Neer Dose Karnataka
Take a fresh look at your lifestyle.

ರೌಡಿ ಬೇಬಿಯ ಸೌಂದರ್ಯದ ಗುಟ್ಟು ರಟ್ಟು; ತನ್ನ ಸಹಜ ಸೌಂದರ್ಯದ ಬಗ್ಗೆ ಮಾತನಾಡಿದ ನಟಿ ಸಾಯಿ ಪಲ್ಲವಿ.

ನಮಸ್ಕಾರ ಸ್ನೇಹಿತರೇ ಸಿನಿಮಾಗಳು ಯಾವ ಭಾಷೆಯದ್ದೇ ಆಗಿರಲಿ, ಸಿನಿಮಾದಲ್ಲಿ ಅದೆಷ್ಟೇ ಕಲಾವಿದರು ಅಭಿನಯಿಸಲಿ, ಆದರೆ ನಮ್ಮ ಮನಸ್ಸಿನಲ್ಲಿ ಉಳಿಯುವುದು ಮಾತ್ರ ಕೆಲವೇ ಕೆಲವು ಮಂದಿ. ಕೆಲವು ಕಲಾವಿದರು ದೇಶದಾದ್ಯಂತ ತಮ್ಮ ಅಭಿಮಾನಿಗಳನ್ನು ಗಳಿಸಿಕೊಂಡಿರುತ್ತಾರೆ. ಅಂಥವರಲ್ಲಿ ನಟಿ ಸಾಯಿ ಪಲ್ಲವಿ ಪ್ರಮುಖ ಸ್ಥಾನದಲ್ಲಿದ್ದಾರೆ ಎನ್ನಬಹುದು.

ನಟಿ ಸಾಯಿ ಪಲ್ಲವಿ ಅತ್ಯಂತ ನೈಜ ನಟನೆಯ ಮೂಲಕ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುವಂಥವರು. ಸಾಮಾನ್ಯವಾಗಿ ಮಲಯಾಳಂ ಸಿನಿಮಾಗಳಲ್ಲಿ ನೀವು ನೋಡಿರಬಹುದು. ನಾಯಕಿಯರಿಗೆ ಉಳಿದ ಭಾಷೆಯ ಚಿತ್ರಗಳಲ್ಲಿ ಮಾಡಿದಂಥ ಅತಿಯಾದ ಮೇಕಪ್ ಇರುವುದಿಲ್ಲ. ಸಹಜತೆಯೇ ಮಲಯಾಳಂ ಸಿನಿಮಾ ಸಕ್ಸೆಸ್ ಗೆ ಒಂದು ಪ್ರಮುಖ ಕಾರಣ ಕೂಡ. ಹಾಗೆ ಮಲಯಾಳಂ ತಮಿಳು ತೆಲಗು ಎಲ್ಲಾ ಭಾಷೆಗಳಲ್ಲಿಯೂ ನಟಿಸುತ್ತಿರುವ, ದಕ್ಷಿಣ ಭಾರತದ ಚಿತ್ರರಂಗದ ಇಂದಿನ ಬ್ಯುಸಿ ನಟಿ ಸಾಯಿ ಪಲ್ಲವಿ ಸಹಜ ಸುಂದರಿ.

ಸಾಯಿ ಪಲ್ಲವಿಯ ’ಪ್ರೇಮಂ’ ಚಿತ್ರದ ಮಲ್ಹಾರ್ ಪಾತ್ರವನ್ನು ಯಾರೂ ಮರೆಯಲು ಸಾಧ್ಯವೇ ಇಲ್ಲ. ಇನ್ನು ನಟ ಧನುಷ್ ಜೊತೆ ರೌಡಿ ಬೇಬಿಯಾಗಿ ಪಡ್ಡೆ ಹುಡುಗರ ಹೃದಯ ಕದ್ದವರು ಇವರು. ನಟಿ ಸಾಯಿ ಪಲ್ಲವಿ ತಾನು ನಯನ ತಾರಾ ತರ ಅತ್ಯುತ್ತಮ ನಟಿ ಎನ್ನಿಸಿಕೊಳ್ಳಬೇಕು ಎಂದು ಒಮ್ಮೆ ತಮ್ಮ ಅಪೇಕ್ಷೆಯನ್ನು ಹೇಳಿಕೊಂಡಿದ್ದರು. ಇನ್ನು ಸಾಯಿ ಪಲ್ಲವಿ ಚಿತ್ರದಲ್ಲಿ ಅತಿಯಾದ ಮೇಕಪ್, ಕೂದಲಿಗೆ ವಿಶೇಷವಾದ ಅಲಂಕಾರ ಮಾಡಿಕೊಳ್ಳದೆ ಸಹಜವಾಗಿಯೇ ನಟಿಸಿ ನಟನೆಯಲ್ಲಿ ಸೈ ಎನಿಸಿಕೊಂಡಿದ್ದಾರೆ.

ಇಷ್ಟು ಮುದ್ದಾಗಿರುವ ಹುಡುಗಿಯ ಸೌಂದರ್ಯದ ಗುಟ್ಟು ಏನಿರಬಹುದು ಎಂದು ಅದೆಷ್ಟೋ ಹುಡುಗಿಯರು ಅವರನ್ನು ಕೇಳಿದ್ದಿದೆ. ಇದಕ್ಕೆ ಅವರು ಉತ್ತರಿದ್ದಾರೆ. ಸಾಯಿ ಪಲ್ಲವಿ ಒಬ್ಬ ನಟಿ ಮಾತ್ರವಲ್ಲ ವೈದ್ಯೆ ಕೂಡ, ಸಿನಿಮಾದ ಹೊರತಾಗಿ ವೈದ್ಯ ವೃತ್ತಿಯನ್ನೂ ಕೂಡ ನಿಭಾಯಿಸುವ ಇವರ ಸೌಂದರ್ಯದ ಗುಟ್ಟು ಆರೋಗ್ಯಕರ ಆಹಾರ ಸೇವನೆ! ’ತಾವು ಯಾವುದೇ ರಾಸಾಯನಿಕ ಪದಾರ್ಥಗಳನ್ನು ಕೂದಲಿಗಾಗಲಿ ತ್ವಚೆಗಾಗಲೀ ಬಳಸುವುದಿಲ್ಲ, ನೈಸರ್ಗಿಕವಾಗಿ ಸಿಗುವಂಥದ್ದನ್ನೇ ಬಳಸುತ್ತೇನೆ. ತನ್ನ ದೇಹದ ಬಾಹ್ಯ ಹಾಗೂ ಆತರಿಕ ಸೌಂದರ್ಯವನ್ನು ಹೆಚ್ಚಿಸುವಂತ ಆರೋಗ್ಯಕರ ಆಹಾರವನ್ನೇ ಸೇವಿಸುತ್ತೇನೆ’ ಎಂದಿದ್ದಾರೆ.. ಇನ್ನು ಈಗಾಗಲೇ ಇವರ ಅಭಿಮಾನಿಗಳು ಈ ಸಿಕ್ರೆಟ್ ಅನುಸರಿಸಲೂ ಮುಂದಾಗಿದ್ದಾರೆ.

ಸಾಯಿ ಪಲ್ಲವಿ ಸದ್ಯ ಬಹು ಬೇಡಿಕೆಯ ನಟಿಯಾಗಿದ್ದು ’ರಾಣಾ ದಗ್ಗುಬಾಟಿ ಜೊತೆ ತೆಲುಗಿನಲ್ಲಿ ’ವಿರಾಟ ಪರ್ವಂ ಹಾಗೂ ನಾನಿ ಜೊತೆ ’ಶ್ಯಾಮ್ ಸಿಂಗ್ ರಾಯ್’ ಪ್ರಾಜೆಕ್ಟ್ ನಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ತೆಲುಗು ಸೂಪರ್ ಸ್ಟಾರ್ ನಾಗ ಚೈತನ್ಯ ಅವರ ಜೊತೆ ’ಲವ್ ಸ್ಟೋರಿ’ ಚಿತ್ರದ ಸಕ್ಸೆಸ್ ನ್ನು ಆನಂದಿಸುತ್ತಿದ್ದಾರೆ ನಟಿ ಸಾಯಿ ಪಲ್ಲವಿ.

Comments are closed.