Neer Dose Karnataka
Take a fresh look at your lifestyle.

ಎಲ್.ಪಿ.ಜಿ, ಹಾಲು, ಅಡುಗೆ ಎಣ್ಣೆ, ಪೆಟ್ರೋಲ್-ಡಿಸೇಲ್ ಟ್ಯಾಂಕ್ ಗಳು ಏಕೆ ಸಿಲಿಂಡರ್ ಆಕಾರದಲ್ಲಿ ಇರುತ್ತವೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ನೀವು ಹೆದ್ದಾರಿಗಳಲ್ಲಿ ಹೋಗುವಾಗ ಸಾಮಾನ್ಯವಾಗಿ ಇಂತಹದನ್ನು ಗಮನಿಸಿರುತ್ತಿರಿ. ಕೆಲವು ಲಾರಿಗಳು,ಟ್ರಕ್ ಗಳು ಸಿಲಿಂಡರ್ ಆಕಾರದಲ್ಲಿ ಸಾಮಗ್ರಿಗಳನ್ನ ಹೊತ್ತೊಯ್ಯುತ್ತಿರುತ್ತವೆ. ಸರಕು ಸಾಗಾಣಿಕೆಗಳ ಕಂಟೈನರ್ ಗಳು ಬಹುತೇಖ ಸಿಲಿಂಡರ್ ಆಕಾರದಲ್ಲಿ ಇರುತ್ತವೆ. ಆದರೇ ಹಾಲು, ಎಲ್.ಪಿ.ಜಿ, ಡಿಸೇಲ್ , ಪೆಟ್ರೋಲ್, ಅಡುಗೆ ಎಣ್ಣೆ ಮುಂತಾದ ದ್ರವ ರೂಪದ ಸಾಮಗ್ರಿಗಳನ್ನು ಸಾಗಿಸಲು ಏಕೆ ಆಯತಾಕಾರದ ಟ್ರಕ್, ಕಂಟೈನರ್ ಗಳನ್ನ ಉಪಯೋಗಿಸುವುದಿಲ್ಲ ಎಂಬ ಯೋಚನೆ ನಿಮಗೆ ಬಂದಿರಬಹುದು. ಆದರೇ ಅದಕ್ಕೆ ಉತ್ತರ ಇಲ್ಲಿದೆ ಬನ್ನಿ.

ದ್ರವ ರೂಪದ ಪದಾರ್ಥಗಳನ್ನ ಆಯತಾಕಾರದ ಕಂಟೈನರ್ ಗಳಲ್ಲಿ ಸಾಗಿಸಲು ಬಲು ಕಷ್ಟ. ಆಯತಾಕಾರದ ಕಂಟೈನರ್ ಗಳಲ್ಲಿ ಮೂಲೆಗಳಲ್ಲಿ ಕೆಲವೊಮ್ಮೆ ಒತ್ತಡ ಸೃಷ್ಠಿಯಾಗುತ್ತದೆ. ಕೆಲವೊಮ್ಮೆ ಆ ಒತ್ತಡದಿಂದ ಕಂಟೈನರ್ ಗಳಲ್ಲಿ ಬಿರುಕು ಸಹ ಉಂಟಾಗುವ ಸಂಭವ ಇರುತ್ತದೆ. ಅದಲ್ಲದೇ ಆಯತಾಕಾರದ ಕಂಟೈನರ್ ಗಳ ಮೂಲೆಗಳಲ್ಲಿ ಕೆಲವೊಮ್ಮೆ ದ್ರವರೂಪದ ಪದಾರ್ಥಗಳು ಮೂಲೆಯಲ್ಲಿ ಉಳಿಯುವ ಸಾಧ್ಯತೆ ಹೆಚ್ಚು. ಮತ್ತೆ ಕೆಲವೊಮ್ಮೆ ಸಾಗಾಣಿಕೆ ಸಮಯದಲ್ಲಿ ಮೂಲೆಗಳಲ್ಲಿ ಒತ್ತಡ ಹೆಚ್ಚಿ ಕಂಟೈನರ್ ಗಳು ನೆಲಕ್ಕೆ ಸಹ ಉರುಳಿವೆ.

ಹಾಗಾಗಿ ಸಿಲಿಂಡರ್ ಆಕಾರದ ಕಂಟೈನರ್ ಗಳಲ್ಲಿ ಈ ಥರದ ಯಾವ ಸಮಸ್ಯೆಯು ಇರುವುದಿಲ್ಲ. ಮೂಲೆಗಳಲ್ಲಿ ಪದಾರ್ಥಗಳು ಉಳಿಯುವುದಾಗಲಿ, ಒತ್ತಡವಾಗಲಿ ಯಾವುದು ಬರುವುದಿಲ್ಲ. ದ್ರವ ರೂಪದ ಸಿಲಿಂಡರ್ ಆಕಾರದ ಕಂಟೈನರ್ ಗಳಲ್ಲಿ ಯಾವ ಇಂಧನ, ಹಾಲು, ಅಡುಗೆ ಎಣ್ಣೆ ವ್ಯರ್ಥವಾಗುವುದಿಲ್ಲ. ಹಾಗಾಗಿ ಸಿಲಿಂಡರ್ ಆಕಾರದ ಕಂಟೈನರ್ ಗಳು ಈ ಥರದ ಪದಾರ್ಥಗಳನ್ನು ಸಾಗಾಣಿಕೆ ಮಾಡಲು ಅತ್ಯಂತ ಸೂಕ್ತ ಎಂದು ಬಿಂಬಿತವಾಗಿವೆ. ಇಷ್ಟೆಲ್ಲಾ ಸುರಕ್ಷಿತ ಕ್ರಮಗಳನ್ನು ಅನುಸರಿಸಿದರೂ ಕೆಲವೊಮ್ಮೆ ಸಿಲಿಂಡರ್ ಕಂಟೈನರ್ ಗಳು ನೆಲಕ್ಕುರುಳಿವೆ. ಅದರಲ್ಲಿ ಇರುವ ಇಂಧನ,ಹಾಲು, ಗ್ಯಾಸ್ ಧರಾಶಾಹಿಯಾಗಿವೆ. ಜನ ಅದನ್ನ ಸಂಗ್ರಹಿಸಲು ತಾ ಮುಂದು ನೀ ಮುಂದು ಎಂದು ಜಗಳವಾಡಿದ್ದನ್ನು ಸಹ ನಾವು ಸ್ಮರಿಸಬಹುದು. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Comments are closed.