Neer Dose Karnataka
Take a fresh look at your lifestyle.

44 ವಯಸ್ಸು ಆದರೂ ಚಿಂತೆ ಇಲ್ಲ ಮಗುವನ್ನು ಹೆರಬಹುದು ಎಂದು ತೋರಿಸಿದ ಕನ್ನಡ ಖ್ಯಾತ ನಟಿ ಯಾರು ಗೊತ್ತೇ??

4

ನಮಸ್ಕಾರ ಸ್ನೇಹಿತರೇ ನಮ್ಮ ಕನ್ನಡ ಚಿತ್ರರಂಗಕ್ಕೆ ಅಂದಿನ ಕಾಲದಲ್ಲಿ ಪರಭಾಷೆಗಳಿಂದ ಹಲವಾರು ಚಿತ್ರನಟಿಯರು ಬಂದು ಇಲ್ಲಿ ನಟಿಸಿ ನೆಲೆಯನ್ನು ಕೂಡ ಕಂಡುಕೊಂಡಿದ್ದಾರೆ ಹಾಗೂ ಕನ್ನಡಿಗರಲ್ಲಿ ಜನಪ್ರಿಯತೆ ಕೂಡ ಪಡೆದುಕೊಂಡಿದ್ದಾರೆ. ಅಂಥವರಲ್ಲಿ ಇಂದು ನಾವು ಒಬ್ಬರ ಕುರಿತಂತೆ ಮಾತನಾಡಲು ಹೊರಟಿದ್ದೇವೆ. ಹೌದು ಸ್ನೇಹಿತರೆ ಇವರು ಅಂದಿನ ಕಾಲದ ಬಹುಭಾಷಾ ಹಾಗೂ ಬಹುಬೇಡಿಕೆ ನಟಿಯಾಗಿದ್ದರು. ನೀವು ಕರೆಕ್ಟಾಗಿ ಗೆಸ್ಸ್ ಮಾಡಿರಬಹುದು ಹೌದು ಸ್ನೇಹಿತರೆ ನಾವು ಮಾತನಾಡಲು ಹೊರಟಿರುವುದು ನಟಿ ಊರ್ವಶಿ ಅವರ ಕುರಿತಂತೆ.

ಹೌದು ಸ್ನೇಹಿತರೆ ನಟಿ ಊರ್ವಶಿ ಅವರು ಚಿಕ್ಕವಯಸ್ಸಿನಿಂದಲೂ ಕೂಡ ಘಟನೆಯ ಕುರಿತಂತೆ ಹಾಗೂ ಚಿತ್ರರಂಗದ ಕುರಿತು ಸಾಕಷ್ಟು ಆಸಕ್ತಿಯನ್ನು ಹೊಂದಿದ್ದರು. ಹೀಗಾಗಿ ಚಿಕ್ಕವಯಸ್ಸಿನಿಂದಲೂ ಕೂಡ ನಟನೆಯ ನಾಟ್ಯ ಇತರ ವಿವಿಧ ಪ್ರಕಾರಗಳ ಮೇಲೆ ಊರ್ವಶಿ ಅವರಿಗೆ ಸಾಕಷ್ಟು ಒಲವಿತ್ತು. ಇನ್ನು ಇವರು ಮೂಲತಹ ಮಲಯಾಳಂ ನವರಾಗಿದ್ದು ಚಿಕ್ಕವಯಸ್ಸಿನಲ್ಲಿ ಚಿತ್ರರಂಗದಲ್ಲಿ ಬಾಲನಟಿಯಾಗಿ ಗುರುತಿಸಿಕೊಂಡಂತಹ ಅನುಭವ ವ್ಯಕ್ತಿ ಇವರಿಗೆ ಇತ್ತು.

ಇನ್ನು 1980 ಯಲ್ಲಿ ನಟಿ ಊರ್ವಶಿ ಅವರು ಮಲಯಾಳಂ ಚಿತ್ರರಂಗದಲ್ಲಿ ಪರಿಪೂರ್ಣ ನಾಯಕನಾಗಿ ಪಾದಾರ್ಪಣೆ ಮಾಡುತ್ತಾರೆ. ಇದಾದ ನಂತರ ಒಂದಾದ ಮೇಲೆ ಒಂದರಂತೆ ಎಲ್ಲಾ ಚಿತ್ರಗಳಲ್ಲಿ ಕೂಡ ನಾಯಕಿಯಾಗಿ ನಟಿಸಿದ್ದ ಚಿತ್ರರಂಗದ ಭರವಸೆಯ ನಾಯಕಿಯಾಗಿ ಕಾಣಿಸಿಕೊಳ್ಳುತ್ತಾರೆ. ಇದಾದಮೇಲೆ ಊರ್ವಶಿ ಅವರಿಗೆ ಬೇರೆ ಭಾಷೆಗಳಿಂದಲೂ ಕೂಡ ಬೇಡಿಕೆ ಹೆಚ್ಚಾಗುತ್ತದೆ. ಹೌದು ಸ್ನೇಹಿತರು ಕೇವಲ ಮಲಯಾಳಂ ಚಿತ್ರರಂಗ ಮಾತ್ರವಲ್ಲದೆ ತಮಿಳು ತೆಲುಗು ಕನ್ನಡ ಹಿಂದಿ ಹೀಗೆ ಹಲವಾರು ಭಾಷೆಗಳಲ್ಲಿ ಪೂರ್ವಶಿ ಅವರು ನಟಿಸಿ ತಮ್ಮ ಪ್ರತಿಭೆಯನ್ನು ಸಾಬೀತು ಮಾಡಿಕೊಳ್ಳುತ್ತಾರೆ.

ಇನ್ನು 1984 ರಲ್ಲಿ ಶ್ರಾವಣ ಬಂತು ಚಿತ್ರದ ಮೂಲಕ ಊರ್ವಶಿ ಅವರು ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆ ಮಾಡುತ್ತಾರೆ. ಇನ್ನು ನಟ ಸಾರ್ವಭೌಮ ಡಾಕ್ಟರ್ ರಾಜಕುಮಾರ್ ಅವರನ್ನು ಕೂಡ ಪರದೆಯನ್ನು ಇವರು ಹಂಚಿಕೊಂಡಿದ್ದಾರೆ. ನಟಿ ಊರ್ವಶಿ ಅವರು ಭಾರತೀಯ ಚಿತ್ರರಂಗದ ಹಲವಾರು ಸೂಪರ್ಸ್ಟಾರ್ ನಟರೊಂದಿಗೆ ನಟಿಸಿದ್ದಾರೆ. ಡಾ.ರಾಜಕುಮಾರ್, ವಿಷ್ಣುವರ್ಧನ್, ಅಂಬರೀಶ್, ರವಿಚಂದ್ರನ್, ರಜನಿಕಾಂತ್, ಕಮಲ್ ಹಾಸನ್ ಸೇರಿದಂತೆ ಹಲವಾರು ಕಲಾವಿದರೊಂದಿಗೆ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಒಂದು ಕಾಲದಲ್ಲಿ ದಕ್ಷಿಣ ಭಾರತ ಚಿತ್ರರಂಗದ ಟಾಪ್ ನಟಿಯಾಗಿ ಎಲ್ಲಾ ಭಾಷೆಗಳಲ್ಲಿ ಕೂಡ ಬ್ಯುಸಿಯಾಗಿದ್ದರು ನಟಿ ಊರ್ವಶಿ ಯವರು. ಇಲ್ಲಿವರೆಗೂ ನಟಿ ಊರ್ವಶಿ ಅವರು ಬರೋಬ್ಬರಿ 300ಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕಿಯಾಗಿ ಪೋಷಕ ನಟಿಯಾಗಿ ನಟಿಸಿದ್ದಾರೆ. ಇನ್ನು ಊರ್ವಶಿ ಅವರ ವೈವಾಹಿಕ ಜೀವನದ ಬಗ್ಗೆ ಹೇಳುವುದಾದರೆ ಬನ್ನಿ ನಾವು ನಿಮಗೆ ವಿವರವಾಗಿ ಹೇಳುತ್ತೇವೆ. 2000 ರಲ್ಲಿ ಊರ್ವಶಿ ಅವರು ಮನೋಜ್ ಎಂಬ ಮಲಯಾಳಿ ನಟನನ್ನು ಮದುವೆಯಾಗುತ್ತಾರೆ. ಇವರಿಬ್ಬರಿಗೆ ಗೀತಲಕ್ಷ್ಮಿ ಎಂಬ ಹೆಣ್ಣುಮಗಳು ಹುಟ್ಟಿ 2008 ರಲ್ಲಿ ಇವರಿಬ್ಬರು ವಿವಾಹ ವಿಚ್ಛೇದನವನ್ನು ಪಡೆಯುತ್ತಾರೆ.

ಇದಾದನಂತರ ನಟಿ ಊರ್ವಶಿ ಅವರು ಚೆನ್ನೈ ಮೂಲದ ಪ್ರಸಿದ್ಧ ಉದ್ಯಮಿಯಾಗಿ ಇದ್ದಂತಹ ಶಿವಪ್ರಸಾದ್ ರವರನ್ನು 2016 ರಲ್ಲಿ ಮದುವೆಯಾಗುತ್ತಾರೆ. ಈ ಸಂದರ್ಭದಲ್ಲಿ ಊರ್ವಶಿ ಅವರಿಗೆ 40ಕ್ಕೂ ಅಧಿಕ ವಯಸ್ಸಾಗಿರುತ್ತದೆ. ಆದರೂ ಕೂಡ ಇಹಾನ್ ಪ್ರಜಾಪತಿ ಎಂಬ ಗಂಡುಮಗುವನ್ನು ಪಡೆದುಕೊಳ್ಳುತ್ತಾರೆ. ಇನ್ನು ಇಂದಿಗೂ ಕೂಡ ನಟಿ ಊರ್ವಶಿ ಅವರು ದಕ್ಷಿಣ ಭಾರತದ ಪ್ರಮುಖ ಹಾಗೂ ಬಹುಬೇಡಿಕೆಯ ಪೋಷಕ ನಟಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

Leave A Reply

Your email address will not be published.