Neer Dose Karnataka
Take a fresh look at your lifestyle.

ನಟ ಧನುಶ್ ರವರ ಚೆನ್ನೈನಲ್ಲಿ ನಿರ್ಮಾಣವಾಗುತ್ತಿರುವ ಹೊಸ ಮನೆಯ ಬಜೆಟ್ ಎಷ್ಟು ಗೊತ್ತಾ?? ಒಂದು ಪಾನ್ ಇಂಡಿಯಾ ಸಿನೆಮಾನೇ ಮಾಡಬಹುದು.

ನಮಸ್ಕಾರ ಸ್ನೇಹಿತರೇ ಖ್ಯಾತ ತಮಿಳು ನಿರ್ದೇಶಕನ ಮಗನಾಗಿದ್ದರೂ ಕೂಡ ತಮಿಳು ನಟ ಧನುಷ್ ರವರು ತಮ್ಮ ಸ್ವಂತ ಪ್ರತಿಭೆ ಹಾಗೂ ಪರಿಶ್ರಮದ ಮೂಲಕ ಭಾರತ ಚಿತ್ರರಂಗದ ಅತ್ಯಂತ ಅಭಿಮಾನಿಗಳನ್ನು ಹೊಂದಿರುವ ನಟರಲ್ಲಿ ಒಬ್ಬರಾಗಿದ್ದಾರೆ. ಇನ್ನು ನಟ ಧನುಷ್ ಅವರು ಈಗಾಗಲೇ ತಮಿಳು ಚಿತ್ರರಂಗದಲ್ಲಿ ನಟನೆ ಮಾಡುವ ಮೂಲಕ ತಮ್ಮ ಅಭಿನಯ ಹಾಗೂ ವಿವಿಧ ಮ್ಯಾನರಿಸಂ ಮೂಲಕ ಕೋಟ್ಯಾಂತರ ಅಭಿಮಾನಿಗಳ ನೆಚ್ಚಿನ ನಟನಾಗಿದ್ದಾರೆ.

ಇನ್ನು ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ಎಂದೇ ಖ್ಯಾತರಾಗಿರುವ ರಜನಿಕಾಂತ್ ಅವರ ಅಳಿಯನಾಗಿದ್ದ ಕೂಡ ತಮ್ಮ ಸಿನಿಮಾ ಜೀವನದ ಪ್ರಗತಿಗಾಗಿ ತಮ್ಮ ಸ್ವಂತ ಪರಿಶ್ರಮ ಹಾಗೂ ಪ್ರತಿಭೆಯನ್ನು ಉಪಯೋಗಿಸಿಕೊಂಡಿದ್ದಾರೆ. ಇನ್ನು ಇತ್ತೀಚೆಗೆ ಹಾಲಿವುಡ್ ಚಿತ್ರವಾಗಿರುವ ಗ್ರೇ ಮ್ಯಾನ್ ನಲ್ಲಿ ಕೂಡ ನಟಿಸಿ ಬಂದಿದ್ದಾರೆ. ಬಾಲಿವುಡ್ನಲ್ಲಿ ಅಕ್ಷಯ್ ಕುಮಾರ್ ನಟನೆಯ ಅತರಂಗಿರೆ ಚಿತ್ರದಲ್ಲಿ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ‌. ಇನ್ನು ಒಂದು ಪ್ಯಾನ್ ಇಂಡಿಯಾ ಚಿತ್ರಕ್ಕೆ ಕೂಡ ಸಹಿ ಹಾಕಿದ್ದಾರೆ. ಪ್ರತಿ ಚಿತ್ರಕ್ಕೆ ನಟ ಧನುಶ್ ರವರು ನಲವತ್ತರಿಂದ ಐವತ್ತು ಕೋಟಿ ಸಂಭಾವನೆಯನ್ನು ಪಡೆಯುತ್ತಾರೆ ಎಂಬುದಾಗಿ ತಮಿಳು ಸುದ್ದಿಮಾಧ್ಯಮಗಳು ಈಗಾಗಲೇ ಪ್ರಸಾರ ಮಾಡಿದೆ.

ಇನ್ನು ಇದೇ ಹಿನ್ನೆಲೆಯಲ್ಲಿ ಧನುಶ್ ಅವರು ಚೆನ್ನೈನ ಪೊಯೇಸ್ ಗಾರ್ಡನ್ನಲ್ಲಿ ಹೊಸ ಮನೆಯ ಭೂಮಿಪೂಜೆಯನ್ನು ಕೂಡ ಈಗಾಗಲೇ ಇದೇ ತಿಂಗಳು ಫೆಬ್ರವರಿಯಲ್ಲಿ ಮಾಡಿದ್ದರು. ಹೌದು ಸ್ನೇಹಿತರೆ ಧನುಷ್ ಯವರ ಹೊಸಮನೆ 150 ಕೋಟಿ ಬಜೆಟ್ ನಲ್ಲಿ ನಿರ್ಮಾಣಗೊಳ್ಳುತ್ತಿದೆ. ಈ ಮನೆಯ ಭೂಮಿ ಪೂಜೆಗಾಗಿ ಈಗಾಗಲೇ ರಜನಿಕಾಂತ್ ಅವರು ಕೂಡ ಬಂದಿದ್ದರು. 19 ಸಾವಿರ ಚದರ ಅಡಿಯ ವಿಸ್ತೀರ್ಣದಲ್ಲಿ ಮೂಡಿಬರುತ್ತಿರುವ ಈ ಮನೆಯ ನಾಲ್ಕು ಅಂತಸ್ತನ್ನು ಹೊಂದಿರಲಿದೆ. ಎಲ್ಲದಕ್ಕಿಂತ ಮುಖ್ಯವಾಗಿ ಮನೆ ರಜನಿಕಾಂತ ರವರ ಮನೆಯ ಕೂಗಳತೆಯ ದೂರದಲ್ಲಿದೆ. ಇತ್ತೀಚಿಗೆ ಧನುಷ್ ನಟನೆ ಎಲ್ಲಾ ಚಿತ್ರಗಳು ಕೂಡ ಸೂಪರ್ ಸಕ್ಸಸ್ ಅನ್ನು ಪಡೆದಿದ್ದಾವೆ. ಹೀಗಾಗಿ ಧನುಶ್ ರವರು 150 ಕೋಟಿ ವೆಚ್ಚದ ಮನೆಯನ್ನು ನಿರ್ಮಿಸುತ್ತಿರುವುದು ಆಶ್ಚರ್ಯಕರ ವಿಷಯವೇನೂ ಅಲ್ಲ ಬಿಡಿ. ಮುಂದಿನ ದಿನಗಳಲ್ಲಿ ಈ ಮನೆಯ ಬಜೆಟ್ ಹೆಚ್ಚಾದರೂ ಕೂಡ ಆಗಬಹುದು.

Comments are closed.