Neer Dose Karnataka
Take a fresh look at your lifestyle.

ಸ್ವತಃ ಅಣ್ಣಾವ್ರೇ ಬಂದು ತಮ್ಮ ಸಿನಿಮಾ ಮುಹೂರ್ತಕ್ಕೆ ವಿಷ್ಣು ಸರ್ ಅವರನ್ನು ಕರೆದಾಗ ವಿಷ್ಣು ಸರ್ ಮಾಡಿದ್ದೇನು??

ನಮಸ್ಕಾರ ಸ್ನೇಹಿತರೆ ಒಂದು ಕಾಲದಲ್ಲಿ ಕನ್ನಡ ಚಿತ್ರರಂಗವನ್ನು ಆಳಿದವರು ಎಂದರೆ ವರನಟ ಡಾ. ರಾಜ ಕುಮಾರ್ ಹಾಗೂ ಸಾಹಸಸಿಂಹ ವಿಷ್ಣುವರ್ಧನ್ ಅವರು. ಇವರಿಬ್ಬರ ನಡುವೆ ಗಂಧದ ಗುಡಿ ಚಿತ್ರದ ಸಮಯದಲ್ಲಿ ವೈಮನಸ್ಸು ಉಂಟಾಗಿ ವಿಷ್ಣುವರ್ಧನ್ ಅವರನ್ನು ದೂರಿದವರು ಸಾಕಷ್ಟು ಮಂದಿ, ಆದರೆ ಇದು ಕೇವಲ ವದಂತಿಯಾಗಿ ಉಳಿಯಿತಷ್ಟೇ. ಈ ಇಬ್ಬರೂ ಮೇರು ನಟರೂ ಕೂಡ ಯಾಉದೇ ರೀತಿ ಸಮಸ್ಯೆ ಇಲ್ಲದೆ ಕೊನೆವರೆಗೂ ಸ್ನೇಹಿತರಾಗಿಯೇ ಉಳಿದದ್ದು ಮಾತ್ರ ಅವಿಸ್ಮರಣೀಯ!

ಸ್ನೇಹಿತರೆ, ಡಾ. ರಾಜ ಕುಮಾರ್ ಅಭಿನಯದ ಚಿತ್ರಗಳನ್ನು ಅದರಲ್ಲಿ ಅವರ ಪಾತ್ರಗಳನ್ನು ಮರೆಯಲು ಸಾಧ್ಯವೇ ಇಲ್ಲ. ಅಂಥದ್ದೇ ಚಿತ್ರ ಶೃತಿ ಸೇರಿದಾಗ, ಅಣ್ಣಾವ್ರು, ಮಾಧವಿ ಗೀತ, ಅಶ್ವಥ್ ಹೀಗೆ ದೊಡ್ಡ ತಾರಾಗಣವನ್ನೇ ಹೊಂದಿದ್ದ ಈ ನಿಸಿಮಾ 1987ರಲ್ಲಿ ತೆರೆ ಬಂದಿತ್ತು. ಆ ಸಮಯದಲ್ಲಿ ಸಾಕಷ್ಟು ಹೆಸರು ಮಾಡಿತು ಈ ಸಿನಿಮಾ. ಈ ಸಿನಿಮಾದ ಕಥೆ ಆಗಿನಿಂದ ಈ ಕಾಲದವರೆಗೂ ಅನ್ವಯವಾಗುವಂಥದ್ದು. ನಾವು ಜೀವನದಲ್ಲಿ ಜೋತಿಷ್ಯವನ್ನು ನಂಬುತ್ತೇವೆ, ಬಳಸುತ್ತೇವೆ, ಅದರಲ್ಲಿ ಹೇಳುವಂತೆ ನಡೆದುಕೊಳ್ಳುತ್ತೇವೆ. ಇದು ಒಳ್ಳೆಯದೆ, ಆದರೆ ಅತಿಯಾದರೆ ಅಮೃತವೂ ವಿಷ ಎನ್ನುವಂತೆ ಜೀವನದ ಪ್ರತಿ ಹಂತದಲ್ಲೂ ಜ್ಯೋತಿಷ್ಯವನ್ನೇ ನಂಬಿ ಜೀವನ ಸಾಗಿಸುವುದು ಕಷ್ಟ. ಹಾಗಾಗಿ ಒಂದು ಮಟ್ಟಕ್ಕೆ ಜ್ಯೋತಿಷ್ಯಕ್ಕೆ ಬೆಲೆಕೊಟ್ಟು ಉಳಿದದ್ದು ನಮ್ಮ ಪ್ರಯತ್ನಕ್ಕೆ ಸಂಬಂಧಿಸಿದ್ದು ಅನ್ನೋದನ್ನ ತಿಳಿಸಿಕೊಡುತ್ತೆ ಶೃತಿ ಸೇರಿದಾಗ ಚಿತ್ರ.

ಇನ್ನು ಈ ಚಿತ್ರದ ಯಶಸ್ಸಿಗೆ ಡಾ. ವಿಷ್ಣುವರ್ಧನ್ ಕೂಡ ಕಾರಣ ಎಂದರೆ ತಪ್ಪಾಗಲಿಕ್ಕಿಲ್ಲ. ಅಣ್ಣಾವ್ರು ಹಾಗೂ ವಿಷ್ಣು ದಾದಾ ಒಟ್ಟಿಗಿಲ್ಲ ಎಂಬ ಸುದ್ಧಿ ಹರಿದಾಡುತ್ತಿರುವಾಗಲೇ ಈ ಇಬ್ಬರೂ ಸ್ನೇಹಿತರಾಗಿ ಒಬ್ಬರ ಚಿತ್ರಕ್ಕೆ ಒಬ್ಬರು ಶುಭವನ್ನು ಕೋರುತ್ತಿದ್ದುದು ಕಣ್ಣಿಗೆ ಕಟ್ಟುವಂತಿತ್ತು. ಸಾಕಷ್ಟು ಬಾರಿ ಅಣ್ಣಾವ್ರು ಇಲ್ಲದಿದ್ದರೆ ಕನ್ನಡ ಚಿತ್ರರಂಗವೇ ಇಲ್ಲ ಎಂಬಂಥ ಮೆಚ್ಚುಗೆಯ ಮಾತುಗಳನ್ನೂ ಕೂಡ ವಿಷ್ಣು ಸರ್ ನುಡಿದಿದ್ದರು. ಶೃತಿ ಸೇರಿದಾಗ ಸಿನಿಮಾ ಮುಹೂರ್ತಕ್ಕೆ ರಾಜ್ ಕುಮಾರ್ ಅವರು ವಿಷ್ಣುವರ್ಧನ್ ಅವರನ್ನು ಆಹ್ವಾನಿಸುತ್ತಾರೆ. ಹಾಗೆಯೇ ಆಗಮಿಸಿದ ವಿಷ್ಣುವರ್ಧನ್ ಈ ಚಿತ್ರಕ್ಕೆ ಕ್ಲಾಪ್ ಮಾಡಿದ್ದು ಇಡೀ ಗಾಂಧೀನಗರದಲ್ಲಿಯೇ ದೊಡ್ಡ ಸುದ್ದಿಯಾಗಿ ವಿಷ್ಣುವರ್ಧನ್ ಅಭಿಮಾಣಿಗಳೂ ಕುಡ ಈ ಚಿತ್ರವನ್ನು ಮೆಚ್ಚಿಕೊಳ್ಳಲು ಸಾಧ್ಯವಾಯ್ತು. ಈ ದಿಗ್ಗಜರ ಸ್ನೇಹವನ್ನು ಕಂಡು ಕರುಬುವವರಿಗೆ ಉತ್ತರದಂತಿತ್ತು ಶೃತಿ ಸೇರಿದಾಗ ಚಿತ್ರದ ಯಶಸ್ಸು!

Comments are closed.