Neer Dose Karnataka
Take a fresh look at your lifestyle.

ಮಹಿಳೆಯರ ಶರ್ಟಿನಲ್ಲಿ ಬಟನ್ ಗಳು ಎಡಭಾಗದಲ್ಲಿ ಇರುತ್ತವೆ ಯಾಕೆ ಗೊತ್ತೇ?? ಕುದುರೆ ಸವರಿಗೂ ಇದಕ್ಕೂ ಸಂಬಂಧವೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಉಡುಪು ಎನ್ನುವುದು ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ಸಾಕಷ್ಟು ಪ್ರಮುಖವಾದ ಪಾತ್ರ ವನ್ನು ವಹಿಸುತ್ತದೆ. ಮನುಷ್ಯನ ಗೌರವವನ್ನು ಕಾಪಾಡುವುದರಲ್ಲಿ ಮಾತ್ರವಲ್ಲದೆ ಅವರ ವ್ಯಕ್ತಿತ್ವವನ್ನು ಬೇರೆಯವರಿಗೆ ತೋರಿಸುವುದರಲ್ಲಿ ಕೂಡ ವಸ್ತ್ರಗಳು ಸಾಕಷ್ಟು ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ.

ಇನ್ನು ಬಟ್ಟೆಗಳ ಬಗ್ಗೆ ಹೇಳುವುದಾದರೆ ಶರ್ಟ್ ಎನ್ನುವುದು ಹುಡುಗ ಹಾಗೂ ಹುಡುಗಿಗೆ ಚಿಕ್ಕವಯಸ್ಸಿನಿಂದ ಶಾಲೆಯ ಸಮವಸ್ತ್ರದಿಂದ ಹಿಡಿದು ಬೆಳೆದು ದೊಡ್ಡವರಾದ ಮೇಲೆ ಆಫೀಸಿನಲ್ಲಿ ಹಾಕಿಕೊಳ್ಳುವ ಫಾರ್ಮಲ್ ವರೆಗೂ ಕೂಡ ನಮ್ಮೊಂದಿಗೆ ಬಂದಿರುತ್ತದೆ. ಇಷ್ಟು ಮಾತ್ರವಲ್ಲದೆ ಶರ್ಟ್ ಎನ್ನುವುದು ಆ ವ್ಯಕ್ತಿಯ ವ್ಯಕ್ತಿತ್ವವನ್ನು ಇನ್ನಷ್ಟು ಪ್ರಕಾಶಮಾನವಾಗಿ ಬೇರೆಯವರಿಗೆ ತೋರಿಸುವುದರಲ್ಲಿ ಸಹಕಾರಿಯಾಗುತ್ತದೆ. ಇನ್ನು ಇಂದು ನಾವು ನಿಮಗೆ ಒಂದು ನಿಮಗೆ ಗೊತ್ತಿಲ್ಲದ ವಿಷಯವನ್ನು ಹೇಳಲು ಹೊರಟಿದ್ದೇವೆ. ಹೌದು ಸ್ನೇಹಿತರೆ ನಿಮಗೆ ಒಂದು ವಿಷಯ ಗೊತ್ತಾ ಮಹಿಳೆಯರ ಶರ್ಟ್ ನಲ್ಲಿ ಬಟನ್ ಗಳು ಎಡಭಾಗದಲ್ಲಿ ಇರುತ್ತವೆ ಅದಕ್ಕೆ ಕಾರಣ ಏನು ಎಂಬುದನ್ನು ನಾವು ನಿಮಗೆ ವಿವರವಾಗಿ ಹೇಳುತ್ತೇನೆ ತಪ್ಪದೆ ಕೊನೆಯವರೆಗೂ ಓದಿ.

ಸಮಯ ಕಳೆದಂತೆ ಪುರುಷರ ಹಾಗೆ ಹುಡುಗಿಯರು ಕೂಡ ಅವರಂತೆಯೇ ಸ್ಟೈಲ್ ಗಳನ್ನು ಬಳಸಲು ಆರಂಭಿಸಿದ್ದಾರೆ. ಇನ್ನು ಎಲ್ಲರೂ ಹೇಳುವಂತೆ ಹುಡುಗರು ಶರ್ಟ್ ಬಟನ್ ಅನ್ನು ತೆಗೆಯಲು ಬಲಕೈಯನ್ನು ಉಪಯೋಗಿಸುತ್ತಾರೆ ಹೀಗಾಗಿ ಅವರ ಶರ್ಟಿನಲ್ಲಿ ಬಟನ್ ಬಲಗಡೆ ಇರುತ್ತದೆ. ಇನ್ನು ಹುಡುಗಿಯರ ಶರ್ಟಿನ ಬಟನ್ ತೆಗೆಯಲು ಎಡಗೈಯನ್ನು ಉಪಯೋಗಿಸುತ್ತಾರೆ ಅದಕ್ಕಾಗಿ ಅವರ ಶರ್ಟಿನಲ್ಲಿ ಬಟನ್ ಎಡಗಡೆಯಲ್ಲಿ ಇರುತ್ತದೆ.

ಇನ್ನು ಕೆಲವು ವರ್ಷಗಳಾ ಹಿಂದೆ ಪರ ದೇಶಗಳಲ್ಲಿ ಮಹಿಳೆಯರು ಕುದುರೆ ಸವಾರಿ ಮಾಡುತ್ತಿರಬೇಕಾದರೆ ಎಡಗಡೆಯಲ್ಲಿ ಶರ್ಟಿನ ಬಟನ್ ನ್ನು ಇಡುತ್ತಿದ್ದರಂತೆ. ಇದಕ್ಕೆ ಪ್ರಮುಖ ಕಾರಣ ಗಾಳಿಯಿಂದ ಅವರ ಬಟ್ಟೆ ತೆರೆದುಕೊಳ್ಳದೆ ಇರಲಿ ಎಂಬುದಾಗಿ. ಇದರಿಂದಾಗಿ ಇಂದಿನ ಕಾಲದ ಶರ್ಟ್ ತಯಾರಕರು ಮಹಿಳೆಯರಿಗೆ ಎಡಗಡೆಯಲ್ಲಿ ಬಟನ್ ಅನ್ನು ನೀಡುತ್ತಾರೆ.

ಇನ್ನು ಶರ್ಟಿನಲ್ಲಿ ಬಟನ್ ಗಳು ಬೇರೆ ಮಾಡುವುದಕ್ಕೆ ನೆಪೋಲಿಯನ್ ಬೋನಾಪಾರ್ಟೆ ಕೂಡ ಕಾರಣವಾಗಿದ್ದಾನಂತೆ ಸ್ನೇಹಿತರೇ. ನೆಪೋಲಿಯನ್ ಬೋನಾಪಾರ್ಟೆ ತನ್ನ ಬಲಗಯ್ಯನ್ನು ತನ್ನ ಶರ್ಟಿನ ಒಳಗಡೆ ಇಟ್ಟುಕೊಳ್ಳಲು ಸಾಕಷ್ಟು ಇಷ್ಟಪಡುತ್ತಿದ್ದ ಹೀಗಾಗಿ ಅದಕ್ಕೆ ತಕ್ಕಂತೆ ವಸ್ತ್ರವನ್ನು ವಿನ್ಯಾಸವನ್ನು ಕೂಡ ಮಾಡಿಸಿಕೊಂಡಿದ್ದ. ನೆಪೋಲಿಯನ್ ಬೋನಾಪಾರ್ಟಿ ಯ ಈ ಹೊಸ ಸ್ಟೈಲು ನೋಡಿದಂತಹ ಫ್ರಾನ್ಸಿನ ಮಹಿಳೆಯರು ಅವನಂತೆಯೇ ಕೈಯನ್ನು ಶರ್ಟಿನ ಒಳಗೆ ಹಾಕಿಕೊಂಡು ತಿರುಗಾಡಲು ಪ್ರಾರಂಭಿಸಿದರು. ಇದನ್ನು ಕಂಡು ಕೋಪಗೊಂಡ ನೆಪೋಲಿಯನ್ ಬೋನಾಪಾರ್ಟೆ ಇನ್ನುಮುಂದೆ ಹೆಂಗಸರ ಶರ್ಟ್ ನ ಬಟನ್ ಎಡಗಡೆಗೆ ಇರಬೇಕೆಂಬುದರ ಕುರಿತಂತೆ ಆದೇಶಿಸುತ್ತಾನೆ. ಇದಕ್ಕಾಗಿ ಅಂದಿನಿಂದ ಹೆಂಗಸರ ಶರ್ಟಿನ ಬಟನ್ ಅನ್ನು ಎಡಗಡೆಗೆ ಹಾಕಲಾಗುತ್ತದೆ ಎಂಬುದಾಗಿ ಹೇಳಲಾಗುತ್ತಿದೆ.

ಇನ್ನು ಈ ಹಿಂದೆ ಸ್ತ್ರೀಯರು ಮಕ್ಕಳನ್ನು ಎಡಗಡೆಯಲ್ಲಿ ತಿಳಿದುಕೊಳ್ಳುತ್ತಿದ್ದಾರೆ ಅದಕ್ಕಾಗಿ ಅವರಿಗೆ ಶರ್ಟಿನಲ್ಲಿ ಎಡಗಡೆಗೆ ಬಟನ್ ಅನ್ನು ಹಾಕಲಾಗುತ್ತದೆ ಇದರಿಂದಾಗಿ ಅವರು ಮಕ್ಕಳಿಗೆ ಎಡಗಡೆಯಲ್ಲಿ ಸ್ತನಪಾನ ವನ್ನು ಮಾಡಲು ಸುಲಭವಾಗುತ್ತದೆ ಎಂಬ ಕಾರಣಕ್ಕಾಗಿ. ನಾವು ಹೇಳಿರುವ ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳು ಏನೆಂಬುದನ್ನು ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Comments are closed.