Neer Dose Karnataka
Take a fresh look at your lifestyle.

ಶೀಘ್ರದಲ್ಲಿಯೇ ಆರ್ಸಿಬಿ ಯ ಹೊಸ ಕ್ಯಾಪ್ಟನ್ ಘೋಷಣೆ – ವಿರಾಟ್ ಕೊಹ್ಲಿ ಹಂಚಿಕೊಂಡ ವಿಶೇಷ ಮಾಹಿತಿ ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ ಈ ಸಲ ಕಪ್ ನಮ್ದೇ ಎಂಬ ಘೋಷಣೆಯೊಂದಿಗೆ ಆರ್ಸಿಬಿ ತಂಡ ಕ್ರಿಕೇಟ್ ಆಡುತ್ತಾ ಹಲವಾರು ವರ್ಷಗಳಿಂದ ಬಂದರೂ ಈವರೆಗೂ ಒಂದೇ ಒಂದು ಸಲ ಕಪ್ ಗೆಲ್ಲಲು ಸಾಧ್ಯವಾಗಿಲ್ಲ. ಈ ಭಾರಿ ಉತ್ತಮ ಲಯದಲ್ಲಿದ್ಲ ಆರ್ಸಿಬಿ ತಂಡ ಕಪ್ ಗೆದ್ದೇ ಗೆಲ್ಲುತ್ತದೆ ಎಂಬ ಅಭಿಮಾನಿಗಳ ಆಸೆಗೆ ಮತ್ತೆ ತಣ್ಣೀರು ಎರಚಿದೆ. ಮೊನ್ನೆ ನಡೆದ ಏಲಿಮಿನೇಟರ್ ಪಂದ್ಯದಲ್ಲಿ ಕೆಕೆಆರ್ ವಿರುದ್ದ ಹೀನಾಯವಾಗಿ ಸೋತು ಆರ್ಸಿಬಿ ಟೂರ್ನಿಯಿಂದ ನಿರ್ಗಮಿಸಿತು.

ಈ ಮೂಲಕ ನಾಯಕನಾಗಿ ವಿರಾಟ್ ಕೊಹ್ಲಿಗೆ ಇದೇ ಆರ್ಸಿಬಿ ತಂಡದ ಪರ ಕೊನೆ ಪಂದ್ಯವಾಯಿತು. ಈ ಸೀಸನ್ ನಂತರ ನಾನು ಆರ್ಸಿಬಿ ತಂಡದಲ್ಲಿ ನಾಯಕನಾಗಿ ಮುಂದುವರಿಯುವುದಿಲ್ಲ, ಬದಲಾಗಿ ಕೇವಲ ಆಟಗಾರನಾಗಿ ಮಾತ್ರ ಮುಂದುವರಿಯುತ್ತೇನೆ ಎಂದು ಈ ಹಿಂದೆಯೇ ವಿರಾಟ್ ಘೋಷಿಸಿದ್ದರು. ಪ್ರತಿ ಪಂದ್ಯದಲ್ಲಿಯೂ ನಾನು ನನ್ನ ಶೇಕಡಾ 120 ರಷ್ಟು ಸಾಮರ್ಥ್ಯವನ್ನು ಧಾರೆ ಏರೆಯಬೇಕು. ಹಾಗಿದ್ದಾಗ ಮಾತ್ರ ನಾವು ಯಶಸ್ವಿ ಆಟಗಾರನಾಗಲು ಸಾಧ್ಯ. ಆದರೇ ನಾನೀನ ನನ್ನ ಮೇಲಿನ ಅತಿಯಾದ ವರ್ಕ್ ಲೋಡ್ ನಿಂದ ಶೇ 120 ರಷ್ಟು ಸಾಮರ್ಥ್ಯವನ್ನು ಧಾರೆ ಎರೆಯಲು ಆಗುತ್ತಿಲ್ಲ. ಆ ಕಾರಣಕ್ಕೆ ಕೊಂಚ ನನ್ನ ಮೇಲಿನ ವರ್ಕಲೋಡ್ ಕಡಿಮೆ ಮಾಡಲು ನಾಯಕತ್ವದಿಂದ ಹೊರಗುಳಿಯುವುದಾಗಿ ಘೋಷಿಸಿದ್ದಾರೆ.

ಈ ನಡುವೆ ಐಪಿಎಲ್ ಆಟಗಾರರ ಸಾರ್ವತ್ರಿಕ ಹರಾಜು ಈ ಡಿಸೆಂಬರ್ ನಲ್ಲಿ ನಡೆಯುತ್ತಿದೆ. ಪ್ರತಿ ತಂಡಗಳು ಮೂವರು ಆಟಗಾರರನ್ನು ಉಳಿಸಿಕೊಳ್ಳಬಹುದು. ಹಾಗಾಗಿ ಎಬಿ ಡಿ ವಿಲಿಯರ್ಸ್, ವಿರಾಟ್ ಕೊಹ್ಲಿ ಮತ್ತು ಹರ್ಷಲ್ ಪಟೇಲ್ ರವರನ್ನ ಆರ್ಸಿಬಿ ತಂಡ ಉಳಿಸಿಕೊಳ್ಳುವ ಸಾಧ್ಯತೆ ಇದೆ‌. ಇದೇ ವೇಳೆ ನಾಯಕನ ಸ್ಥಾನಕ್ಕೆ ಕೆ.ಎಲ್.ರಾಹುಲ್ ಮೇಲೆ ಕಣ್ಣಿಟ್ಟಿರುವ ಆರ್ಸಿಬಿ ಅವರನ್ನ ಹರಾಜಿನಲ್ಲಿ ಕೊಂಡುಕೊಳ್ಳುವ ಸಾಧ್ಯತೆ ಅಧಿಕವಾಗಿದೆ. ಅದು ಸಾಧ್ಯವಾಗದಿದ್ದರೇ ಮಾತ್ರ ಎಬಿ ಡಿ ವಿಲಿಯರ್ಸ್ ರವರನ್ನ ನಾಯಕನ ಪಟ್ಟದಲ್ಲಿ ಕೂರಿಸಬಹುದು ಎಂದು ಮೂಲಗಳು ತಿಳಿಸುತ್ತಿವೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Comments are closed.