Neer Dose Karnataka
Take a fresh look at your lifestyle.

ಇಡೀ ಪ್ರಪಂಚವನ್ನೇ ಗೆಲ್ಲುವಷ್ಟು ಸಾಧಿಸಿದ್ದರೂ, ರತನ್ ಟಾಟಾ ಚೀನಾ ದೇಶದ ಕಾರಣ ಪ್ರೀತಿಸಿದ ಹುಡುಗಿಯ ಕೈಹಿಡಿಯಲು ಹಾಗಲಿಲ್ಲ, ಯಾಕೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಟಾಟಾ ಅಂದರೇ ಭಾರತ ದೇಶದ ಅಸ್ಮಿತೆ. ಬೆಳಿಗ್ಗೆ ಎದ್ದು ಕುಡಿಯುವ ಟೀ ಇಂದ ಹಿಡಿದು , ಓಡಾಡುವ ವಾಹನಗಳು, ಬಳಸುವ ವಸ್ತುಗಳು ಹೀಗೆ ಎಲ್ಲದರಲ್ಲಿಯೂ ಟಾಟಾ ಎನ್ನುವ ಬ್ರಾಂಡ್ ಜೀವನದಲ್ಲಿ ಹಾಸುಹೊಕ್ಕಾಗಿದೆ. ಜಮಶೆಡ್ ಜೀ ಟಾಟಾ ನಂತರ ಟಾಟಾ ಗ್ರೂಪ್ ಆಫ್ ಕಂಪನೀಸ್ ನೇತೃತ್ವ ವಹಿಸಿಕೊಂಡವರು ರತನ್ ಟಾಟಾ. ಕಂಪನಿ ಇವರ ಕೈಗೆ ಬಂದ ನಂತರ ಟಾಟಾ ಬ್ರಾಂಡ್ ವಿಶ್ವ ವ್ಯಾಪಿಯಾಗಿ ಪಸರಿಸಿತು.

ಭಾರತದಲ್ಲಿ ಕೈಗಾರಿಕೆಗಳ ಉಗಮ, ಹಲವಾರು ಪ್ರತಿಭಾವಂತರಿಗೆ ಉದ್ಯೋಗ, ಕೌಶಲ್ಯ ಹೀಗೆ ನಿರಂತರವಾಗಿ ಟಾಟಾ ಸಂಸ್ಥೆ ಸಮಾಜಮುಖಿ ಕೆಲಸ ಮಾಡಿತು. ಬಡವರು ಸಹ ಕಾರಿನಲ್ಲಿ ಪ್ರಯಾಣಿಸಬೇಕೆಂದು ಟಾಟಾ ನ್ಯಾನೋ ಎಂಬ ಒಂದು ಲಕ್ಷದ ಕಾರನ್ನು ಸಹ ಭಾರತಕ್ಕೆ ಪರಿಚಯಿಸಿದವರು ರತನ್ ಟಾಟಾ. ಮುಟ್ಟಿದ್ದೆಲ್ಲವನ್ನು ಚಿನ್ನವಾಗಿಸಿಕೊಂಡ ರತನ್ ಟಾಟಾ ಇನ್ನು ಬ್ರಹ್ಮಚಾರಿ. ಅವರೂ ಮದುವೆಯಾಗಿಲ್ಲ. ಆದರೇ ಒಬ್ಬರನ್ನ ಅಗಾಧವಾಗಿ ಪ್ರೀತಿಸಿದ್ದ ರತನ್ ಟಾಟಾ, ಪ್ರೇಮ ವೈಫಲ್ಯದಿಂದ ಮದುವೆಯಾಗದಿರಲು ತೀರ್ಮಾನಿಸಿದ್ದರಂತೆ.

ಹೌದು ಅಮೇರಿಕಾದಲ್ಲಿ ಓದುತ್ತಿದ್ದ ರತನ್ ಟಾಟಾಗೆ ಅಲ್ಲಿಯ ಒಂದು ಚೆಲುವೆ ಮೇಲೆ ಪ್ರೇಮಾಂಕುರವಾಯಿತಂತೆ. ಮುಂದೆ ಪರಸ್ಪರ ಪ್ರೇಮ ನಿವೇದನೆ ಮಾಡಿಕೊಂಡ ಬಳಿಕ ಇಬ್ಬರೂ ಮದುವೆಯಾಗಲು ಒಪ್ಪಿದರಂತೆ. ಆದರೇ ಅದೇ ವೇಳೆ 1962 ರಲ್ಲಿ ಭಾರತ – ಚೀನಾ ಯುದ್ಧ ಆರಂಭವಾಯಿತಂತೆ. ಆಗ ರತನ್ ಟಾಟಾ ಅವರ ಪ್ರೇಯಸಿ ಬಳಿ ನಾವು ಮದುವೆಯಾಗಿ ಶಾಶ್ವತವಾಗಿ ಭಾರತದಲ್ಲಿ ನೆಲೆಸೋಣ ಎಂಬ ಅಭಿಪ್ರಾಯ ಹೇಳಿದರಂತೆ. ಆದರೇ ಚೀನಾ ಭಾರತದ ಯುದ್ದ ನಡೆಯುತ್ತಿದ್ದ ಕಾರಣ ರತನ್ ಟಾಟಾರವರ ಪ್ರೇಯಸಿ ಭಾರತಕ್ಕೆ ಬರಲು ಒಪ್ಪಲಿಲ್ಲವಂತೆ. ಕೊನೆಗೆ ಮದುವೆ ಮುರಿದು ಬಿದ್ದು ರತನ್ ಟಾಟಾ ಏಕಾಂಗಿಯಾಗಿ ಭಾರತಕ್ಕೆ ಬಂದರಂತೆ. ಮುಂದೆ ಭಾರತಕ್ಕೆ ಬಂದ ರತನ್ ಟಾಟಾ , ಭಾರತದಲ್ಲಿ ಹಲವಾರು ಉದ್ಯಮಗಳನ್ನು ಸ್ಥಾಪಿಸುತ್ತಾ, ತಾವು ವೈವಾಹಿಕ ಜೀವನವನ್ನು ಮರೆತು ಬಿಟ್ಟರಂತೆ. ವ್ಯಕ್ತಿಗೆ ಎಷ್ಟೇ ಆಸ್ತಿಯಿರಲಿ ಅಥವಾ ಸಮಾಜದಲ್ಲಿ ಕೀರ್ತಿಯಿರಲಿ, ಒಂದಲ್ಲ ಒಂದು ರೀತಿಯ ಕೊರಗನ್ನ ಆ ಸೃಷ್ಠಿಕರ್ತ ದೇವರು ಕೊಡುತ್ತಾನೆಂಬುದಕ್ಕೆ ರತನ್ ಟಾಟಾರವರ ಈ ಘಟನೆಯೇ ಸಾಕ್ಷಿ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನ ನಮಗೆ ಕಮೆಂಟ್ ಮೂಲಕ ತಿಳಿಸಿ.

Comments are closed.