Neer Dose Karnataka
Take a fresh look at your lifestyle.

ದರ್ಶನ್ ಒಂದು ಮನಸ್ಸು ಮಾಡಿದ್ದರೇ ಕೋಟಿಗೊಬ್ಬ ಬಿಡುಗಡೆಯಾಗುತ್ತಿತ್ತು, ಈಗಲೂ ಅಷ್ಟೇ ದರ್ಶನ್, ಸುದೀಪ್ ಹೀಗೆ ಮಾಡಿದರೆ ಸಾಕು.

31

ನಮಸ್ಕಾರ ಸ್ನೇಹಿತರೇ ನಿಮಗೆಲ್ಲ ತಿಳಿದಿರುವಂತೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಬಹುನಿರೀಕ್ಷಿತ ಕೋಟಿಗೊಬ್ಬ3 ಚಿತ್ರ ಬಿಡುಗಡೆಯಾಗುವ ದಿನಾಂಕಕ್ಕಿಂತ ಒಂದು ದಿನ ಲೇಟಾಗಿ ಬಿಡುಗಡೆಯಾಗಿತ್ತು. ಹೌದು ಸ್ನೇಹಿತರೆ ಮತ್ತೊಬ್ಬ 14ರಂದು ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಸೂರಪ್ಪ ಬಾಬು ನಿರ್ಮಾಣದ ಶಿವ ಕಾರ್ತಿಕ್ ನಿರ್ದೇಶನದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಾಯಕ ನಟನಾಗಿ ನಟಿಸಿರುವ ಕೋಟಿಗೊಬ್ಬ3 ಚಿತ್ರ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗ ಬೇಕಾಗಿತ್ತು.

ಆದರೆ ನಿರ್ಮಾಪಕ ಸೂರಪ್ಪ ಬಾಬು ಹೇಳುವಂತೆ ಚಿತ್ರವನ್ನು ನಿಲ್ಲಿಸಲು ಸಾಕಷ್ಟು ಶಕ್ತಿಗಳು ಷಡ್ಯಂತ್ರ ರೂಪಿಸಿವೆ. ಹೀಗಾಗಿ ಒಂದು ದಿನ ಲೇಟಾಗಿ ಚಿತ್ರಮಂದಿರಗಳಲ್ಲಿ ಕೋಟಿಗೊಬ್ಬ3 ಚಿತ್ರ ಬಿಡುಗಡೆಯಾಗಿತ್ತು. ರಾಜ್ಯಾದ್ಯಂತ ಚಿತ್ರ ಯಶಸ್ವಿಯಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಪ್ರದರ್ಶನ ಕಾಣುತ್ತಿದ್ದರೂ ಕೂಡ ದೊಡ್ಡ ಸ್ಟಾರ್ ಚಿತ್ರಕ್ಕೆ ಈ ತರಹದ ಅಡಚಣೆ ಬಂದಿರುವುದು ಖಂಡಿತವಾಗಿಯೂ ಯೋಚನೆ ಮಾಡುವಂತಹ ವಿಷಯವಾಗಿದೆ.

ಇನ್ನು ಈ ಹಿಂದೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಜೊತೆಯಾಗಿ ಕುಚಿಕು ಗಳಂತೆ ಸ್ನೇಹಿತರಾಗಿದ್ದ ಅಂತಹ ಸಮಯದಲ್ಲಿ ಇಂತಹ ಕಾರ್ಯಗಳು ಇವರಿಬ್ಬರ ಚಿತ್ರಗಳಿಗೂ ಕೂಡ ಆಗಿರಲಿಲ್ಲ. ಆದರೆ ಈಗ ಕಿಚ್ಚ ಸುದೀಪ್ ರವರ ಚಿತ್ರಗಳಿಗೆ ಬ್ಯಾಕ್ ಟು ಬ್ಯಾಕ್ ಹೀಗೆ ಆಗುತ್ತಿರುವುದು ಅಭಿಮಾನಿಗಳು ಇದರ ಕುರಿತಂತೆ ಡಿ ಬಾಸ್ ಹಾಗೂ ಕಿಚ್ಚ ಜೊತೆಗೆ ಇದ್ದರೆ ಅವರ ಕುರಿತಂತೆ ಮಾತನಾಡುವ ಧೈರ್ಯ ಯಾರಿಗೂ ಇರುತ್ತಿರಲಿಲ್ಲ ಎಂಬುದಾಗಿ ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ ಮತ್ತೊಮ್ಮೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮತ್ತೊಮ್ಮೆ ಸ್ನೇಹಿತರಾಗಿ ಒಂದಾಗುವಂತೆ ಅಭಿಪ್ರಾಯಪಟ್ಟಿದ್ದಾರೆ ಅವರ ಅಭಿಮಾನಿಗಳು. ಈ ವಿಚಾರದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Leave A Reply

Your email address will not be published.