Neer Dose Karnataka
Take a fresh look at your lifestyle.

ಬಿಡುಗಡೆಗೆ ಒಂದು ದಿನ ಮುಂಚೆ ಪ್ರೇಕ್ಷಕರಿಗೆ ಶಾಕಿಂಗ್ ಸುದ್ದಿಯನ್ನು ನೀಡಿದ ಸಲಗ ಹಾಗೂ ಕೋಟಿಗೊಬ್ಬ-3 ಚಿತ್ರತಂಡ. ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಅಂತೂ ಇಂತೂ ಚಿತ್ರಮಂದಿರಗಳಿಗೆ 100% ಸೀಟಿಂಗ್ ವ್ಯವಸ್ಥೆಯನ್ನು ಅಕ್ಟೋಬರ್ 1ರಿಂದ ನೀಡಲಾಗಿತ್ತು. ಆದರೆ ಈ ಸಂದರ್ಭದಲ್ಲಿ ದೊಡ್ಡ ಸಿನಿಮಾಗಳು ಯಾವುವು ಕೂಡ ಬಿಡುಗಡೆ ಆಗಿರಲಿಲ್ಲ. ಆದರೆ ಈಗ ಅಕ್ಟೋಬರ್ 14ರಂದು ಅಂದರೆ ನಾಳೆ ದುನಿಯಾ ವಿಜಯ್ ನಟನೆಯ ಸಲಗ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಕೋಟಿಗೊಬ್ಬ3 ಚಿತ್ರ ಒಂದೇ ದಿನ ಅದ್ದೂರಿಯಾಗಿ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಹೌದು ಸ್ನೇಹಿತರೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಕೋಟಿಗೊಬ್ಬ3 ಚಿತ್ರ ಈಗಾಗಲೇ ತಯಾರಾಗಿ ಮೂರು ವರ್ಷಕ್ಕೂ ಮಿಗಿಲಾಗಿತ್ತು. ಒಂದು ವರ್ಷದ ಹಿಂದೆಯೇ ಬಿಡುಗಡೆಯಾಗಬೇಕಿದ್ದ ಕೋಟಿಗೊಬ್ಬ 3 ಚಿತ್ರ ಅಂತೂ-ಇಂತೂ ಅಕ್ಟೋಬರ್ 14 ರಂದು ರಾಜ್ಯಾದ್ಯಂತ ಹಾಗೂ ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ. ಇನ್ನು ಇದೇ ದಿನ ದುನಿಯಾ ವಿಜಯ್ ನಟಿಸಿ ನಿರ್ದೇಶಿಸಿರುವ ಮಾಸ್ ಎಂಟರ್ಟೈನರ್ ಸಲಗ ಚಿತ್ರ ಕೂಡ ಬಿಡುಗಡೆಯಾಗಲಿದೆ. ಇನ್ನು ಒಂದೇ ದಿನ ಎರಡು ಸ್ಟಾರ್ ನಟರ ಚಿತ್ರಗಳು ಬಿಡುಗಡೆಯಾಗುತ್ತಿರುವುದು ಅಭಿಮಾನಿಗಳಲ್ಲಿ ಹಬ್ಬದ ವಾತಾವರಣ ಉಂಟು ಮಾಡಿದೆ.

ಇನ್ನು ನಿಂತ ನೀರಿನಂತಿದ್ದ ಕನ್ನಡ ಚಿತ್ರರಂಗಕ್ಕೆ ಚಲನೆಯ ಶಕ್ತಿಯನ್ನು ನೀಡಲು ಈ ಎರಡು ದೊಡ್ಡ ಚಿತ್ರಗಳು ಸಹಾಯಮಾಡಬಹುದು ಎಂಬ ಲೆಕ್ಕಾಚಾರ ಸಿನಿಮಾ ಪಂಡಿತರಲ್ಲಿ ಈಗಾಗಲೇ ಪ್ರಾರಂಭವಾಗಿದೆ. ಆದರೆ ಚಿತ್ರ ಬಿಡುಗಡೆಯಾಗಲು ಸನ್ನಿಹಿತವಾಗುತ್ತಿದ್ದಂತೆ ಎರಡು ಚಿತ್ರತಂಡಗಳು ಕೂಡ ಆಶ್ಚರ್ಯಕರ ಸುದ್ದಿಯನ್ನು ಹೊರಹಾಕಿದೆ. ಹೌದು ಸಲಗ ಹಾಗೂ ಕೋಟಿಗೊಬ್ಬ 3 ಎರಡೂ ಚಿತ್ರಗಳು ಕೂಡ ತಮ್ಮ ಮುಖ್ಯ ಚಿತ್ರಮಂದಿರಗಳನ್ನು ಬಿಡುಗಡೆಗೆ ಒಂದು ದಿನ ಇರುವಂತೆ ಬದಲಾಯಿಸಿಕೊಂಡಿವೆ. ಸಲಗ ಚಿತ್ರದ ಚಿತ್ರಮಂದಿರವನ್ನು ಸಂತೋಷ್ ಚಿತ್ರಮಂದಿರದಿಂದ ತ್ರಿವೇಣಿ ಚಿತ್ರಮಂದಿರಕ್ಕೆ ಬದಲಾಯಿಸಲಾಗಿದೆ. ಇನ್ನು ಕೋಟಿಗೊಬ್ಬ3 ಚಿತ್ರವನ್ನು ನರ್ತಕಿ ಚಿತ್ರಮಂದಿರದಿಂದ ಭೂಮಿಕ ಚಿತ್ರಮಂದಿರಕ್ಕೆ ಬದಲಾಯಿಸಲಾಗಿದೆ. ಇದಕ್ಕೆ ಮುಖ್ಯ ಕಾರಣ ಎರಡು ಚಿತ್ರಮಂದಿರಗಳ ಮಾಲೀಕರು ತೆರಿಗೆ ಹಣವನ್ನು ಪಾವತಿ ಮಾಡಲಿಲ್ಲ ಎಂಬ ಕಾರಣಗಳು ಕೇಳಿಬರುತ್ತಿವೆ.

Comments are closed.