Neer Dose Karnataka
Take a fresh look at your lifestyle.

ಅಂದಿನ ದಿನಗಳಲ್ಲಿಯೇ ರವಿ ಚಂದ್ರನ್ ರವರ ಮಲ್ಲ ಸಿನೆಮಾ ಬಾಚಿದ್ದು ಎಷ್ಟು ಕೋಟಿ ಗೊತ್ತೇ? ಇದಪ್ಪ ಕಲೆಕ್ಷನ್ ಅಂದ್ರೆ.

6

ನಮಸ್ಕಾರ ಸ್ನೇಹಿತರೇ ಕ್ರೇಜಿಸ್ಟಾರ್ ರವಿಚಂದ್ರನ್ ಎಂದರೆ ಸಿನಿಮಾಗಳಲ್ಲಿ ಹೊಸ ಪ್ರಯೋಗಗಳನ್ನು ತರುತ್ತಿದ್ದವರು. ಇದಕ್ಕೆ ಫೇಮಸ್ ಆಗಿರುವವರು ಕೂಡ. ಅವರ ಸಾಕಷ್ಟು ಚಿತ್ರಗಳನ್ನು ನಟಿಸುವುದು ಮಾತ್ರವಲ್ಲದೇ ನಿರ್ದೇಶನವನ್ನೂ ಮಾಡಿ, ತಮ್ಮ ಕಲ್ಪನೆಗೆ ತಕ್ಕಂತೆ ಚಿತ್ರಕಥೆ, ಲೊಕೇಶನ್ ಹಾಗೂ ತಾರಾಬಳಗವನ್ನು ಸಿನಿಮಾದಲ್ಲಿ ಬಳಸಿಕೊಳ್ಳುತ್ತಿದ್ದವರು ಕ್ರೇಜಿಸ್ಟಾರ್!

ಅಷ್ಟೇ ಅಲ್ಲ, ರವಿಚಂದ್ರನ್ ಅವರು ಇತರ ಭಾಷೆಗಳಿಂದ ಹಿರೋಯಿನ್ ಗಳನ್ನು ಕನ್ನಡಕ್ಕೆ ಪರಿಚಯಿಸಿದ ನಟ ಕೂಡ ಹೌದು. ಸಾಕಷ್ಟು ಪ್ರೀತಿ ವಿಷಯವನ್ನೇ ಹೆಚ್ಚಾಗಿ ಕಥೆಯಾಗಿಸುತ್ತಿದ್ದ ಇವರ ಸಿನಿಮಾಗಳಲ್ಲಿ ನಟಿ ಪ್ರಿಯಾಂಕಾ ಉಪೇಂದ್ರ ಕೂಡ ನಟಿಸಿದ್ದರು. ಅದುವೇ ಮಲ್ಲ. ಮಲ್ಲ ಚಿತ್ರ ಸಾಮಾನ್ಯವಾಗಿ ಎಲ್ಲರಿಗೂ ನೆನಪಿದ್ದೇ ಇರುತ್ತೆ. ನಟಿ ಮಾಲಾಶ್ರೀಯವರ ಪತಿ ರಾಮು ನಿರ್ಮಾಣದಲ್ಲಿ ಮೂಡಿ ಬಂದ ಮಲ್ಲ ಪ್ರಿಯಾಂಕಾ ಅವರ ಗ್ಲಾಮರಸ್ ಲುಕ್ ನ್ನು ಅನಾವರಣಗೊಳಿಸಿತ್ತು.

ಇಂದಿಗೂ ಮಲ್ಲ ಚಿತ್ರದ ಸೀನ್ ಗಳನ್ನು ನೆನಪಿಸಿಕೊಳ್ಳುವ ಈ ಚಿತ್ರ ತೆರೆ ಕಂಡಿದ್ದು 2004ರಲ್ಲಿ. ಈ ಚಿತ್ರ ಒಂದಲ್ಲ ಎರಡಲ್ಲ, ಬರೋಬ್ಬರಿ ಐದು ವರ್ಷಗಳ ಕಾಲ ಒಂದು ಥೀಯೇಟರ್ ನಲ್ಲಿ ಕೂಡ ಹೌಸ್ ಫುಲ್ ಪ್ರದರ್ಶನವನ್ನು ಕಂಡಿವೆ ಎಂದರೆ ಹೆಮ್ಮೆಯ ವಿಷಯವೇ ಸರಿ. ಆಗಿನ ಕಾಲಕ್ಕೇ ಸುಮಾರು 8 ಕೋಟಿ ಯಷ್ಟು ಕಲೆಕ್ಷನ್ ಮಾಡಿದ್ದ ಭರ್ಜರಿ ಸಿನಿಮಾ ’ಮಲ್ಲ’. ನಟ, ಹಾಗೂ ನಿರ್ದೇಶಕ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಚಿತ್ರಗಳೇ ಹಾಗೆ ಬಹು ನಿರೀಕ್ಷೆಯನ್ನುಹೊಂದಿರುತ್ತೆ, ಪ್ರೇಮಲೋಕದಿಂದಲೂ ಪ್ರೇಮದ ಪಸರನ್ನು ಹರಿಸುತ್ತಾ ಬಂದಿರುವ ರವಿಚಂದ್ರನ್, ಈಗಲೂ ಹಲವು ವಿನೂತನ ಕಾನ್ಸೆಪ್ಟ್ ಗಳನ್ನು ಕೈಯಲ್ಲಿಟ್ಟುಕೊಂಡಿದ್ದಾರೆ. ಸರಿಯಾದ ಅವಕಾಶ ಸಿಕ್ಕರೆ ಈ ಎಲ್ಲಾ ಕಥೆಗಳೂ ಸೂಪರ್ ಹಿಟ್ ಸಿನಿಮಾಗಳಾಗುವುದರಲ್ಲಿ ನೋ ಡೌಟ್!

Leave A Reply

Your email address will not be published.