Neer Dose Karnataka
Take a fresh look at your lifestyle.

ಜಮ್ಮು ಕಾಶ್ಮೀರದ ತಾಯಿ ವೈಷ್ಣೋದೇವಿ ದರ್ಶನ ಪಡೆದ ಅನಿರುದ್ ಕುಟುಂಬ, ಫೋಟೋ ಗ್ಯಾಲರಿ ಹೇಗಿದೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ನಟ ಅನಿರುದ್ಧ್ ಅವರು ಕೆಲವು ಸಿನಿಮಾಗಳಲ್ಲಿ ಅಭಿನಯಿಸಿದ್ದರು ಕೂಡ ಅತ್ಯಂತ ಹೆಚ್ಚು ಜನಪ್ರಿಯವಾದದ್ದು ಜೊತೆಜೊತೆಯಲಿ ಧಾರಾವಾಹಿಯ ಆರ್ಯವರ್ಧನ್ ಪಾತ್ರದ ಮೂಲಕ. ಧಾರಾವಾಹಿಯಲ್ಲಿ ಅನೇಕ ಟ್ವಿಸ್ಟ್ ಗಳನ್ನು ಕೊಟ್ಟು ಇದೀಗ ಆರ್ಯವರ್ಧನ್ ಹಾಗೂ ಅನು ಅವರ ಮುದ್ದಾದ ಜೋಡಿ ಮದುವೆಯೂ ಮುಗಿದು ಅನು ಆರ್ಯವರ್ಧನ್ ಕುಟುಂಬ ಸೇರಿದ್ದಾಳೆ.

ಆರ್ಯವರ್ಧನ್ ಪಾತ್ರಕ್ಕೆ ಅತ್ಯದ್ಭುತ ಬಟ್ಟೆಯನ್ನು ಆಯ್ಕೆ ಮಾಡುವುದು ಅವರ ಪತ್ನಿ ಕೀರ್ತಿ. ಇನ್ನು ಕುಟುಂಬಕ್ಕೆ ತುಂಬಾನೇ ಪ್ರಾಮುಖ್ಯತೆ ಕೊಡುವ ಅನಿರುದ್ಧ್, ಶೂಟಿಂಗ್ ಬಿಡುವಿನ ಸಮಯದಲ್ಲಿ ಮನೆಯವರೊಂದಿಗೆ ಕಾಲ ಕಳೆಯುತ್ತಾರೆ. ಮಕ್ಕಳೊಂದಿಗೆ ನೃತ್ಯ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಾರೆ.

ಇನ್ನು ಇತ್ತೀಚಿಗೆ ತಮ್ಮ ಇಬ್ಬರು ಮುದ್ದು ಮಕ್ಕಳೊಂದಿಗೆ ವೈಷ್ಣೋದೇವಿ ದರ್ಶನ ಪಡೆದು ಬಂದಿದ್ದಾರೆ ನಟ ಅನಿರುದ್ಧ್. ಮಕ್ಕಳೊಂದಿಗೆ ತಾವು ವೈಷ್ಣೋದೇವಿಯಲ್ಲಿರುವ ಫೊಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ‘ನಾವು ವೈಷ್ಣೋದೇವಿಗೆ ಹೋಗಿ ಬಂದೆವು. ಕೀರ್ತಿಯವರು ಕೆಲವು ವರ್ಷಗಳ ಹಿಂದೆ ಹೋಗಿ ಬಂದಿದ್ದಾರೆ. ಈ ಬಾರಿ ನಮ್ಮ ಜೊತೆ ಬಂದಿಲ್ಲ. ಸರ್ವೇ ಜನಃ ಸುಖಿನೋ ಭವಂತು. ತಾಯಿಯ ಅನುಗ್ರಹ ನಮ್ಮೆಲ್ಲರ ಮೇಲೂ ಇರಲಿ’ಎಂದು ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.

ಜಮ್ಮು ಕಾಶ್ಮೀರದಲ್ಲಿರುವ ವೈಷ್ಣೋದೇವಿ ದೇವಾಲಯಕ್ಕೆ ಚಿತ್ರೀಕರಣದ ಬಿಡುವಿನ ಸಮಯದಲ್ಲಿ ಭೇಟಿ ನೀಡಿದ್ದಾರೆ ಅನಿರುದ್ದ್. ಇನ್ನು ಸಾಮಾಜಿಕ ಕಳಕಳಿಯನ್ನೂ ಹೊಂದಿರುವ ಅನಿರುದ್ಧ್, ಪರಿಸರ ಸ್ವಚ್ಛತೆಯ ಬಗ್ಗೆ ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ. ಅನಿರುದ್ಧ್ ಗೆ ಅತ್ಯಧಿಕ ಸಂಖ್ಯೆಯ ಅಭಿಮಾನಿಗಳೂ ಕೂಡ ಇದ್ದಾರೆ. ಅನಿರುದ್ಧ್ ಹಾಗೂ ಅವರ ಕುಟುಂಬದ ತೀರ್ಥಯಾತ್ರೆಯ ಅದ್ಭುತ ಫೊಟೋಗಳು ಇಲ್ಲಿವೆ ನೋಡಿ.

Comments are closed.