Neer Dose Karnataka
Take a fresh look at your lifestyle.

ಈ ಬಾರಿಯ ಟಿ ಟ್ವೆಂಟಿ ವರ್ಲ್ಡ್ ಕಪ್ ನಲ್ಲಿ ಆಡಲಿರುವ ಆರ್ಸಿಬಿ ತಂಡದ ಒಂಬತ್ತು ಆಟಗಾರರು ಯಾರ್ಯಾರು ಗೊತ್ತೇ??

7

ನಮಸ್ಕಾರ ಸ್ನೇಹಿತರೇ ಐಪಿಎಲ್ ಈಗಾಗಲೇ ಮುಗಿದಿದ್ದು ಇನ್ನೇನಿದ್ದರೂ ಟಿ ಟ್ವೆಂಟಿ ವರ್ಲ್ಡ್ ಕಪ್ ಹವಾ ಸದ್ಯದಲ್ಲೇ ಶುರುವಾಗಲಿದೆ. ಇನ್ನು t20 ವರ್ಲ್ಡ್ ಕಪ್ ನಲ್ಲಿ ಈಗಾಗಲೇ ಹಲವಾರು ಆಟಗಾರರಿಗೆ ಐಪಿಎಲ್ ನಿಂದ ಒಳ್ಳೆಯ ಪ್ರಾಕ್ಟಿಸ್ ಸಿಕ್ಕಿದ್ದು ಒಳ್ಳೆಯ ಪ್ರದರ್ಶನ ನೀಡುವ ನಿರೀಕ್ಷೆಯನ್ನು ಹೊಂದಿದ್ದಾರೆ. ಈಗ ಬರುತ್ತಿರುವ ಸುದ್ದಿಯ ಪ್ರಕಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಒಂಬತ್ತು ಆಟಗಾರರು ಈ ಬಾರಿಯ t20 ವರ್ಲ್ಡ್ ಕಪ್ ನಲ್ಲಿ ಭಾಗವಹಿಸಲಿದ್ದಾರೆ.

ಹಾಗಿದ್ದರೆ ಆ ಒಂಬತ್ತು ಆಟಗಾರರು ಯಾರು ಹಾಗೂ ಯಾವ್ಯಾವ ತಂಡ ಗಳಿಗಾಗಿ ಆಡುತ್ತಿದ್ದಾರೆ ಎಂಬುದರ ಕುರಿತಂತೆ ನಾವು ನಿಮಗೆ ವಿವರವಾಗಿ ಹೇಳುತ್ತೇನೆ ಬನ್ನಿ. 20 ಓವರ್ ಗಳ ವಿಶ್ವಕಪ್ ಪಂದ್ಯಾವಳಿಯಲ್ಲಿ ಆರ್ಸಿಬಿ ತಂಡದ ಒಂಬತ್ತು ಆಟಗಾರರು ಬೇರೆ ಬೇರೆ ದೇಶಗಳಿಗೆ ಆಡಲಿದ್ದಾರೆ ಅವರ ಕುರಿತಂತೆ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ. ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕಪ್ತಾನ ಆಗಿರುವ ವಿರಾಟ್ ಕೊಹ್ಲಿ ಅವರು ಈ ಬಾರಿ ಭಾರತ ದೇಶದ ಕಪ್ತಾನನಾಗಿ ಟಿ ಟ್ವೆಂಟಿ ವರ್ಲ್ಡ್ ಕಪ್ ನಲ್ಲಿ ಭಾಗವಹಿಸಲಿದ್ದಾರೆ. ಕೆ ಜಮಿಸನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವೇಗಿಯಾಗಿರುವ ಕೈಲ್ ಜೇಮೀಸನ್ ನ್ಯೂಜಿಲೆಂಡ್ ತಂಡದ ಪರವಾಗಿ ಆಡಲಿದ್ದಾರೆ. ಗ್ಲೆನ್ ಮ್ಯಾಕ್ಸ್ವೆಲ್ ಗ್ಲೆನ್ ಮ್ಯಾಕ್ಸ್ವೆಲ್ ಆಸ್ಟ್ರೇಲಿಯ ತಂಡದ ಪರವಾಗಿ ಕಣಕ್ಕಿಳಿಯಲಿದ್ದಾರೆ.

ದುಶ್ಮನ್ತ್ ಚಮೀರಾ ದುಶ್ಮನ್ತ್ ಚಮೀರ ಶ್ರೀಲಂಕಾ ತಂಡದ ಪರವಾಗಿ ಆಡಲಿದ್ದಾರೆ. ವನಿಂದು ಹಸಿರಂಗ ಇವರು ಕೂಡ ಶ್ರೀಲಂಕಾ ತಂಡದ ಪರವಾಗಿ t20 ವರ್ಲ್ಡ್ ಕಪ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಡೇನಿಯಲ್ ಕ್ರಿಶ್ಚಿಯನ್ ಆಸ್ಟ್ರೇಲಿಯಾ ತಂಡದ ಪರವಾಗಿ ಆಲ್ರೌಂಡರ್ ವಿಭಾಗದಲ್ಲಿ ಕಣಕ್ಕಿಳಿಯಲಿದ್ದಾರೆ. ಡೇನಿಯಲ್ ಸ್ಯಾಮ್ಸ್ ಇವರು ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಕಾಣಿಸಿಕೊಂಡಿದ್ದು ಆಸ್ಟ್ರೇಲಿಯಾ ಪರವಾಗಿ ಆಡಲಿದ್ದಾರೆ. ಕೇನ್ ರಿಚರ್ಡ್ಸನ್ ಆಸ್ಟ್ರೇಲಿಯ ತಂಡದ ವೇಗದ ಬೌಲರ್ ಕೇನ್ ರಿಚರ್ಡ್ಸನ್ ಬಾರಿ ಕೂಡ ವಿಶ್ವಕಪ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆಡಮ್ ಜಂಪ ಆಸ್ಟ್ರೇಲಿಯಾ ತಂಡದ ಯಶಸ್ವಿ ಸ್ಪಿನ್ನರ್ ಆಗಿರುವ ಆಡಂ ಜಂಪ ಈ ಬಾರಿ ಪ್ಲೇಯಿಂಗ್ 11ರಲ್ಲಿ ಕಾಣಿಸಿಕೊಳ್ಳುವುದು ಖಂಡಿತ.

Leave A Reply

Your email address will not be published.