Neer Dose Karnataka
Take a fresh look at your lifestyle.

ಪತ್ನಿಯ ಮುಂದೆ ಹಲವಾರು ವರ್ಷಗಳ ಕಾಲ ಅಂಧನಾಗಿ ನಟನೆ ಮಾಡಿದ್ದ ಈತ ಕಾರಣ ಏನು ಗೊತ್ತಾ?? ಭೇಷ್ ಅಂತೀರಾ.

ನಮಸ್ಕಾರ ಸ್ನೇಹಿತರೇ ಮನುಷ್ಯರಿಂದ ಪ್ರಾಣಿಗಳನ್ನು ಬೇರೆ ಮಾಡುವುದೇ ಪ್ರೀತಿ. ಹೌದು ಸ್ನೇಹಿತರೆ ಈಗ ಮನುಷ್ಯರಲ್ಲಿ ನಾಗರಿಕತೆ ಬೆಳೆದು ಬಂದಿದೆ ಎಂದರೆ ಅದಕ್ಕೆ ಕಾರಣ ಪ್ರೀತಿ ಎಂದರೆ ತಪ್ಪಾಗಲಾರದು. ಹೌದು ಸ್ನೇಹಿತರೆ ಮನುಷ್ಯರಲ್ಲಿ ಪ್ರೀತಿಯನ್ನು ಇದರಿಂದಾಗಿಯೇ ಎಲ್ಲರಲ್ಲೂ ಕೂಡ ಸೌಹಾರ್ದತೆ ಬೆಳೆದುಕೊಂಡಿರುವುದು.

ಇನ್ನು ಇತ್ತೀಚಿನ ದಿನಗಳಲ್ಲಂತೂ ಯುವಜನತೆ ಸಿನಿಮಾಗಳ ಪ್ರೀತಿ-ಪ್ರೇಮವನ್ನು ನೋಡಿ ಕ್ಷಣಿಕ ಕಾಲದ ಆಕರ್ಷಣೆಯನ್ನು ಪ್ರೀತಿ ಎಂದು ಹೇಳುತ್ತಿದ್ದಾರೆ. ಹೌದು ಇತ್ತೀಚಿನ ದಿನಗಳಲ್ಲಿ ಯಾವ ಪ್ರೀತಿಯೂ ಕೂಡ ಸಾಕಷ್ಟು ದೀರ್ಘಕಾಲದವರೆಗೆ ಬಾಳಿಕೆ ಬರುತ್ತಿಲ್ಲ ಎಂದು ಹೇಳಬಹುದಾಗಿದೆ. ಆದರೆ ಇಂದು ನಾವು ಹೇಳಲು ಹೊರಟಿರುವ ಲವ್ ಸ್ಟೋರಿ ಕೇಳಿದ ಮೇಲೆ ಕಂಡಿತವಾಗಿಯೂ ನೀವು ಪ್ರೀತಿ ಎಂದರೆ ಏನು ಎಂಬುದರ ಕುರಿತಂತೆ ತಿಳುವಳಿಕೆ ಮೂಡುವುದು ಗ್ಯಾರಂಟಿ. ತಪ್ಪದೇ ಈ ನೈಜ ಘಟನೆಯನ್ನು ಕೊನೆಯವರೆಗೂ ಓದಿ.

ಹೌದು ಸ್ನೇಹಿತರೆ ಈ ಸ್ಟೋರಿಯನ್ನು ಕೇಳಿದರೆ ನಿಮಗೆ ಸ್ವಲ್ಪಮಟ್ಟಿಗೆ ಫಿಲ್ಮಿ ಎಂದು ಅನಿಸಬಹುದು ಆದರೆ ನಿಜವಾಗಿಯೂ ಬೆಂಗಳೂರಿನಲ್ಲಿ ನಡೆದ ಘಟನೆಯಾಗಿದೆ. ಶಿವಂ ಎನ್ನುವ ಶ್ರೀಮಂತ ವ್ಯಕ್ತಿ ಬಡರೈತನ ಮಗಳನ್ನು ಬೆಂಗಳೂರಿನಲ್ಲಿ ನೋಡಿ ಇಷ್ಟಪಡುತ್ತಾನೆ. ನೋಡಿದ ಮೊದಲ ನೋಟಕ್ಕೆ ಅವಳ ಸೌಂದರ್ಯಕ್ಕೆ ಈತ ಮಾರುಹೋಗುತ್ತಾನೆ. ಮೊದಲ ಬಾರಿಗೆ ಶಿವಂ ಹೋಗಿ ಅವಳಿಗೆ ಪ್ರಪೋಸ್ ಮಾಡಿದಾಗ ಆಕೆ ಬಿಲ್ಕುಲ್ ನಿರಾಕರಿಸಿ ಬಿಡುತ್ತಾಳೆ.

ಆದರೆ ಛಲಬಿಡದ ಶಿವಂ ಆಕೆಯ ಹೆತ್ತವರ ಮನೆಗೆ ಹೋಗಿ ನಿಮ್ಮ ಮಗಳನ್ನು ನಾನು ಇಷ್ಟಪಡುತ್ತೇನೆ ಮದುವೆ ಮಾಡಿಕೊಡಿ ಎಂಬ ಮಾತನ್ನು ಹೇಳುತ್ತಾನೆ. ಇದಕ್ಕೆ ಕೊನೆಗೆ ಹುಡುಗಿ ಕೂಡ ಒಪ್ಪಿ ಮದುವೆ ಮಾಡಲಾಗುತ್ತದೆ. ಆದರೆ ಮದುವೆಯಾದ ಸ್ವಲ್ಪ ಸಮಯಕ್ಕೆ ಹುಡುಗಿಗೆ ಆರೋಗ್ಯದಲ್ಲಿ ಸಮಸ್ಯೆಗಳು ಉಂಟಾಗಿ ಆಕೆಯ ಸೌಂದರ್ಯ ಕಡಿಮೆಯಾಗುತ್ತ ಬರುತ್ತದೆ. ಇದರಿಂದಾಗಿ ಹುಡುಗಿ ಬೇಸರ ಮಾಡಿಕೊಳ್ಳುತ್ತಾಳೆ ಯಾಕೆಂದರೆ ಅವಳ ಗಂಡ ಅವನನ್ನು ಮದುವೆಯಾಗಿದ್ದು ಅವಳ ಸೌಂದರ್ಯವನ್ನು ನೋಡಿ. ಆದರೆ ಈಗ ಅವಳ ಸೌಂದರ್ಯ ಕಡಿಮೆಯಾಗುತ್ತಾ ಬಂದಿದೆ.

ಆದರೆ ಸಂದರ್ಭಕ್ಕೆ ಅವಳ ಪತಿ ಶಿವಂ ಗೆ ರಸ್ತೆಯಲ್ಲಿ ನಡೆದ ಘಟನೆಯಿಂದ ದೃಷ್ಟಿ ಶಕ್ತಿ ಕಳೆದುಕೊಳ್ಳುತ್ತಾನೆ. ಆಗ ಅವನ ಶುಶ್ರೂಷೆಯನ್ನು ಅವನ ಹೆಂಡತಿಯೇ ನೋಡಿಕೊಳ್ಳುತ್ತಿದ್ದಳು. ಆದರೆ ಈ ಸಂದರ್ಭದಲ್ಲಿ ಅವಳಿಗೆ ಒಂದು ಸಮಾಧಾನ ಮೂಡಿತು ಏನೆಂದರೆ ತಾನು ಸುಂದರವಾಗಿ ಇಲ್ಲದೆ ಇರುವುದನ್ನು ಈಗ ಪತಿ ನೋಡಲು ಸಾಧ್ಯವಿಲ್ಲ ಎಂಬುದು. ಆದರೆ ದುರದೃಷ್ಟ ಎಂಬಂತೆ ಅವಳ ಸೌಂದರ್ಯ ಕಡಿಮೆಯಾಗುತ್ತಾ ಹೋದಂತೆ ಆಕೆಯ ಆರೋಗ್ಯವೂ ಕೂಡ ಕ್ಷೀಣಿಸಿ ಒಂದು ದಿನ ಅವಳು ಕೂಡ ಈ ಲೋಕಕ್ಕೆ ವಿದಾಯವನ್ನು ಹೇಳುತ್ತಾಳೆ. ಇದಾದ ಕೆಲವೇ ಸಮಯಕ್ಕೆ ಶಿವಂ ಊರಿನಿಂದ ಬೇರೆ ಕಡೆಗೆ ಹೋಗಿ ವಾಸಿಸಲು ಸಿದ್ಧನಾಗುತ್ತಾನೆ.

ಆಗ ಊರಿನವರು ನಿನಗೆ ಮೊದಲೇ ಕಣ್ಣಿಲ್ಲ ಈಗ ಹೇಗೆ ಹೋಗಿ ಬೇರೆ ಕಡೆ ವಾಸಿಸುತ್ತೀಯ ಎಂಬುದಾಗಿ ಕೇಳುತ್ತಾರೆ. ಆಗ ಶಿವಂ ನನಗೆ ಏನೂ ಆಗಿರಲಿಲ್ಲ ನನ್ನ ಹೆಂಡತಿ ಸೌಂದರ್ಯ ಕಡಿಮೆಯಾಗುತ್ತಿದೆ ಎಂಬುದಾಗಿ ಬೇಸರ ಪಟ್ಟುಕೊಂಡಿದ್ದಳು ಅದಕ್ಕಾಗಿ ನಾನು ಕಣ್ಣು ಇಲ್ಲದಂತೆ ನಾಟಕ ಮಾಡಿದ್ದೆ ಎಂಬುದಾಗಿ ಹೇಳಿ ಅಲ್ಲಿಂದ ಹೊರಟು ಹೋಗುತ್ತಾನೆ. ನೋಡಿದ್ರಲ್ಲ ಸ್ನೇಹಿತರೇ ಶಿವಂ ಕೇವಲ ತನ್ನ ಹೆಂಡತಿಯ ಸೌಂದರ್ಯಕ್ಕಾಗಿ ಮಾತ್ರವಲ್ಲದೆ ನಿಜವಾಗಿ ಕೂಡ ಆಕೆಯನ್ನು ಪ್ರೀತಿ ಮಾಡಿದ್ದ. ಪ್ರೀತಿಯೆನ್ನುವುದು ಸೌಂದರ್ಯದಲ್ಲಿ ಅಲ್ಲ ಬದಲಾಗಿ ಮನಸ್ಸಿನಲ್ಲಿ ಇರಬೇಕೆಂಬುದನ್ನು ಶಿವಂ ಸಾಬೀತು ಮಾಡಿ ತೋರಿಸಿದ್ದಾನೆ. ಈ ಘಟನೆಯ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳು ಏನೆಂಬುದನ್ನು ಕಾಮೆಂಟ್ ಬಾಕ್ಸಲ್ಲಿ ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Comments are closed.