಷಯದಲ್ಲಿ ಹಾಗೂ ಕನ್ನಡ ಮಾತನಾಡಲು ಬರುವುದಿಲ್ಲ ಎಂಬ ವಿಷಯಗಳಲ್ಲಿ ಕಿರಿಕ್ ಮಾಡಿಕೊಂಡಿದ್ದು ಎಲ್ಲರಿಗೂ ಗೊತ್ತು.

ಈ ಮಧ್ಯೆ, ರಶ್ಮಿಕಾ ಬಹು ಬೇಡಿಕೆಯ ನಟಿ ಕೂಡ ಹೌದು. ತೆಲುಗಿನ ಗೀತಗೋವಿಂದಮ್ ಚಿತ್ರದ ಮೂಲಕ ದಕ್ಷಿಣ ಭಾರತದ ಚಿತ್ರಗಳಲ್ಲಿಯೂ ನಟನೆ ಆರಂಭಿಸಿ ಸೈ ಎನಿಸಿಕೊಂಡ್ರು. 1996 ಏಪ್ರಿಲ್ 5 ರಂದು ಕೊಡಗಿನ ವಿರಾಜಪೇಟೆಯಲ್ಲಿ ರಶ್ಮಿಕಾ ಅವರ ಜನನ. 2019ನಟನೆಗೆ ಎಂಟ್ರಿ. ಅಲ್ಲಿಂದ ಇಲ್ಲಿವರೆಗೆ ಕೆಲವು ಚಿತ್ರಗಳಲ್ಲಿ ಅಭಿನಯಿಸಿರುವ ರಶ್ಮಿಕಾ ಕಿರಿಕ್ ಪಾರ್ಟಿ ಚಿತ್ರಕ್ಕೆ ಪ್ರಶಸ್ತಿಯನ್ನೂ ಕೂಡ ತನ್ನದಾಗಿಸಿಕೊಂಡಿದ್ದಾರೆ.

ಕನ್ನಡದ ಸುಮಾರು ಎಲ್ಲಾ ದೊಡ್ಡ ದೊಡ್ಡ ಸ್ಟಾರ್ ಗಳ ಜೊತೆ ತೆರೆಹಂಚಿಕೊಂಡಿರುವ ಖ್ಯಾತಿ ರಶ್ಮಿಕಾ ಅವರದ್ದು. ಇನ್ನು ರಶ್ಮಿಕಾ ಚಿತ್ರೀಕರಣದ ಸಮಯದಲ್ಲಿ ಉಳಿದುಕೊಳ್ಳಲು ಅನುಕೂಲವಾಗುವಂತೆ ಹೈದ್ರಾಬಾದ್, ಬೆಂಗಳೂರಿನಲ್ಲಿಯೂ ಮನೆ ಹೊಂದಿದ್ದು, ತಮ್ಮ ಕನಸಿನ ಮನೆಯನ್ನು ಕಟ್ಟಿಸಿಕೊಂಡಿದ್ದು ಮಾತ್ರ ತಮ್ಮ ಹುಟ್ಟೂರಾದ ವಿರಾಜ ಪೇಟೆಯಲ್ಲಿ. ಇತ್ತೀಚಿಗೆ ಕೋಟಿ ಬೆಲೆಬಾಳುವ ಕಾರು ಕೊಂಡು ಸುದ್ದಿ ಮಾಡಿದ್ದ ರಶ್ಮಿಕಾ ಇದೀಗ ಸುಂದರವಾದ ಮನೆಯೊಂದರ ಒಡತಿ. ಹೌದು, ಕೊಡಗಿನ ಹಸಿರಿನ ನಡುವೆ ಮನೆಯೊಂದನ್ನುಕಟ್ಟಿಸಿ ತನ್ನ ತಂದೆ ತಾಯೊ ಹಾಗೂ ಪ್ರೀತಿಯ ತಂಗಿಯ ಜೊತೆ ಪ್ರೀ ಇದ್ದಾಗೆಲ್ಲ ಬಂದು ಸಂತೋಷವಾಗಿ ಕಾಲ ಕಳೆಯುತ್ತಾರೆ. ಅವರ ಮನೆ ಹೇಗಿದೆ? ಈ ಫೋಟೋಸ್ ನೋಡಿ.

Comments are closed.