Neer Dose Karnataka
Take a fresh look at your lifestyle.

ಇಹಲೋಕ ತ್ಯಜಿಸಿ ಸ್ವರ್ಗ ಸೇರುವ ಮುನ್ನ ಸತ್ಯಜಿತ್ ಮಾಡಿದ್ದೇನು ಗೊತ್ತೇ?? ತಿಳಿದು ಭೇಷ್ ಎಂದ ನೆಟ್ಟಿಗರು.

ನಮಸ್ಕಾರ ಸ್ನೇಹಿತರೇ ಇತ್ತೀಚಿನ ವರ್ಷಗಳಲ್ಲಿ ನಮ್ಮ ಕನ್ನಡ ಚಿತ್ರರಂಗ ಹಲವಾರು ಖ್ಯಾತ ನಟ ಹಾಗೂ ನಟಿಯರನ್ನು ಕಳೆದು ಕೊಂಡಿದೆ. ಹೌದು ಸ್ನೇಹಿತರೆ ಈ ಮಹಾಮಾರಿ ಹಾಗೂ ಹಲವಾರು ಸಮಸ್ಯೆಗಳಿಂದಾಗಿ ನಮ್ಮ ಕನ್ನಡ ಚಿತ್ರರಂಗದ ಹಲವಾರು ಹಿರಿಯ ನಟ ನಟಿಯರು ಈ ಲೋಕವನ್ನು ತ್ಯಜಿಸಿ ಹೋಗಿದ್ದಾರೆ. ಈಗ ಇದೇ ಸಾಲಿಗೆ ಮತ್ತೊಬ್ಬ ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ಪೋಷಕ ನಟ ಕೂಡ ಸೇರಿದ್ದಾರೆ.

ಹೌದು ಸ್ನೇಹಿತರೆ ನಾವು ಮಾತನಾಡಲು ಹೊರಟಿರುವುದು ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ನಟ ಸತ್ಯಜಿತ್ ರವರ ಕುರಿತಂತೆ. ಹೌದು ಸ್ನೇಹಿತರೆ ಸತ್ಯಜಿತ್ ರವರು ಸಾಕಷ್ಟು ವರ್ಷಗಳಿಂದ ಆರೋಗ್ಯ ಸಮಸ್ಯೆಯಿಂದಾಗಿ ಬಳಲುತ್ತಿದ್ದರು. ಇನ್ನು ಇಂದು ಮಧ್ಯಾಹ್ನ 2ಗಂಟೆಗೆ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಹೌದು ಸ್ನೇಹಿತರೆ ಕನ್ನಡ ಚಿತ್ರರಂಗದಲ್ಲಿ ಬರೋಬ್ಬರಿ 650 ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ನಟಿಸಿ ಕನ್ನಡ ಪ್ರೇಕ್ಷಕರ ಮನಗೆದ್ದ ಅಂತಹ ಸ್ಟಾರ್ ಪೋಷಕನಟ ಎಂದರೆ ಕೂಡ ತಪ್ಪಾಗಲಾರದು.

ಹೌದು ಸ್ನೇಹಿತರೆ ಸತ್ಯಜಿತ್ ರವರು ಚೈತ್ರದ ಪ್ರೇಮಾಂಜಲಿ, ಪುಟ್ನಂಜ, ಅರುಣರಾಗ, ಆಪ್ತಮಿತ್ರ ಶಿವ ಮೆಚ್ಚಿದ ಕಣ್ಣಪ್ಪ.. ಮಂಡ್ಯದ ಗಂಡು, ಪಟೇಲ. ಅಪ್ಪು, ಅಭಿ, ಅರಸು, ಇಂದ್ರ, ರನ್ನ ಮಾಣಿಕ್ಯ ಹೀಗೆ ಬಹುತೇಕ ಎಲ್ಲಾ ಸೂಪರ್ ಹಿಟ್ ಸಿನಿಮಾಗಳಲ್ಲಿಯೂ ಸತ್ಯಜಿತ್ ಅವರು ಅಭಿನಯಿಸಿದ್ದರು.‌ ಇಷ್ಟೊಂದು ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿರುವ ಸತ್ಯಜಿತ್ ರವರು ಹೆಚ್ಚಾಗಿ ಎಲ್ಲರ ಮನಗೆದ್ದಿದ್ದು ಖಳನಾಯಕನಾಗಿ.

ಹೌದು ಸ್ನೇಹಿತರೆ ಸತ್ಯಜಿತ್ ರವರು ಖಳನಾಯಕರಾಗಿ ಹಲವಾರು ಪಾತ್ರಗಳಲ್ಲಿ ಮಿಂಚಿದ್ದು ಸದಾಕಾಲ ಕನ್ನಡ ಪ್ರೇಕ್ಷಕರ ಮನದಲ್ಲಿ ಅಜರಾಮರವಾಗಿ ಉಳಿಯುವುದು ನಿಶ್ಚಿತ. ಇನ್ನು ಮೂಲತಹ ಅವರು ಮುಸ್ಲಿಂ ಆಗಿದ್ದರೂ ಕೂಡಾ ಕನ್ನಡ ಚಿತ್ರರಂಗದಲ್ಲಿ ಸತ್ಯಜಿತ್ ಎಂದೇ ಪರಿಚಿತರಾಗಿದ್ದರು. ಆರೋಗ್ಯದ ಸಮಸ್ಯೆ ಇದ್ದರೂ ಕೂಡ ತಾನು ನಟಿಸಬಲ್ಲೆ ಎಂಬುದನ್ನು ಜನರಿಗೆ ಸಾಬೀತುಪಡಿಸಿ ತೋರಿಸಿದಂತಹ ಮಹಾನ್ ಕಲಾವಿದ ಎಂದರೆ ತಪ್ಪಾಗಲಾರದು.

ಇನ್ನು ಸತ್ಯಜಿತ್ ರವರು ಸಾಕಷ್ಟು ಸುದ್ದಿಯಾಗಿದ್ದು ತಮ್ಮ ಮಗಳ ವಿಚಾರದಲ್ಲಿ ಸ್ನೇಹಿತರೆ. ಹೌದು ಸ್ನೇಹಿತರೆ ಈ ಹಿಂದೆ ಸತ್ಯಜಿತ್ ರವರು ತಮ್ಮ ಮಗಳಿಗೆ ನಾನು ಉತ್ತಮ ಮಟ್ಟದ ವಿದ್ಯಾಭ್ಯಾಸವನ್ನು ಕೊಡಿಸಿದೆ ಹಾಗೂ ನನ್ನ ಮನೆಯನ್ನು ಅಡವಿಟ್ಟು ಮದುವೆ ಮಾಡಿಕೊಟ್ಟೆ ಆದರೆ ಕಷ್ಟಕಾಲಕ್ಕೆ ನನಗೆ ಸಹಾಯ ಮಾಡಲಿಲ್ಲ ಎಂಬುದಾಗಿ ಹೇಳಿಕೊಂಡಿದ್ದರು. ಇನ್ನು ಇದಕ್ಕೆ ಪ್ರತಿಯಾಗಿ ಸತ್ಯಜಿತ್ ರವರ ಮಗಳು ಪೊಲೀಸ್ ಠಾಣೆಯಲ್ಲಿ ತಾನು ಪ್ರತಿ ತಿಂಗಳು ಕೂಡ ಕೆಲಸ ಮಾಡಿ ಬಂದಂತಹ ಸಂಬಳವನ್ನು ಅವರಿಗೆ ನೀಡುತ್ತಿದ್ದೆ ಆದರೆ ಈಗ ನಾನು ತಾಯಿಯಾಗಿದ್ದೇನೆ ಕೆಲಸಕ್ಕೆ ಹೋಗದೆ ನನ್ನ ಸಂಬಳವನ್ನು ಹೇಗೆ ನೀಡಲಿ ಎಂಬುದಾಗಿ ಕೂಡ ಹೇಳಿದ್ದರು.

ಇನ್ನು ಈ ವಿಚಾರದಲ್ಲಿ ಸಾಕಷ್ಟು ಸತ್ಯಜಿತ್ ರವರು ಬಳಲಿದ್ದರು ಎಂದರೆ ತಪ್ಪಾಗಲಾರದು. ಇನ್ನು ಮಧ್ಯಾಹ್ನ ಕೊನೆಯುಸಿರೆಳೆಯುವ ಸಂದರ್ಭದಲ್ಲಿ ತನ್ನ ಮಗಳನ್ನು ನಾನು ಕ್ಷಮಿಸಿದ್ದೇನೆ ಎಂಬುದಾಗಿ ತಮ್ಮ ಸಂಬಂಧಿಕರ ಬಳಿ ಹೇಳಿದ್ದರು. ನೋಡಿದ್ರಲ್ಲ ಸ್ನೇಹಿತರೆ ಕೊನೆಯುಸಿರೆಳೆಯುವ ಸಂದರ್ಭದಲ್ಲಿ ತಮ್ಮ ಸಂಬಂಧಗಳ ಮೌಲ್ಯದ ಅರಿವು ಪ್ರತಿಯೊಬ್ಬ ಮನುಷ್ಯನಿಗೆ ಆಗುತ್ತದೆ ಎಂಬುದಕ್ಕೆ ಇದೇ ಘಟನೆ ಜೀವಂತ ಉದಾಹರಣೆ ಎಂದು ಹೇಳಬಹುದಾಗಿದೆ. ಇನ್ನು ನಟ ಸತ್ಯಜಿತ್ ರವರ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳು ಏನು ಎಂಬುದನ್ನು ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Comments are closed.