Neer Dose Karnataka
Take a fresh look at your lifestyle.

ಪಾರ್ವತಮ್ಮನವರ ಕುರಿತಂತೆ ರಾಘಣ್ಣನಿಗೆ ಕೊನೆಯ ಬಾರಿ ಫೋನ್ ಮಾಡಿದಾಗ ಏನು ಎಂದಿದ್ದರು ಗೊತ್ತಾ ನಮ್ಮ ವಿಷ್ಣು ದಾದಾ??

7

ನಮಸ್ಕಾರ ಸ್ನೇಹಿತರೇ ನಮ್ಮ ಕನ್ನಡ ಚಿತ್ರರಂಗದ ಎರಡು ಕಣ್ಣುಗಳು ಎಂದಾಗ ನಮಗೆ ನೆನಪಾಗುವುದು ನಟ ಸಾರ್ವಭೌಮ ಡಾ ರಾಜಕುಮಾರ್ ಹಾಗೂ ಅಭಿನಯ ಭಾರ್ಗವ ಸಾಹಸ ಸಿಂಹ ವಿಷ್ಣುವರ್ಧನ್ ರವರು. ಸುದ್ದಿ ಮಾಧ್ಯಮಗಳು ಹಾಗೂ ಕೆಲ ಅಭಿಮಾನಿಗಳು ಅವರಿಬ್ಬರ ಸಂಬಂಧವನ್ನು ಎಷ್ಟೇ ಕೆಟ್ಟದಾಗಿ ಬಣ್ಣಿಸಿದರು ಕೂಡ ಅವರಿಬ್ಬರ ನಡುವೆ ಸಾಕಷ್ಟು ಸಹೋದರತ್ವದ ಸಂಬಂಧ ಸದಾ ಕಾಲ ಹಸಿರಾಗಿ ಉಳಿದಿತ್ತು.

ಇನ್ನು ಕೇವಲ ರಾಜಕುಮಾರ್ ರವರು ಮಾತ್ರವಲ್ಲದೆ ಅವರ ಪತ್ನಿಯಾಗಿರುವ ಪಾರ್ವತಮ್ಮವರು ಕೂಡ ವಿಷ್ಣುವರ್ಧನ್ ರವರ ಕುರಿತಂತೆ ಒಳ್ಳೆಯ ಭಾವನೆಯನ್ನು ಹೊಂದಿದ್ದರು ಹಾಗೂ ಅವರಿಗೆ ಸದಾ ಒಳ್ಳೆಯದನ್ನೇ ಬಯಸುತ್ತಿದ್ದರು. ಅದಕ್ಕೆ ಒಂದು ಒಳ್ಳೆಯ ಉದಾಹರಣೆಯೆಂದರೆ ಒಮ್ಮೆ ಬನ್ನೇರುಘಟ್ಟದಲ್ಲಿ ಕಾರ್ಯಕ್ರಮ ನಡೆದಾಗ ವಿಷ್ಣುವರ್ಧನ್ ಹಾಗೂ ರಾಜಕುಮಾರ್ ಕುಟುಂಬ ಎರಡು ಕೂಡ ಭಾಗವಹಿಸಿದ್ದರು. ಆ ಸಂದರ್ಭದಲ್ಲಿ ಪಾರ್ವತಮ್ಮನವರು ಚಳಿಯಲ್ಲಿ ನಡುಗುತ್ತಿದ್ದರು. ಇದನ್ನು ನೋಡಿದ ವಿಷ್ಣುವರ್ಧನ್ ಅವರು ಕೂಡಲೇ ತಮ್ಮ ಕಾರ್ ಬಳಿ ಓಡಿ ತಮ್ಮ ಶಾಲನ್ನು ತಂದು ಪಾರ್ವತಮ್ಮನವರಿಗೆ ನೀಡಿ ಚಳಿಯಾಗುತ್ತಿದೆ ನಿಮಗೆ ಇದನ್ನು ಹೊದ್ದುಕೊಳ್ಳಿ ಎಂಬುದಾಗಿ ಹೇಳುತ್ತಾರೆ.

ಇದನ್ನು ಸಂದರ್ಶನವೊಂದರಲ್ಲಿ ಕೂಡ ಪಾರ್ವತಮ್ಮನವರು ಹೇಳಿ ವಿಷ್ಣುವರ್ಧನ್ ರವರ ಗುಣಗಾನವನ್ನು ಮಾಡಿದರು. ಇನ್ನು ಇಷ್ಟು ಮಾತ್ರವಲ್ಲದೆ ವಿಷ್ಣುವರ್ಧನ್ ರವರ ಕೂಡ ರಾಜಣ್ಣನವರಿಗೆ ತಮ್ಮ ಕೊನೆಯ ಸಂದರ್ಭಗಳಲ್ಲಿ ಕರೆ ಮಾಡಿದಾಗ ಪಾರ್ವತಮ್ಮನವರನ್ನು ಚೆನ್ನಾಗಿ ನೋಡಿಕೊಳ್ಳಿ ಅವರು ಚೆನ್ನಾಗಿದ್ದರೆ ನಾವೆಲ್ಲರೂ ಚೆನ್ನಾಗಿರುತ್ತವೆ ಎಂಬುದಾಗಿ ಹೇಳಿದ್ದರಂತೆ. ಇನ್ನು ವಿಷ್ಣುವರ್ಧನ್ ರವರು ಕೊನೆ ಉಸಿರು ಹೇಳಿದ ಸಂದರ್ಭದಲ್ಲಿ ಕೂಡ ಅವರ ಮನೆಗೆ ಪಾರ್ವತಮ್ಮನವರು ಬಂದು ಭಾರತಿ ವಿಷ್ಣುವರ್ಧನ್ ಅವರಿಗೆ ಸಮಾಧಾನ ಮಾಡಿ ಹೋಗಿದ್ದರಂತೆ. ಇದು ರಾಜಕುಮಾರ್ ಹಾಗೂ ವಿಷ್ಣುವರ್ಧನ್ ಕುಟುಂಬಗಳು ಹೊಂದಿದಂತಹ ಉತ್ತಮ ಬಾಂಧವ್ಯದ ಪ್ರತೀಕ ಎಂದು ಹೇಳಬಹುದಾಗಿದೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆಯನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

Leave A Reply

Your email address will not be published.